ಬೆಂಗಳೂರು: ಸತ್ತು ಹೋಗಿದ್ದೇನೆ ಎಂದು ಎಲ್ಲರನ್ನೂ ನಂಬಿಸಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿ, ಕೊಲೆ ಆರೋಪಿಯನ್ನು (Crime News) ಬಂಧಿಸಲಾಗಿದೆ (rowdy sheeter arrest).
ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ರೌಡಿ. ಸಿಸಿಬಿ ಪೊಲೀಸರಿಂದ ಈ ರೌಡಿಶೀಟರ್ ಬಂಧನವಾಗಿದೆ. ಈ ಮಲ್ಲಿ ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಬಳಿಕ ರಾಜಾನುಕುಂಟೆಯಲ್ಲಿ ಇನ್ನೊಂದು ಕೊಲೆ ಕೇಸಿನಲ್ಲಿಯೂ ಆರೋಪಿಯಾಗಿದ್ದ.
ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು. ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಮಾಹಿತಿ ದೊರೆತಿತ್ತು. ಸತ್ತಿದ್ದಾನೆ ಅನ್ನುವುದಕ್ಕೆ ಬೇಕಾದ ರೆಕಾರ್ಡ್ಸ್ ಅನ್ನು ಕುಟುಂಬ ರೆಡಿ ಮಾಡಿತ್ತು.
ಅದರೂ ಅನುಮಾನ ಬಂದು ಸಿಸಿಬಿ ಪೊಲೀಸರು ತಲಾಶ್ ಮಾಡಿದ್ದರು. ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅರೆಸ್ಟ್ ಆಗಿದ್ದಾನೆ.
ಕ್ರಿಕೆಟ್ ಬೆಟ್ಟಿಂಗ್ ದಾಳಿ ವೇಳೆ ಚಿನ್ನದ ಬಿಸ್ಕತ್ ಪತ್ತೆ
ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿ ಮೇಲೆ ಆರ್‌ಆರ್ ನಗರದ ಫ್ಲಾಟ್ ಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರಿಗೆ ಒಂದು ಕಿಲೋ ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿವೆ.
ಆನ್‌ಲೈನ್ ವೆಬ್‌ಸೈಟ್ ಮೂಲಕ ಬೆಟ್ಟಿಂಗ್ ಸಾಕೇತ್ ಮತ್ತು ರಿಷಬ್ ಎಂಬವರು ಬೆಟ್ಟಿಂಗ್ ನಡೆಸುತ್ತಿದ್ದರು. ಸಿಸಿಬಿ ಪೊಲೀಸರು ಫ್ಲಾಟ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಒಂದು ಕಿಲೋ ಚಿನ್ನದ ಬಿಸ್ಕತ್ತುಗಳು, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಪತ್ತೆಯಾಗಿವೆ.
ನೂರು ಗ್ರಾಂ ತೂಕದ ಹತ್ತು ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿದ್ದು, ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇವರು ವಿಶ್ವಕಪ್ ಫೈನಲ್ ಮ್ಯಾಚ್‌ನನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು.
ಇದನ್ನೂ ಓದಿ: Murder Case : ಭೂ ವಿಜ್ಞಾನಿ ಪ್ರತಿಮಾ ಕೊಲೆಗೆ ಟ್ವಿಸ್ಟ್; ಹಣ-ಒಡವೆ ಕದಿಯೋಕೆ ಸ್ಕೆಚ್ ಹಾಕಿದ್ದ ಹಂತಕ!