ಬೆಂಗಳೂರು: ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸ್ಕೂಟರ್‌ನಲ್ಲಿ ಚಾಲಕನನ್ನು ಎಳೆದೊಯ್ದ ಪ್ರಕರಣದಲ್ಲಿ ಗಾಯಾಳು ಮುತ್ತಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಸದ್ಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿರುವ ಗೋವಿಂದರಾಜ ನಗರ ಪೊಲೀಸರು ಗಾಯಾಳು ಮುತ್ತಪ್ಪ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
KA02MN2574 ನಂಬರ್‌ನ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದ ಮುತ್ತಪ್ಪ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮುಖಾಂತರ ರಾಜಾಜಿನಗರ ಕಡೆಯಿಂದ ಟೋಲ್ ಗೇಟ್ ಅಂಡರ್ ಬ್ರಿಡ್ಜ್ ಕಡೆ ಬರುತ್ತಿದ್ದರು. ಈ ವೇಳೆ ಮುತ್ತಪ್ಪ ಅವರಿಗೆ ಕರೆಯೊಂದು ಬಂದಿದ್ದು, ವಾಹನ ರಸ್ತೆಬದಿ ನಿಲ್ಲಿಸಿ ಇಳಿದು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಸುಜುಕಿ ಆಕ್ಸಿಸ್ ಚಲಾಯಿಸುತ್ತಾ ಸಾಹಿಲ್ ಎಂಬಾತ ಗಾಡಿ ಹಿಂಬದಿಯಿಂದ ಬಂದು ಬೊಲೆರೋ ವಾಹನಕ್ಕೆ ಗುದ್ದಿದ್ದ. ಬಳಿಕ ಗಾಡಿ ನಿಲ್ಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ತಕ್ಷಣ ಸ್ಕೂಟರ್‌ನ ಹಿಂಭಾಗವನ್ನು ಮುತ್ತಪ್ಪ ಹಿಡಿದುಕೊಂಡಿದ್ದರು. ಆದರೂ ನಿಲ್ಲಿಸದೇ ಸಾಹಿಲ್ ಸ್ಪೀಡಾಗಿ ವಾಹನ ಚಲಾಯಿಸಿದ್ದ. ನಿಲ್ಲಿಸಪ್ಪ ಎಂದು ಪರಿಪರಿಯಾಗಿ ಬೇಡಿಕೊಂಡರೂ ನಿಲ್ಲಿಸದೇ ಅಮಾನುಷ ವರ್ತನೆ ತೋರಿದ್ದ. ನನ್ನ ಗಾಡಿಯನ್ನೇ ಹಿಡಿದುಕೊಳ್ತೀಯಾ, ನಿನ್ನನ್ನ ಸಾಯಿಸ್ತೀನಿ ಅಂತ ಅವಾಜ್ ಬೇರೆ ಹಾಕಿದ್ದ. ಸುಮಾರು 500ರಿಂದ 600 ಮೀಟರ್ ಹೀಗೆ ಸ್ಪೀಡಾಗಿ ಎಳೆದೊಯ್ದಿದ್ದ. ಇತರ ಗಾಡಿ ಸವಾರರು ಗಾಡಿ ನಿಲ್ಲಿಸುವಂತೆ ಹೇಳಿದ್ದರೂ ರೆಸ್ಪಾನ್ಸ್ ಮಾಡದೆ ಹೋಗಿದ್ದ. ಮುತ್ತಪ್ಪ ಅವರ ಎರಡು ಕಾಲು, ಮೊಣಕಾಲು, ಮಂಡಿ, ಸೊಂಟದ ಮೇಲೆ ಗಾಯಗಳಾಗಿದ್ದವು.
ಇದನ್ನೂ ಓದಿ | Brave hunt : ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪರಾರಿ; ತಡೆಯಲು ಹೋದ 70ರ ವೃದ್ಧನನ್ನು ರಸ್ತೆಯಲ್ಲಿ ಒಂದೂವರೆ ಕಿ.ಮೀ. ದರದರನೆ ಎಳೆದೊಯ್ದ!