ಬೆಂಗಳೂರು: ದೆಹಲಿ ಪೊಲೀಸರಿಂದ ಈ ಹಿಂದೆ ಒಮ್ಮೆ ಬಂಧಿತನಾಗಿದ್ದ ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಜುಬೇರ್, ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆನ್‌ಲೈನ್ ಸುದ್ದಿಗಳ ಫ್ಯಾಕ್ಟ್ ಚೆಕ್ಕರ್ ಆಗಿರುವ ಆಲ್ಟ್ ನ್ಯೂಸ್‌ನ (alte news) ಮೊಹಮ್ಮದ್ ಜುಬೇರ್ (Mohammed Zubair) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂದಿ ಮಾಂಸದ ಫೋಟೋ ಕಳಿಸಿ ಬೆದರಿಕೆ ಹಾಕಲಾಗಿದೆಯಂತೆ. ʼʼ400 ಗ್ರಾಂ ಹಂದಿ ಮಾಂಸ ಆರ್ಡರ್ ಮಾಡಿ ಕಳಿಸಿದ್ದೇನೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆʼʼ ಎಂದು @Cyber_Huntss ಎಂಬ ಸಾಮಾಜಿಕ ಜಾಲತಾಣದಿಂದ ಯಾರೋ ಜುಬೇರ್‌ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
Canine Craving https://Caninecraving.com ಎಂಬ ಪ್ರಾಣಿಗಳಿಗೆ ಆಹಾರ ಬುಕ್ ಮಾಡುವ ವೆಬ್ ಸೈಟ್‌ನಿಂದ ಕಳಿಸಿರುವುದಾಗಿ ಪೋಸ್ಟ್ ತಿಳಿಸಿದೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ,
ಎರಡು ಜನಾಂಗದವರ ಮಧ್ಯೆ ದ್ವೇಷವನ್ನುಂಟು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಮೊಹಮ್ಮದ್ ಜುಬೇರ್ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಐಪಿಸಿ ಸೆಕ್ಷನ್ 505, 153a, 506, 504 ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಈ ಹಿಂದೆ ಆಕ್ಷೇಪಾರ್ಹವಾದ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ದೆಹಲಿ ಪೊಲೀಸರಿಂದ ಜುಬೇರ್ ಬಂಧಿತನಾಗಿದ್ದ. 2018ರಲ್ಲಿ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಾನೆಂದು ದೆಹಲಿ ಪೊಲೀಸರು ಜುಬೇರ್‌ನನ್ನು ಬಂಧಿಸಿದ್ದರು.
ಇದನ್ನೂ ಓದಿ: ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೇರ್‌ಗೆ ಬಿಡುಗಡೆ ಭಾಗ್ಯ; ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಜಾಮೀನು