ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಗದರಿದ ಪ್ರಸಂಗ ನಡೆಯಿತು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಎಸ್. ಅಂಗಾರ, ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್, ಶಾಸಕ ಸಂಜೀವ ಮಟಂದೂರು, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುಧೀರ್ , ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಸಿಎಂ ಬೊಮ್ಮಾಯಿ ಮಾತನಾಡುತ್ತ ಇರುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಾಗೇಶ್ ಬೇರೆಯವರೊಂದಿಗೆ ಮಾತನಾಡುತ್ತಿದ್ದರು. ಇದನ್ನು ಕಂಡು ಸಿಎಂ ಬೊಮ್ಮಾಯಿ ಸಿಟ್ಟಾದರು. ನಾಗೇಶ್, ನಿನಗೆ ಮಾತಾಡಬೇಕು ಅಂದ್ರೆ ಹೊರಗೆ ಹೋಗಿ ಮಾತಾಡು ಎಂದು ರೇಗಿದರು.
ನಂತರ ಮಾತು ಮುಂದುವರಿಸಿದ ಸಿಎಂ, ನಮ್ಮ ಬದುಕು ಗಾಳಿ, ನೀರು ಆಹಾರದ ಮೇಲೆ ನಿಂತಿದೆ. ಆಹಾರ ಎಂದಾಕ್ಷಣ ಮನುಷ್ಯ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರ ಆಹಾರ ವಹಿಸುತ್ತದೆ. ಆರೋಗ್ಯಕರವಾದ ಆಹಾರ ಸೇವಿಸುವುದು ಬಹಳ ಮುಖ್ಯ. ಮನುಷ್ಯ ಜೀವನದಲ್ಲಿ ಸಮತೋಲನ ಕಾಪಾಡುತ್ತದೆ. ಕೇವಲ ಸಸ್ಯಹಾರಿ, ಕೇವಲ ಮಾಂಸಹಾರದಿಂದ ಮಾತ್ರ ಆಗುವುದಿಲ್ಲ. ಮೀನು ಸಸ್ಯಹಾರಿ, ಮೀನು ತಿಂದವರು ಮಾಂಸಹಾರಿಗಳು. ಮೀನುಗಾರರು ಬಹಳ ಸಾಹಸಿಗಳು. ಮೀನು ಹಿಡಿದು ಎಷ್ಟು ಗಂಟೆಗೆಗಳಲ್ಲಿ ಜನರಿಗೆ ಮುಟ್ಟಿಸುತ್ತೇವೆ ಎಂಬುದು ಮುಖ್ಯ ಎಂದರು.
ಇದನ್ನೂ ಓದಿ | Modi in Mangalore | ಕಿಸಾನ್ ಕಾರ್ಡ್, ಆಳ ಸಮುದ್ರ ಮೀನುಗಾರಿಕೆಗೆ ಸಹಾಯ: ಮೀನುಗಾರರ ಮನಸೂರೆಗೊಂಡ ಮೋದಿ
ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಇದ್ದೇ ಇದೆ. ಒಳನಾಡು ಮೀನುಗಾರಿಕೆ ಬಹಳ ಪ್ರಾಮುಖ್ಯತೆ ಇದೆ. ಕರಾವಳಿಯಿಂದ ದೂರ ಇರುವ ಕಡೆ ಮೀನು ಸಾಕಾಣಿಕೆ ಮಾಡಿದರೆ ಮೀನು ಉತ್ಪಾದನೆ ಹೆಚ್ಚಾಗಿಸಬಹುದು. ಹೊಸ ತಳಿಗಳನ್ನು ನಾವು ಪ್ರಯೋಗ ಮಾಡಿದರೆ. ಒಳನಾಡು ಕೃಷಿಗೆ ಬಹಳ ದೊಡ್ಡ ಮಾರುಕಟ್ಟೆ ಇದೆ. ಸಮುದ್ರ ಮೀನಿನ ಕೃಷಿಗೆ ಹತ್ತು ಹಲವು ಪ್ರೋತ್ಸಾಹ ಧನ ಕೊಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕ್ಲೈಮೆಟ್ ಬದಲಾವಣೆ ಆಗಿದೆ. ಹೀಗಾಗಿ ಮೀನಿನ ಕೃಷಿಯಲ್ಲಿ ಹಿಂದೆ ಇದೆ. ಢೀಪ್ ಸೀ ಪಿಶಿಂಗ್ ಮಾಡಲು ಮೋದಿ ಸರ್ಕಾರದ ಸಹಕಾರದಿಂದ 100 ಹೊಸ ಡೀಪ್ ಸೀ ಫಿಶಿಂಗ್ ಬೋಟ್ ಕೊಡುತ್ತಿದ್ದೇವೆ. ಅದಕ್ಕೆ ಸಬ್ಸಿಡಿ ಕೂಡ ಇದೆ. ಇದನ್ನು ಹೀಗೆಯೇ ಮುಂದುವರಿದರೆ 300 ಬೋಟ್ ಢೀಪ್ ಶೀ ಫಿಶಿಂಗ್‌ಗೆ ಸಹಾಯ ಆಗುತ್ತದೆ ಎಂದರು.
ಈ ಹಿಂದೆ 300 ಮೀನುಗಾರ ಸಂಘಗಗಳಿಗೆ ಸಹಾಯ ಧನ ನೀಡಲಾಗಿತ್ತು. ಇದೀಗ 1000 ಸಾವಿರ ಮೀನುಗಾರ ಸಂಘಗಳಿಗೆ ಸಹಾಯಧನ ವಿಸ್ತರಣೆ ಮಾಡಲಾಗಿದೆ. 3 ಲಕ್ಷದಿಂದ 5 ಲಕ್ಷ ರೂ.ವರೆಗೂ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಆಂಧ್ರಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ಬಹಳಷ್ಟು ಮುಂದುವರಿದಿದೆ. ಹೀಗಾಗಿ ನಮ್ಮ ಸಚಿವರಿಗೆ ಅಲ್ಲಿಗೆ ಹೋಗಿ ವೀಕ್ಷಣೆ ಮಾಡಿ ಬರಲು ಹೇಳಿದ್ದೇನೆ. ಮೀನು ಕೃಷಿ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಅದನ್ನು ನಮ್ಮಲ್ಲಿ ಇಂಪ್ಲಿಮೆಂಟ್ ಆಗಬೇಕು. ಆರ್ಥಿಕವಾಗಿ ಮೀನುಗಾಗರರು ಸಬಲರಾಗಬೇಕು. ಮೀನುಗಾರರಿಗೆ 5 ಸಾವಿರ ಮನೆಗಳು ಘೋಷಣೆ ಮಾಡಲಾಗಿದೆ. ಈಗಾಗಲೇ ರೈತ ಮಕ್ಕಳಿಗೆ ವಿಧ್ಯಾ ನಿಧಿ ಕೊಡುತ್ತಿದ್ದೇವೆ. 1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತೇವೆ. ನೀವು ಒಂದು ಹೆಜ್ಜೆ ಮುಂದೆ ಬಂದರೆ ಸರ್ಕಾರ ಎರಡು ಹೆಜ್ಜೆ ಮುಂದೆ ಬರುತ್ತದೆ. ಹೀಗಾಗಿ ಖಾಸಗಿಯವರು ಕೂಡ ಆದಷ್ಟು ಹೆಚ್ಚು ಮುಂದೆ ಬರಬೇಕು ಎಂದರು.
ಇದನ್ನೂ ಓದಿ | ಸಚಿವ ಸಂಪುಟ ವಿಸ್ತರಣೆ | ಶೀಘ್ರವೇ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಚರ್ಚೆ: ಸಿಎಂ ಬೊಮ್ಮಾಯಿ