Crime News: ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್‌ ಜುಬೇರ್‌ಗೆ ಕೊಲೆ ಬೆದರಿಕೆ, ಡಿ.ಜೆ ಹಳ್ಳಿಯಲ್ಲಿ ದೂರು - Vistara News

ಕ್ರೈಂ

Crime News: ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್‌ ಜುಬೇರ್‌ಗೆ ಕೊಲೆ ಬೆದರಿಕೆ, ಡಿ.ಜೆ ಹಳ್ಳಿಯಲ್ಲಿ ದೂರು

ಆನ್‌ಲೈನ್‌ ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಆಗಿರುವ ಮೊಹಮ್ಮದ್‌ ಜುಬೇರ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂದಿ ಮಾಂಸದ ಫೋಟೋ ಕಳಿಸಿ ಬೆದರಿಕೆ ಹಾಕಲಾಗಿದೆಯಂತೆ.

VISTARANEWS.COM


on

Zuber Alt news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೆಹಲಿ ಪೊಲೀಸರಿಂದ ಈ ಹಿಂದೆ ಒಮ್ಮೆ ಬಂಧಿತನಾಗಿದ್ದ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್‌ ಜುಬೇರ್‌, ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆನ್‌ಲೈನ್‌ ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಆಗಿರುವ‌ ಆಲ್ಟ್‌ ನ್ಯೂಸ್‌ನ (alte news) ಮೊಹಮ್ಮದ್‌ ಜುಬೇರ್‌ (Mohammed Zubair) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂದಿ ಮಾಂಸದ ಫೋಟೋ ಕಳಿಸಿ ಬೆದರಿಕೆ ಹಾಕಲಾಗಿದೆಯಂತೆ. ʼʼ400 ಗ್ರಾಂ ಹಂದಿ ಮಾಂಸ ಆರ್ಡರ್ ಮಾಡಿ ಕಳಿಸಿದ್ದೇನೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆʼʼ ಎಂದು @Cyber_Huntss ಎಂಬ ಸಾಮಾಜಿಕ ಜಾಲತಾಣದಿಂದ ಯಾರೋ ಜುಬೇರ್‌ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

Canine Craving https://Caninecraving.com ಎಂಬ ಪ್ರಾಣಿಗಳಿಗೆ ಆಹಾರ ಬುಕ್ ಮಾಡುವ ವೆಬ್ ಸೈಟ್‌ನಿಂದ ಕಳಿಸಿರುವುದಾಗಿ ಪೋಸ್ಟ್ ತಿಳಿಸಿದೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ,
ಎರಡು ಜನಾಂಗದವರ ಮಧ್ಯೆ ದ್ವೇಷವನ್ನುಂಟು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಮೊಹಮ್ಮದ್ ಜುಬೇರ್ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಐಪಿಸಿ ಸೆಕ್ಷನ್ 505, 153a, 506, 504 ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಈ ಹಿಂದೆ ಆಕ್ಷೇಪಾರ್ಹವಾದ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ದೆಹಲಿ ಪೊಲೀಸರಿಂದ ಜುಬೇರ್‌ ಬಂಧಿತನಾಗಿದ್ದ. 2018ರಲ್ಲಿ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಾನೆಂದು ದೆಹಲಿ ಪೊಲೀಸರು ಜುಬೇರ್‌ನನ್ನು ಬಂಧಿಸಿದ್ದರು.

ಇದನ್ನೂ ಓದಿ: ಆಲ್ಟ್‌ ನ್ಯೂಸ್‌ನ ಮೊಹಮ್ಮದ್‌ ಜುಬೇರ್‌ಗೆ ಬಿಡುಗಡೆ ಭಾಗ್ಯ; ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಜಾಮೀನು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Indecent Behaviour: ಕಾಲೇಜು ಯುವತಿಯವರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್‌ ಆಗಿದ್ದವ ಪೊಲೀಸ್‌ ವಶಕ್ಕೆ

ಬೆಂಗಳೂರಿನ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜು ಬಳಿ ನಿಂತಿದ್ದ ಯುವತಿಯರ ಮುಂದೆ ಕಾಮುಕ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Indecent behaviour
Koo

ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿ (Indecent Behaviour) ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವಿವಿ ಪುರಂನಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜು ಬಳಿ ನಿಂತಿದ್ದ ಯುವತಿರ ಮುಂದೆ ಕಾಮುಕ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ಪರಾರಿಯಾಗಿದ್ದ. ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೆಹಮಾನ್ (48) ಆರೋಪಿ. ಕಾಲೇಜು ಮುಂಭಾಗ ನಿಂತಿದ್ದ ಹುಡುಗಿಯರ ಗುಂಪಿನ ಬಳಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ, ಅಸಭ್ಯವಾಗಿ ವರ್ತಿಸಿದ್ದ. ಆ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಗಮನಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ‌ ನಡೆಸಿ ಯುವಕನೊಬ್ಬನ ಕೊಲೆ (Murder case) ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೇಪಾಳಿ ಮೂಲದ ಬಾಲಾಜಿ ಮೃತ ದುರ್ದೈವಿ.

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ.

ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಳೇ ವೈಷಮ್ಯದಿಂದ ಗ್ರಾಮ ಪಂಚಾಯಿತಿ ಸದಸ್ಯನ ಕೊಚ್ಚಿ ಕೊಲೆ

ಹೊಸಕೋಟೆ: ಹಳೆ ವೈಷಮ್ಯದ (Old vengeance) ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು (Gram Panchayat Member) ಬರ್ಬರವಾಗಿ (Hacked to death) ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಹೊಸಕೋಟೆ (Hosakote News) ತಾಲೂಕಿನ ಬೈಲನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಅಪಾಕ್ ಅಮೀರ್ ಖಾನ್ (45) ಮೃತ ಗ್ರಾಮ ಪಂಚಾಯತಿ ಸದಸ್ಯ. ಕಳೆದ ರಾತ್ರಿ ಅಟ್ಯಾಕ್ ಮಾಡಿ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಹಾಕಲಾಗಿದೆ. ಅಪಾಕ್‌ ಅಮೀರ್‌ ಖಾನ್‌ ಗ್ರಾಮ ಪಂಚಾಯತಿ ಮುಂದೆ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಗ್ರಾಮದ ಮೆಹಬೂಬ್ ಎಂಬಾತ ನುಗ್ಗಿ ಬಂದು ಕೊಚ್ಚಿ ಕೊಂದು ಹಾಕಿದ್ದಾನೆ.

ಇದನ್ನೂ ಓದಿ: Student Death : ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕೊಲೆ ನಂತರ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

Continue Reading

Latest

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

Murder Case: ಅನೈತಿಕ ಸಂಬಂಧದಲ್ಲಿ ತೊಡಗಿ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಕ್ಷಣದ ಖುಷಿಗಾಗಿ ಬದುಕಿಡೀ ಕಂಬಿ ಎಣಿಸುವ ಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.ಪ್ರಿಯಕರನಿಗಾಗಿ ಪತಿಯನ್ನೇ ಕತ್ತರಿಯಿಂದ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾಳೆ. ಆದರೆ ಈಗ ಆಕೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Murder Case
Koo

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಪ್ರಕರಣಗಳು ಮತ್ತು ಇದಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ. ಪರ ಪುರುಷರ ಸಂಗಕ್ಕೆ ಬೀಳುವ ಕೆಲವು ಮಹಿಳೆಯರು ತಮ್ಮ ಪತಿ ಹಾಗೂ ಹೆತ್ತ ಮಕ್ಕಳನ್ನು ಕೊಲ್ಲಲೂ ಹಿಂಜರಿಯುವುದಿಲ್ಲ. ಇದೀಗ ಅಂತಹದೊಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಒಂದು ವಾರದ ಹಿಂದೆ ಕತ್ತರಿಯಿಂದ ಪತಿಯನ್ನು ಕ್ರೂರವಾಗಿ ಕೊಲೆ(Murder Case) ಮಾಡಿದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪೂಜಾ ಮತ್ತು ಪ್ರಹ್ಲಾದ್ ಕೊಲೆ ಮಾಡಿದ ಆರೋಪಿಗಳು. ಮಹೇಶ್ ಕೊಲೆಯಾದ ಬಲಿಪಶು. ಪೂಜಾ ಮತ್ತು ಪ್ರಹ್ಲಾದ್ ಒಂದೇ ಗ್ರಾಮದವರಾಗಿದ್ದು, ಇವರ ನಡುವೆ ಪ್ರೀತಿ ಮೂಡಿತ್ತು. ಆದರೆ ಮಹೇಶ್‍ನನ್ನು ಮದುವೆಯಾದ ಪೂಜಾ ಪತಿಯ ಜೊತೆ ಗ್ರೇಟರ್ ನೋಯ್ಡಾದ ಬಿರೋಂಡಾಕ್ಕೆ ಬಂದಿದ್ದಳು. ಅಲ್ಲಿ ಮಹೇಶ್ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಪೂಜಾ ತನ್ನ ಪ್ರಿಯಕರ ಪ್ರಹ್ಲಾದ್‍ಗೆ ಕೆಲಸ ಹುಡುಕಲು ಸಹಾಯ ಮಾಡುವ ನೆಪದಲ್ಲಿ ಗ್ರೇಟರ್ ನೋಯ್ಡಾಕ್ಕೆ ಕರೆದಳು. ಅಲ್ಲಿ ಪ್ರಹ್ಲಾದ್‍ಗೆ ಎನ್ಎಫ್ಎಲ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಏನೋ ಸಿಕ್ಕಿದೆ. ಆದರೆ ಆತ ಆಗಾಗ ಪೂಜಾಳನ್ನು ಭೇಟಿ ಮಾಡಲು ಪ್ರಾರಂಭಿಸಿದ. ಅಲ್ಲದೇ ಇವರ ನಡುವೆ ಅಕ್ರಮ ಸಂಬಂಧ ಮುಂದುವರಿಯಿತು ಎನ್ನಲಾಗಿದೆ.

ಆದರೆ ಜುಲೈ 1ರ ರಾತ್ರಿ ಮಹೇಶ್ ಇಲ್ಲದಿದ್ದಾಗ ಪ್ರಹ್ಲಾದ್ ಪೂಜಾಳ ಮನೆಗೆ ಭೇಟಿ ನೀಡಿದ್ದಾನೆ. ಆದರೆ, ಮಹೇಶ್ ಅನಿರೀಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ಪ್ರಹ್ಲಾದ್ ಜೊತೆ ಪತ್ನಿ ಇರುವುದನ್ನು ಕಂಡು ಸಿಟ್ಟಾಗಿದ್ದಾನೆ. ಈ ವೇಳೆ ಪೂಜಾ ಮತ್ತು ಪ್ರಹ್ಲಾದ್ ಮಹೇಶ್ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಶೌಚಾಲಯದ ಚಾವಣಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಇದನ್ನೂ ಓದಿ: 1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈಗ ಆರೋಪಿಗಳಾದ ಪೂಜಾ ಮತ್ತು ಪ್ರಹ್ಲಾದ್ ಅವರನ್ನು ಗ್ರೇಟರ್ ನೋಯ್ಡಾದ ಎಟಿಎಸ್ ವೃತ್ತದ ಬಳಿ ಪೊಲೀಸರು ಬಂಧಿಸಿದ್ದಾರೆ ಮತ್ತು ಕೊಲೆಗೆ ಬಳಸಿದ ಕತ್ತರಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನಿಬಂಧನೆಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದ ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಕೊಪ್ಪಳ

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ನಡೆದಿದ್ದು, ಕೊಪ್ಪಳದಲ್ಲಿ ಲಾರಿ ಹರಿದು ಬೈಕ್‌ ಸವಾರ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಬಸ್‌ ಹಿಂಬದಿಗೆ ಬೊಲೆರೋ ಡಿಕ್ಕಿ ಹೊಡೆದು, ಕಾರವಾರದಲ್ಲಿ ಅಡ್ಡ ಬಂದ ಜಾನುವಾರು ತಪ್ಪಿಸಲು ಹೋಗಿ ಹೈವೇಯಲ್ಲಿ ಸರಣಿ ಅಪಘಾತ ಸಂಭವಿಸಿದೆ.

VISTARANEWS.COM


on

By

road Accident
Koo

ಕೊಪ್ಪಳ: ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಕಾಸನಕಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹಾರಿದ ಸವಾರ ಟಿಪ್ಪರ್ ವಾಹನದ ವ್ಹೀಲ್‌ಗೆ ಸಿಲುಕಿ ಮೃತಪಟ್ಟಿದ್ದಾರೆ.

ಮೃತನ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬಸ್‌ ಹಿಂಬದಿಗೆ ಗುದ್ದಿದ ಬೊಲೆರೋ

ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಮೈಸೂರಿನ ಆಲನಹಳ್ಳಿ ರಿಂಗ್ ರೋಡ್ ಬಳಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದ್ದು, ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಅಡ್ಡ ಬಂದ ಜಾನುವಾರು; ಹೈವೇಯಲ್ಲಿ ಸರಣಿ ಅಪಘಾತ

ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಏಕಾಏಕಿ ಜಾನುವಾರು ಅಡ್ಡ ಬಂದಿದೆ. ಜಾನುವಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಎರಡು ಕಾರು, ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಂಕೋಲಾ ಭಾಗದಿಂದ ಕಾರವಾರದತ್ತ ಆಗಮಿಸುತ್ತಿದ್ದ ಸ್ಕಾರ್ಪಿಯೋ ಕಾರಿಗೆ ದನ ಎದುರಾಗಿದ್ದರಿಂದ ಚಾಲಕ ಸಡನ್‌ ಬ್ರೇಕ್ ಹಾಕಿದ್ದಾನೆ.

ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಡಿಸೈರ್ ಕಾರು ಚಾಲಕ ಸಹ ಬ್ರೇಕ್ ಹಾಕಿ ನಿಲ್ಲಿಸಿದ್ದ. ಆದರೆ ಹಿಂದಿನಿಂದ ಬಂದ ಸರ್ಕಾರಿ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ಪರಿಣಾಮ ಮುಂದಿದ್ದ ಸ್ಕಾರ್ಪಿಯೋಗೆ ಗುದ್ದಿ ಕಾರು ಜಖಂಗೊಂಡಿದೆ. ಇತ್ತ ಬಸ್ ಡಿಕ್ಕಿಯಾದ ಪರಿಣಾಮ ಕಾರೊಂದು ದನಕ್ಕೆ ಗುದ್ದಿದೆ. ಡಿಸೈರ್ ಕಾರಿನಲ್ಲಿದ್ದ ವೃದ್ಧೆಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ ಸ್ಥಳೀಯರು ಗಾಯಾಳುಗಳು ಕಾರವಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

MUDA site scandal: ಈ ಮೊದಲು ನ್ಯಾಯಾಲಯ ಆದೇಶದಂತೆ ರಾಕೇಶ್‌ ಪಾಪಣ್ಣಗೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ. ಈಗ ಅದನ್ನೂ ತಡೆ ಹಿಡಿಯಲಾಗಿದೆ ಎಂದು ಮುಡಾ ಅಧ್ಯಕ್ಷ ಮರಿಗೌಡ ತಿಳಿಸಿದ್ದಾರೆ.

VISTARANEWS.COM


on

MUDA site scandal
Koo

ಮೈಸೂರು: ಮುಡಾ ನಿವೇಶನ ಹಗರಣ (MUDA site scandal) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಹಂಚಿಕೆಯಾದ ಸೈಟ್‌ಗಳನ್ನು ಅಮಾನತು ಮಾಡಿ, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದೀಗ ಸಿಎಂ ಆಪ್ತ, ಜಿಪಂ ಮಾಜಿ ಸದಸ್ಯ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಸೈಟ್‌ ಅನ್ನೂ ತಡೆ ಹಿಡಿದಿರುವುದು ಕಂಡುಬಂದಿದೆ.

ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಕೆ. ಮರಿಗೌಡ ಪ್ರತಿಕ್ರಿಯಿಸಿ, ನಿವೇಶನ ಹಂಚಿಕೆ ತಡೆ ಹಿಡಿಯಲಾಗಿದೆ. ಈ ಮೊದಲು ನ್ಯಾಯಾಲಯ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ. ಈಗ ಅದನ್ನೂ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಹಿನ್‌ಕಲ್ ಸರ್ವೆ ನಂ.211ರಲ್ಲಿ 3.05 ಗುಂಟೆ ಜಮೀನು ಸಂಬಂಧಿಸಿದ ಪ್ರಕರಣದಲ್ಲಿ 1981ರಲ್ಲಿ ಸ್ವಾದೀನ ಪಡೆದು, 1984ರಲ್ಲಿ ಕೈ ಬಿಡಲಾಗಿತ್ತು. ಅದಕ್ಕೆ 2024ರ ಜೂನ್‌ 12 ರಂದು ಪರಿಹಾರ ಕೊಡಲಾಗಿತ್ತು. 36,753 ಚದರ ಅಡಿ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ‌ 20 ನಿವೇಶನ ಕೊಟ್ಟು ಆದೇಶ ಮಾಡಲಾಗಿತ್ತು. ಈಗ ಆ ದೇಶಕ್ಕೂ ತಡೆ ಬಿದ್ದಿದೆ ಎಂದು ಹೇಳಿದ್ದಾರೆ.

ಎಂಎಲ್‌ಸಿ ಎಚ್. ವಿಶ್ವನಾಥ್ ಕೂಡ ಮುಡಾದಿಂದ ಬದಲಿ ನಿವೇಶನ ಪಡೆದಿದ್ದಾರೆ. ದೇವನೂರು 3ನೇ ಹಂತದ ಬದಲು ಮುಖ್ಯರಸ್ತೆಯಲ್ಲಿ ವಿಶ್ವನಾಥ್ ಪತ್ನಿ ಶಾಂತಮ್ಮ ಅವರ ಹೆಸರಿನಲ್ಲಿ 2017ರಲ್ಲಿ 60×40 ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ. ರಾಜಕೀಯವಾಗಿ ದಿವಾಳಿಯಾಗಿರುವ ಅವರು ಈಗ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಚ್‌.ವಿಶ್ವನಾಥ್‌ಗೂ ಬದಲಿ ನಿವೇಶನ

50-50 ಅನುಪಾತದಲ್ಲಿ ಸಿಎಂ ಕುಟುಂಬ ನಿಯಮಬಾಹಿರ ಸೈಟ್ ಪಡೆದ ಆರೋಪದ ಬಗ್ಗೆ ಶಾಸಕ ಹರೀಶ್‌ಗೌಡ ಪ್ರತಿಕ್ರಿಯಿಸಿ, ಇಡೀ ಪ್ರಕರಣದಲ್ಲಿ ಸಿಎಂ ಹಾಗೂ ಅವರ ಕುಟುಂಬ ಕಾನೂನಾತ್ಮಕವಾಗಿ ಇದೆ. ಇಲ್ಲಿ ಮುಡಾ, ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು. ಆದರೂ ಕೊಟ್ಟಿರುವ 38 ಸಾವಿರ ಚದ ಅಡಿಗೆ ನಮ್ಮ ನಾಯಕರ ತೃಪ್ತಿ ಪಟ್ಟುಕೊಂಡಿದ್ದಾರೆ. ಅಂತಹವರ ಮೇಲೆ ಸುಳ್ಳು ಆರೋಪ ಮಾಡೋದು ಸರಿಯಲ್ಲ. ಇಂತಹ ಆರೋಪ ಮಾಡುತ್ತಿರುವ ಎಚ್‌.ವಿಶ್ವನಾಥ್ ಕೂಡ ದೇವನೂರು ಬಡಾವಣೆಯಲ್ಲಿ ಬದಲಿ ನಿವೇಶನ ಪಡೆದಿದ್ದಾರೆ.
ಅವರ ಪತ್ನಿ ಶಾಂತಮ್ಮ ಹೆಸರಲ್ಲಿ ನಿವೇಶನ ಪಡೆದಿದ್ದರು. ನಿವೇಶನ ಸಂಖ್ಯೆ 2,525ರ ಬದಲಾಗಿ ಹೈವೆ ಬಳಿ ಬರುವ ನಿವೇಶನ ಸಂಖ್ಯೆ 307 ಅನ್ನು ಪಡೆದಿದ್ದಾರೆ. ಅಂತಹವರು ಸಿಎಂ ಬಗ್ಗೆ ಮಾತನಾಡುವಾಗ ಸರಿಯಾಗಿ ಮಾತನಾಡಬೇಕು ಎಂದರು.

ವಿಶ್ವನಾಥ್‌ರಂತಹ ದಿವಾಳಿ ರಾಜಕಾರಣಿ ಇನ್ನೊಬ್ಬ ಇಲ್ಲ. ಇಡೀ ಪ್ರಕರಣದಲ್ಲಿ ಅಕ್ರಮ ಎಸಗಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯದಲ್ಲೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಹೇಳಿದರು.

50:50 ಅನುಪಾತದಲ್ಲಿ ನಿವೇಶನ ಕೊಡಲಿಕ್ಕೆ 2015ರಲ್ಲೇ ಗೆಜೆಟ್ ನೋಟಿಫಿಕೇಶನ್ ಆಗಿದೆ. ಆಗ 60:40 ಅನುಪಾತದಲ್ಲಿ ನೀಡಬೇಕೆಂದು ಆದೇಶ ಇದೆ. ಅದಾದ ಬಳಿಕ 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡಲಿಕ್ಕೆ ಪ್ರಾಧಿಕಾರ ನಿರ್ಣಯ ಮಾಡಿತು ಎಂದು ತಿಳಿಸಿದರು.

Continue Reading
Advertisement
France Election
ಪ್ರಮುಖ ಸುದ್ದಿ2 mins ago

France Election: ಫ್ರಾನ್ಸ್ ಚುನಾವಣೆ: ಎಡ ಪಕ್ಷಗಳ ಒಕ್ಕೂಟದ ಮೇಲುಗೈ; ಅತಂತ್ರ ಫಲಿತಾಂಶ

Chennai Police commissioner
ಪ್ರಮುಖ ಸುದ್ದಿ5 mins ago

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Rohit Sharma
ಕ್ರೀಡೆ6 mins ago

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Karnataka Rain Effect
ಮಳೆ7 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Kalki 2898 AD box office thrashes 'PK' record
ಟಾಲಿವುಡ್14 mins ago

Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!

Cm Siddaramaiah in Janatha Darshan
ಪ್ರಮುಖ ಸುದ್ದಿ23 mins ago

CM Siddaramaiah: ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ

Indecent behaviour
ಕರ್ನಾಟಕ27 mins ago

Indecent Behaviour: ಕಾಲೇಜು ಯುವತಿಯವರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್‌ ಆಗಿದ್ದವ ಪೊಲೀಸ್‌ ವಶಕ್ಕೆ

Hasin Jahan: Divorced wife who scolded Shami unnecessarily as 'pack of dogs'; The video is viral
ಕ್ರೀಡೆ34 mins ago

Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

Kamala Harris
ವಿದೇಶ35 mins ago

Kamala Harris: ಅಮೆರಿಕ ಚುನಾವಣೆ; ಟ್ರಂಪ್‌ಗೆ ಪೈಪೋಟಿ ನೀಡಲು ಬೈಡನ್‌ಗಿಂತ ಕಮಲಾ ಹ್ಯಾರಿಸ್‌ ಸಮರ್ಥ ಎನ್ನುತ್ತವೆ ಸಮೀಕ್ಷೆ!

ತುಮಕೂರು1 hour ago

Koratagere News: ವೀರಶೈವ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ7 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ2 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ3 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ19 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ22 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ23 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

ಟ್ರೆಂಡಿಂಗ್‌