Site icon Vistara News

Crime news | ಭಯಾನಕ ಕೊಲೆ ಕಂಡು ಪೊಲೀಸರಿಗೇ ಶಾಕ್!‌ 20 ಬಾರಿ ಕಲ್ಲು ಎತ್ತಿಹಾಕಿ ಕೊಂದ ಪಾತಕಿಗಳು!

Crime news

ಬೆಂಗಳೂರು: ಆ ಭಯಾನಕ ಮರ್ಡರ್ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹೆಣ್ಣಿನ ಸಂಗದ ಕಾರಣಕ್ಕಾಗಿ ಬಾದಾಮಿ ಮೂಲದ ಒಬ್ಬಾತನನ್ನು ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ತಲೆ ಮೇಲೆ ಇಪ್ಪತ್ತು ಬಾರಿ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರೂ ಬಾದಾಮಿ ಮೂಲದವರೇ ಆಗಿದ್ದು, ಆರು ಮಂದಿಯ ಗ್ಯಾಂಗ್‌ ಈ ಕೃತ್ಯ ನಡೆಸಿರುವುದು ಬಯಲಾಗಿದೆ.

3ನೇ ತಾರೀಕು ಮಧ್ಯರಾತ್ರಿ ಕೆ.ಪಿ ಅಗ್ರಹಾರದ 5ನೇ ಕ್ರಾಸ್‌ನಲ್ಲಿ ಹತ್ಯೆ ನಡೆದಿತ್ತು. ಬಾಳಪ್ಪ ಜಮಖಂಡಿ ಎಂಬಾತನನ್ನು ಆರು ಮಂದಿಯ ಗ್ಯಾಂಗ್ ಕೊಲೆ ನಡೆಸಿತ್ತು. ಕೊಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಭಾಗಿಯಾಗಿದ್ದಾರೆ. ಮೊದಲಿಗೆ ಕಲ್ಲು ಹುಡುಕಿ ಈತನ ಮೇಲೆ ತಲೆ ಮೇಲೆ ಎತ್ತಿಹಾಕಿದ್ದೇ ಒಬ್ಬ ಮಹಿಳೆ. ಆಗ ಕೆಲವರು ಬಾಳಪ್ಪನನ್ನು ಅದುಮಿ ಹಿಡಿದುಕೊಂಡಿದ್ದರು. ಉಳಿದವರು ಆತನ ತಲೆ ಮೇಲೆ ಹಲವಾರು ಬಾರಿ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ. ಪರಿಚಿತರಿಂದಲೇ ಬಾಳಪ್ಪ ಜಮಖಂಡಿ ಹತ್ಯೆ‌ ನಡೆದಿರುವುದು ಖಚಿತವಾಗಿದ್ದು, ಕೊಲೆಯ ಮುನ್ನ ವಾಗ್ಯುದ್ಧ ನಡೆದಿರುವುದು ಸಿಸಿ ಟಿವಿ ಫೂಟೇಜ್‌ಗಳಿಂದ ಕಂಡುಬಂದಿದೆ. ಹೆಣ್ಣಿನ ಸಂಗದಲ್ಲಿ ಉಂಟಾಗಿರುವ ತಗಾದೆ ಹಾಗೂ ವೈಯಕ್ತಿಕ ದ್ವೇಷಗಳ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ | Crime News | KRSನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಹೊತ್ತು ಹಾಕಿ ಭೀಕರ ಹತ್ಯೆ: ಇಲ್ಲೇ ನಡೆದಿತ್ತು ಸಾಮೂಹಿಕ ಕೊಲೆ!

ಮೊಬೈಲ್ ಸುಳಿವಿನ ಮೇರೆಗೆ ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿತ್ತು. ಶನಿವಾರ ರಾತ್ರಿ ಕೆ.ಪಿ ಅಗ್ರಹಾರಕ್ಕೆ ಬಂದಿದ್ದ ಬಾಳಪ್ಪ ಜಮಖಂಡಿ, ಆರೋಪಿಗಳ ಭೇಟಿಗೂ ಮುನ್ನ ಟೀ ಕುಡಿದು ಇನ್ನಿಬ್ಬರು ವ್ಯಕ್ತಿಗಳ ಭೇಟಿ ಮಾಡಿದ್ದ. ಸಿಗರೇಟ್ ಸೇದಿ, ನಂತರ ಮೆಡಿಕಲ್ ಶಾಪ್‌ನಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಿ, ಅವರೇನೋ ಅಲ್ಲಿಗೆ ಕರೀತಾ ಇದ್ದಾರೆ ಹೋಗಿ ಬರ್ತಿನಿ ಅಂದಿದ್ದ. ಐದನೇ ಕ್ರಾಸ್ ಮೆಡಿಕಲ್ ಸ್ಟೋರ್ ಬಳಿ ಇದ್ದಾಗ ಅಲ್ಲಿಗೆ ಆರು ಜನ‌ ಬಂದಿದ್ದರು. ಅವರಲ್ಲಿ ಮೂವರು ಮಹಿಳೆಯರು, ಮೂವರು ಪುರುಷರಿದ್ದರು. ಆರೋಪಿಗಳಲ್ಲಿ ಒಬ್ಬ ಕೆ.ಪಿ ಅಗ್ರಹಾರದಲ್ಲಿ ಸೆಕ್ಯುರಿಟಿಯಾಗಿದ್ದ. ಆತನನ್ನು ವಶಕ್ಕೆ ಪಡೆದು ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | Murder Case | ಮುಸ್ಲಿಂ ಮಹಿಳೆಯಿಂದ ಅಜ್ಜಿಯ ಭೀಕರ ಕೊಲೆ; ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟು ಪರಾರಿ

Exit mobile version