Crime News: ಸತ್ತು ಹೋಗಿದ್ದೇನೆ ಎಂದು ನಂಬಿಸಿದ ಕೊಲೆ ಆರೋಪಿ 2 ವರ್ಷದ ಬಳಿಕ ಅರೆಸ್ಟ್!‌ Vistara News

ಕ್ರೈಂ

Crime News: ಸತ್ತು ಹೋಗಿದ್ದೇನೆ ಎಂದು ನಂಬಿಸಿದ ಕೊಲೆ ಆರೋಪಿ 2 ವರ್ಷದ ಬಳಿಕ ಅರೆಸ್ಟ್!‌

ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ರೌಡಿ. ಸಿಸಿಬಿ ಪೊಲೀಸರಿಂದ ಈ ರೌಡಿಶೀಟರ್ ಬಂಧನವಾಗಿದೆ.

VISTARANEWS.COM


on

malli rowdy sheeter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸತ್ತು ಹೋಗಿದ್ದೇನೆ ಎಂದು ಎಲ್ಲರನ್ನೂ ನಂಬಿಸಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿ, ಕೊಲೆ ಆರೋಪಿಯನ್ನು (Crime News) ಬಂಧಿಸಲಾಗಿದೆ (rowdy sheeter arrest).

ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ರೌಡಿ. ಸಿಸಿಬಿ ಪೊಲೀಸರಿಂದ ಈ ರೌಡಿಶೀಟರ್ ಬಂಧನವಾಗಿದೆ. ಈ ಮಲ್ಲಿ ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಬಳಿಕ ರಾಜಾನುಕುಂಟೆಯಲ್ಲಿ ಇನ್ನೊಂದು ಕೊಲೆ ಕೇಸಿನಲ್ಲಿಯೂ ಆರೋಪಿಯಾಗಿದ್ದ.

ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು. ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಮಾಹಿತಿ ದೊರೆತಿತ್ತು. ಸತ್ತಿದ್ದಾನೆ ಅನ್ನುವುದಕ್ಕೆ ಬೇಕಾದ ರೆಕಾರ್ಡ್ಸ್ ಅನ್ನು ಕುಟುಂಬ ರೆಡಿ ಮಾಡಿತ್ತು.

ಅದರೂ ಅನುಮಾನ ಬಂದು ಸಿಸಿಬಿ ಪೊಲೀಸರು ತಲಾಶ್ ಮಾಡಿದ್ದರು. ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅರೆಸ್ಟ್ ಆಗಿದ್ದಾನೆ.

ಕ್ರಿಕೆಟ್ ಬೆಟ್ಟಿಂಗ್ ದಾಳಿ ವೇಳೆ ಚಿನ್ನದ ಬಿಸ್ಕತ್‌ ಪತ್ತೆ

ಕ್ರಿಕೆಟ್‌ ಬೆಟ್ಟಿಂಗ್‌ ನಡೆಯುತ್ತಿರುವ ಮಾಹಿತಿ ಮೇಲೆ ಆರ್‌ಆರ್ ನಗರದ ಫ್ಲಾಟ್ ಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರಿಗೆ ಒಂದು ಕಿಲೋ ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿವೆ.

ಆನ್‌ಲೈನ್ ವೆಬ್‌ಸೈಟ್ ಮೂಲಕ ಬೆಟ್ಟಿಂಗ್ ಸಾಕೇತ್ ಮತ್ತು ರಿಷಬ್ ಎಂಬವರು ಬೆಟ್ಟಿಂಗ್ ನಡೆಸುತ್ತಿದ್ದರು. ಸಿಸಿಬಿ ಪೊಲೀಸರು ಫ್ಲಾಟ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಒಂದು ಕಿಲೋ ಚಿನ್ನದ ಬಿಸ್ಕತ್ತುಗಳು, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಪತ್ತೆಯಾಗಿವೆ.

ನೂರು ಗ್ರಾಂ ತೂಕದ ಹತ್ತು ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿದ್ದು, ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇವರು ವಿಶ್ವಕಪ್ ಫೈನಲ್ ಮ್ಯಾಚ್‌ನನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು.

ಇದನ್ನೂ ಓದಿ: Murder Case : ಭೂ ವಿಜ್ಞಾನಿ ಪ್ರತಿಮಾ ಕೊಲೆಗೆ ಟ್ವಿಸ್ಟ್‌; ಹಣ-ಒಡವೆ ಕದಿಯೋಕೆ ಸ್ಕೆಚ್‌ ಹಾಕಿದ್ದ ಹಂತಕ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder Case: ಮುಂದಿನ ತಿಂಗಳು ಮದುವೆಯಾಗಲಿ‌ದ್ದ ಆಟೋ ಚಾಲಕನ ಬರ್ಬರ ಹತ್ಯೆ

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ (Murder Case) ನಡೆದಿರುವ ಶಂಕೆ ವ್ಯಕ್ತವಾಗಿದೆ.

VISTARANEWS.COM


on

arun murderd
Koo

ಬೆಂಗಳೂರು: ರಾಜಧಾನಿಯಲ್ಲಿ ಯುವಕನೊಬ್ಬನನ್ನು ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಿದ್ದಾರೆ. ಅರುಣ್ (24) ಕೊಲೆಯಾದ ಆಟೋ ಚಾಲಕ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅರುಣ್‌ನ ಮದುವೆ ಸಹ ಮುಂದಿನ ತಿಂಗಳು ಫಿಕ್ಸ್ ಆಗಿತ್ತು. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿರುವ ರೀತಿ ನೋಡಿದರೆ ಹಳೆಯ ದ್ವೇಷ ತೀರಿಸಿಕೊಳ್ಳಲು ನಡೆದ ಕೃತ್ಯದಂತೆ ಕಾಣಿಸುತ್ತಿದೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಮಚ್ಚಿನಿಂದ ಕೊಚ್ಚಿ ಮಗನನ್ನೇ ಕೊಂದ ತಂದೆ

ಆನೇಕಲ್: ಮಚ್ಚಿನಿಂದ ಕೊಚ್ಚಿ ಮಗನನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‌ ಸಮೀಪದ ನಾರಾಯಣಪುರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆಯೇ ಹತ್ಯೆ (Murder Case) ಮಾಡಿದ್ದಾರೆ.

ಸುರೇಶ್ (35) ಕೊಲೆಯಾದ ವ್ಯಕ್ತಿ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮಂಗಳವಾರವೂ ಕುಡಿದು ಬಂದು ಗಲಾಟೆ ಮಾಡಿದ್ದ. ತಾಯಿಯನ್ನ ಹಿಡಿದು ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿ ಗಲಾಟೆ ಬಿಡಿಸಲು ತಂದೆ ಮುಂದಾಗಿದ್ದಾರೆ. ಆದರೆ, ಗಲಾಟೆ ವಿಕೋಪಕ್ಕೆ ತಿರುಗಿದಾಗ ತಂದೆ ಮಚ್ಚಿನಿಂದ ಸುರೇಶ್‌ಗೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಆನೇಕಲ್ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಖಂಡ ಸುಖ್​ದೇವ್​​ ಗೋಗಮೇಡಿ ಗುಂಡಿಟ್ಟು ಹತ್ಯೆ

Continue Reading

ಕರ್ನಾಟಕ

Murder Case: ಮಚ್ಚಿನಿಂದ ಕೊಚ್ಚಿ ಮಗನನ್ನೇ ಕೊಲೆಗೈದ ತಂದೆ

Murder Case: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

VISTARANEWS.COM


on

Murder Case
Koo

ಆನೇಕಲ್: ಮಚ್ಚಿನಿಂದ ಕೊಚ್ಚಿ ಮಗನನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‌ ಸಮೀಪದ ನಾರಾಯಣಪುರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದಾಗ ಮಗನನ್ನು ತಂದೆಯೇ ಹತ್ಯೆ (Murder Case) ಮಾಡಿದ್ದಾರೆ.

ಸುರೇಶ್ (35) ಕೊಲೆಯಾದ ವ್ಯಕ್ತಿ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮಂಗಳವಾರವೂ ಕುಡಿದು ಬಂದು ಗಲಾಟೆ ಮಾಡಿದ್ದ. ತಾಯಿಯನ್ನ ಹಿಡಿದು ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿ ಗಲಾಟೆ ಬಿಡಿಸಲು ತಂದೆ ಮುಂದಾಗಿದ್ದಾರೆ. ಆದರೆ, ಗಲಾಟೆ ವಿಕೋಪಕ್ಕೆ ತಿರುಗಿದಾಗ ತಂದೆ ಮಚ್ಚಿನಿಂದ ಸುರೇಶ್‌ಗೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಆನೇಕಲ್ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Fraud Case : ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

ಬಾಸ್ಕೆಟ್ ಬಾಲ್ ಆಡುತ್ತಿದ್ದ ವಿದ್ಯಾರ್ಥಿನಿ ಸಾವು

ಆನೇಕಲ್: ಬಾಸ್ಕೆಟ್ ಬಾಲ್ ಆಟವಾಡುವಾಗ ದಿಢೀರನೇ ಕುಸಿದು ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಎಸ್ಎಫ್ಎಸ್ ಶಾಲೆಯಲ್ಲಿ ನಡೆದಿದೆ. ಚಾರ್ವಿ (16) ಮೃತ ಬಾಲಕಿ. ಮಧ್ಯಾಹ್ನ ಆಟವಾಡುತ್ತಿದ್ದಾಗ ಕುಸಿದು ಬಾಲಕಿಗೆ ಮೂಗಿನಿಂದ ರಕ್ತಸ್ರಾವವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ರೇನ್‌ ಸೀಲಿಂಗ್‌ ಕಟ್‌ ಆಗಿ ಬಾವಿಗೆ ಬಿದ್ದ ಕಾರ್ಮಿಕ ಸಾವು, ಮತ್ತೊಬ್ಬ ಗಂಭೀರ!

ಚಿಕ್ಕೋಡಿ: ಬಾವಿಯಲ್ಲಿ ಕೆಲಸ ಮಾಡುವಾಗ ಕ್ರೇನ್ ಸೀಲಿಂಗ್ (Ceiling collapses) ಕಟ್ಟಾಗಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಘಟನೆ (Crane collapses) ನಡೆದಿದೆ. ಮಧ್ಯಪ್ರದೇಶದ ಸಂತೋಷ ಮುಣ್ಣಾ ವಿಶ್ವಕರ್ಮ (28) ಮೃತ ದುರ್ದೈವಿ.

ಶಾವಂತ ಪಾಟೀಲ್ ಎಂಬ ರೈತರ ಜಮೀನಿನಲ್ಲಿ ಮಧ್ಯಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಳಗೆ ಇಳಿಯುವಾಗ ಕ್ರೇನ್ ಸಿಲ್ಲಿಂಗ್ ಕಟ್ಟಾಗಿ ಇಬ್ಬರು ಕಾರ್ಮಿಕರು ಬಾವಿಯ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸಂತೋಷ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ | Fishermen Rescued: ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬೋಟ್‌ ಪತ್ತೆ; 27 ಮೀನುಗಾರರ ರಕ್ಷಣೆ

ಗಾಯಗೊಂಡ ವ್ಯಕ್ತಿಯನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಪರಿಶೀಲನೆ ನಡೆಸಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Continue Reading

ಕರ್ನಾಟಕ

Fraud Case : ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

Fraud Case : ಸೂರತ್‌ ನಿಂದ ಬೆಂಗಳೂರಿಗೆ ಬಂದಿದ್ದ ನಿವೃತ್ತ ಅಧಿಕಾರಿಯೊಬ್ಬರ ಕಥೆ ಇದು. ಇಲ್ಲಿ ಯಾವುದೂ ನಿಜವಲ್ಲ ಎನ್ನುವುದು ಅವರು ಮೋಸ ಹೋದ ಕಥೆಯ ಸಾರಾಂಶ.

VISTARANEWS.COM


on

lusty old man and a woman
Koo

ಬೆಂಗಳೂರು: ಅವರು ಸೂರತ್‌ ಮೂಲದ ಒಬ್ಬ ನಿವೃತ್ತ ಅಧಿಕಾರಿ (Retired officer). ಗಜೆಟೆಡ್‌ ಹುದ್ದೆಯಲ್ಲಿದ್ದವರು. ಬೆಂಗಳೂರಿಗೆ ಯಾವುದೋ ಟ್ರಿಪ್‌ ಮೇಲೆ (Officer came on trip to Bangalore) ಬಂದಿದ್ದರು. ಊರು ಬಿಟ್ಟು ಬೆಂಗಳೂರಿಗೆ ಬಂದ ಅವರು ಸ್ವಲ್ಪ ಮೈ ಚಳಿ ಬಿಟ್ಟು ಸುತ್ತಾಡಿದ್ದರು. ಆಗ ಅವರಿಗೆ ಚರ್ಚ್‌ ಸ್ಟ್ರೀಟ್‌ನಲ್ಲಿ (Church Street) ಒಬ್ಳು ಸುಂದರವಾದ ಹುಡುಗಿ ಸಿಗ್ತಾಳೆ (A Beautiful Girl). ಅದೂ ಇದೂ ಮಾತಾಡೋ ಹೊತ್ತಿಗೆ 61ರ ವಯಸ್ಸಿನಲ್ಲಿ 16ರ ಕಾಮನೆ ಕೆರಳಿಬಿಡುತ್ತದೆ ಈ ರಿಟೈರ್ಡ್‌ ಆಫೀಸರ್‌ಗೆ. ಚಂದದ ಹುಡುಗಿ, ಬೆಂಗಳೂರಿನ ಹಿತವಾದ ವಾತಾವರಣ, ಚರ್ಚ್‌ ಸ್ಟ್ರೀಟ್‌ನ ಹಿತವಾದ ಜಾಗ.. ಇದಕ್ಕಿಂತ ಬೇರೆ ಬೇಕಾ ಎಂದು ಮಾತನಾಡುತ್ತಲೇ ಹುಡುಗಿಯನ್ನು ಸೆಟ್‌ ಮಾಡಿಕೊಂಡರು. ಆಕೆಯೋ ಮೊದಲೇ ಪಳಗಿದ ಹುಡುಗಿ. ಇವರು ನಾನ್‌ ರೆಡಿ ಎಂದ ಕೂಡಲೇ ಆಟೋ ಅಂತ ಕೂಗಿ ಕರೆದಳು. ಅವರಿಬ್ಬರು ಹೋಗಿದ್ದು ಒಂದು ಮನೆಗೆ!

ಅದುಮಿಟ್ಟಿದ್ದ ಆಕಾಂಕ್ಷೆಗಳನ್ನು ಬೆಂಗಳೂರಿನಲ್ಲಿ ಪೂರ್ಣವಾಗಿ ತೆರೆದಿಡುವ ಉತ್ಸಾಹದಲ್ಲಿ ಹೋಗಿದ್ದ ನಿವೃತ್ತ ಅಧಿಕಾರಿಗೆ ಅಲ್ಲಿ ಒಬ್ಬಳಲ್ಲ, ಇಬ್ಬರು ಸುಂದರಿಯರು ಸಿಕ್ಕರು. ಒಂದಕ್ಕೆ ಒಂದು ಫ್ರೀ ಎಂದು ಖುಷಿಯಲ್ಲಿದ್ದ ಅವರ ಉತ್ಸಾಹ ಕೆಲವೇ ಕ್ಷಣಗಳಲ್ಲಿ ಇಳಿದುಹೋಯಿತು. ಹಾಗಿದ್ದರೆ ಅಲ್ಲಿ ನಡೆದಿದ್ದೇನು? (Fraud Case)

ಇದು ಯಾರೋ ಹೇಳಿದ ಕಥೆಯಲ್ಲ, ಸ್ವತಃ ಆ ವ್ಯಕ್ತಿಯೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಗೆ ಬಂದು ವಿವರಿಸಿದ ರೋಚಕ ಕಹಾನಿ. ಅವರ ಕಥೇನ ಅವರದೇ ಬಾಯಿಯಲ್ಲಿ ಕೇಳಿ..

ನಾನು ಹಿಮವತ್‌ (ಹೆಸರು ಬದಲಿಸಿದೆ) ಅಂತ. ಸೂರತ್‌ ನನ್ನ ಊರು. ನಿವೃತ್ತ ಅಧಿಕಾರಿ. ಬೆಂಗಳೂರಿಗೆ ಒಂದು ಕೆಲಸದಲ್ಲಿ ಬಂದಿದ್ದೆ. ಇಲ್ಲೇ ಒಂದು ಹೋಟೆಲ್‌ನಲ್ಲಿ ರೂಮ್‌ ಮಾಡಿದ್ದೆ. ನನಗೆ ಒಂದು ಬ್ಯಾಗ್‌ ಬೇಕಿತ್ತು. ಹಾಗಾಗಿ ನಾನು ನವೆಂಬರ್‌ 29ರಂದು ಸಂಜೆ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಅಲ್ಲಿ ಮಲ್ಟಿನ್ಯಾಷನಲ್‌ ಕಾಫಿ ಚೈನ್‌ನ ಒಂದು ಔಟ್‌ ಲೆಟ್‌ ಎದುರು ನಿಂತಿದ್ದಾಗ ಒಬ್ಬ ಹುಡುಗಿ ಪರಿಚಯ ಆದ್ಳು. ನಾವಿಬ್ಬರೂ ಮಾತನಾಡಿಕೊಂಡೆವು.

ನಾನೂ ಸೂರತ್‌ ನಿಂದ ಬಂದಿದ್ದೆ. ಬೆಂಗಳೂರಿನ ಹುಡುಗಿಯರು ಹೇಗೆ ಅಂತ ನೋಡುವ ಆಸೆ ಆಯಿತು. ಇಬ್ಬರೂ ಒಪ್ಪಿಕೊಂಡು ಒಂದು ಸುತ್ತಿನ ಸುಖ ಪಡೆಯುವುದು ಎಂದು ತೀರ್ಮಾನ ಮಾಡಿದೆವು. ಇದು ಸೆಕ್ಸ್‌ ಫಾರ್‌ ಮನಿ ಡೀಲ್‌.

ಅಷ್ಟೆಲ್ಲ ಆಗುವಾಗ ರಾತ್ರಿ 9.35 ಆಗಿತ್ತು. ಆಕೆ ಒಂದು ಆಟೊವನ್ನು ಕರೆದು ನನ್ನನ್ನು ಇಂದಿರಾನಗರದ ಒಂದು ಕೋಣೆಗೆ ಕರೆದುಕೊಂಡು ಹೋದಳು. ಅಲ್ಲಿ ಹೋಗಿ ನೋಡಿದರೆ ಅಲ್ಲಿ ಇನ್ನೊಬ್ಬಳಿದ್ದಳು. ನಾವು ಇಬ್ಬರೂ ಸೇವೆಗೆ ಸಿದ್ಧ ಎಂದು ಅವರು ಹೇಳಿದರು. ನಂಗೂ ಖುಷಿಯಾಯಿತು.

ಕೆಲವು ನಿಮಿಷ ಮಾತನಾಡಿ ನಾನು ನನ್ನ ಖುಷಿಯ ಕ್ಷಣಗಳನ್ನು ಪಡೆಯುವ ಉದ್ದೇಶದಿಂದ ಸಿದ್ಧನಾಗುತ್ತಿದ್ದರೆ ಅವರಿಬ್ಬರೂ ರೆಡಿ ಆದರು. ಆದರೆ, ನಾನು ಅವರಿಬ್ಬರನ್ನೂ ನೋಡಿ ಬೆಚ್ಚಿ ಬಿದ್ದೆ. ಯಾಕೆಂದರೆ, ಅವರಿಬ್ಬರು ಹುಡುಗಿಯರಾಗಿರಲೇ ಇಲ್ಲ. ಇಬ್ಬರೂ ತೃತೀಯ ಲಿಂಗಿಗಳಾಗಿದ್ದರು.

ಯಾಕೆ ಹೀಗೆ ಮೋಸ ಮಾಡಿದೆ ಎಂದು ನಾನು ಜಗಳ ಮಾಡಿದೆ. ಆಗ ನನ್ನನ್ನು ಕರೆದುಕೊಂಡು ಬಂದವಳು, ನಿನಗೆ ವಯಸ್ಸಾಗಿದೆ, ಇದರಲ್ಲೇ ಅಜಸ್ಟ್‌ ಮಾಡಿಕೋ ಎಂದು ಹೇಳಿದಳು. ನಾನು ಆಕೆ ಮೋಸ ಮಾಡಿದ್ದಕ್ಕೆ ಬೈದೆ. ಆಗ ಅವರಿಬ್ಬರೂ ಸೇರಿ ನನ್ನ ಮೇಲೆ ಮುಗಿಬಿದ್ದರು.

ನನ್ನ ಕೈಯಲ್ಲಿದ್ದ 1000೦ ರೂ. ಭಾರತೀಯ ಕರೆನ್ಸಿ ಮತ್ತು 9500 ರೂ. ಮೌಲ್ಯದ 4000 ಥಾಯ್‌ ಬಹ್ತ್‌ ಕಿತ್ತುಕೊಂಡರು. ನನಗೆ ಬೆದರಿಕೆ ಹಾಕಿ ನನ್ನ ಮೊಬೈಲನ್ನು ಕಿತ್ತುಕೊಂಡರು. ನನ್ನ ಡಿಜಿಟಲ್‌ ಪೇಮೆಂಟ್‌ ಆಪ್‌ನ ಪಾಸ್‌ ವರ್ಡ್‌ ಕೂಡಾ ಬೆದರಿಸಿ ಪಡೆದುಕೊಂಡರು. ಅದರಿಂದ 30000 ರೂ.ವನ್ನು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡರು.

ಯಾರಿಗಾದರೂ ಈ ವಿಷಯ ಹೇಳಿದರೆ ಹುಷಾರ್‌ ಎಂದು ಹೆದರಿಸಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ನಾನು ಸಿಕ್ಕಿದ ರಿಕ್ಷಾ ಹಿಡಿದುಕೊಂಡು ನನ್ನ ರೂಮಿಗೆ ಬಂದೆ. ಮಾರನೇ ದಿನ ಮತ್ತೆ ಅದೇ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಆಕೆ ಅಲ್ಲೇ ಬರಬಹುದಾ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಆಕೆ ಬಂದಿರಲಿಲ್ಲ.

ನಂತ್ರ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಗೆ ಹೋಗಿ ದೂರು ನೀಡಿದೆ. ಬೆಂಗಳೂರಿನಲ್ಲಿ ಪುರುಷರನ್ನು ಈ ರೀತಿಯಲ್ಲಿಯೂ ಯಾಮಾರಿಸುತ್ತಾರೆ ಎಂದು ಹೇಳಿದೆ.

—-

ಇದಿಷ್ಟು ಹಿಮವತ್‌ ಅಲ್ಲಿ ನಡೆದುದನ್ನು ಹೇಳಿದ್ದು. ಈಗ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು ಏನು ಹೇಳುತ್ತಾರೆ ಕೇಳಿ..

ಇದನ್ನೂ ಓದಿ: Fraud Case : ಬಿಟ್ಟೋದ ಗಂಡನ್ನ ಸೇರಿಸ್ತೀನಿ ಅಂತ FDA ಅಧಿಕಾರಿ ಮಹಿಳೆಗೆ ಲಕ್ಷ ಲಕ್ಷ ಮೋಸ!

ಆ ನಿವೃತ್ತ ಅಧಿಕಾರಿ ಆ ಕೋಣೆಗೆ ಹೋಗಿದ್ದು ನಿಜ ಇರಬಹುದು. ಆದರೆ, ಅವರು ಹೆಣ್ಣು ಎಂದುಕೊಂಡೇ ಹೋಗಿದ್ದರಾ ಅಥವಾ ತೃತೀಯ ಲಿಂಗಿ ಎಂದು ಗೊತ್ತಿದ್ದೇ ಹೋಗಿದ್ದಾರಾ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಅವರು ನೀಡಿದ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಿ ವಿಚಾರಣೆ ನಡೆಸುತ್ತೇವೆ. ಬಳಿಕ ವಿಷಯ ಸ್ಪಷ್ಟವಾಗಲಿದೆ.

ಇಷ್ಟು ಹೇಳಿದ ಮೇಲೆ ಒಂದು ವಿಷಯ ಹೇಳಲೇಬೇಕು: ನೀವು ಅಪರಿಚಿತ ಹೆಣ್ಮಕ್ಕಳ ಜತೆ ವ್ಯವಹರಿಸುವಾಗ ಎಚ್ಚರವಾಗಿರಿ. ಮೋಸ ಹೋಗಬೇಡಿ. ಇದು ಪೊಲೀಸರ ಸಲಹೆಯೂ ಹೌದು.

Continue Reading

ಕರ್ನಾಟಕ

Ceiling collapses : ಕ್ರೇನ್‌ ಸೀಲಿಂಗ್‌ ಕಟ್‌ ಆಗಿ ಬಾವಿಗೆ ಬಿದ್ದ ಕಾರ್ಮಿಕ ಸಾವು, ಮತ್ತೊಬ್ಬ ಗಂಭೀರ!

Ceiling collapses : ಆಹಾರ ಗೋದಾಮಿನಲ್ಲಿ ಯಂತ್ರ ಕುಸಿದು 7 ಕಾರ್ಮಿಕರು ಮೃತಪಟ್ಟ ದುರಂತ ಮರೆಯಾಗುವ ಮುನ್ನವೇ ಚಿಕ್ಕೋಡಿಯಲ್ಲಿ ಕ್ರೇನ್‌ ಸೀಲಿಂಗ್‌ ಕಟ್ಟಾಗಿ ಕಾರ್ಮಿಕನೊರ್ವ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

VISTARANEWS.COM


on

By

Labourer dies after crane ceiling cut another critical
Koo

ಚಿಕ್ಕೋಡಿ: ಬಾವಿಯಲ್ಲಿ ಕೆಲಸ ಮಾಡುವಾಗ ಕ್ರೇನ್ ಸೀಲಿಂಗ್ (Ceiling collapses) ಕಟ್ಟಾಗಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಘಟನೆ (Crane collapses) ನಡೆದಿದೆ. ಮಧ್ಯಪ್ರದೇಶದ ಸಂತೋಷ ಮುಣ್ಣಾ ವಿಶ್ವಕರ್ಮ (28) ಮೃತ ದುರ್ದೈವಿ.

ಶಾವಂತ ಪಾಟೀಲ್ ಎಂಬ ರೈತರ ಜಮೀನಿನಲ್ಲಿ ಮಧ್ಯಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಳಗೆ ಇಳಿಯುವಾಗ ಕ್ರೇನ್ ಸಿಲ್ಲಿಂಗ್ ಕಟ್ಟಾಗಿ ಇಬ್ಬರು ಕಾರ್ಮಿಕರು ಬಾವಿಯ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸಂತೋಷ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

Labourer dies after crane ceiling cut another critical

ಗಾಯಗೊಂಡ ವ್ಯಕ್ತಿಯನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಪರಿಶೀಲನೆ ನಡೆಸಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗೋದಾಮಿನಲ್ಲಿ ಯಂತ್ರ ಕುಸಿತ; ಜೋಳದ ಮೂಟೆಗಳಡಿ ಸಿಲುಕಿದ 10 ಕಾರ್ಮಿಕರು

ವಿಜಯಪುರದ ಬಳಿಕ ನಂಜನಗೂಡಿನಲ್ಲೂ ದುರಂತ; ಕಾರ್ಮಿಕ ಸಾವು

ವಿಜಯಪುರದ ರಾಜಗುರು ಫುಡ್ಸ್ (Rajaguru Foods) ಗೋದಾಮಿನಲ್ಲಿ ಭಾರಿ ಯಂತ್ರ ಕುಸಿದು (godown tragedy) ಅದರಡಿ ಸಿಲುಕಿ ಏಳು ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟ ಘಟನೆಯ ಬೆನ್ನಿಗೇ ಮೈಸೂರಿನ ನಂಜನಗೂಡಿನಲ್ಲಿ (Mysore News) ತಲೆಗೆ ಮೆಷಿನ್ ಹೊಡೆದು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ (Labourer death). ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕೃಷಿ ಜಿಯೋ ಪ್ಯಾಕ್ ಪ್ರೈವೇಟ್ ಲಿಮಿಟೆಡ್ (Krishi Geopack Private ltd) ಕಾರ್ಖಾನೆಯಲ್ಲಿ ನಡೆದ ಘಟನೆಯಲ್ಲಿ ಆಶೀಶ್ ಸುಖದಾಸ್ ಪಾಟ್ಲೆ (24) ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದರು.

ಆಶೀಶ್‌‌ ಅವರು ನಾಲ್ಕು ವರ್ಷಗಳಿಂದ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅನುಭವಿ ಕಾರ್ಮಿಕರಾಗಿರುವ ಇವರು ಮೆಷಿನ್‌ಗೆ ದಾರವನ್ನು ಹಾಕುತ್ತಿದ್ದ ವೇಳೆ ತಲೆ ಮೆಷಿನ್‌ಗೆ ತಾಕಿದೆ. ತಲೆಗೆ ಮೆಷಿನ್ ಹೊಡೆದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹ ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಏನಾಗಿತ್ತು?

ವಿಜಯಪುರ ಕೈಗಾರಿಕಾ ಪ್ರದೇಶದ (Vijayapura News) ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಮೆಕ್ಕೆ ಜೋಳದ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳಡಿ 10ಕ್ಕೂ ಹೆಚ್ಚು ಕಾರ್ಮಿಕರು ಅದರಡಿ ಸಿಲುಕಿದ್ದರು. ಫುಡ್ ಪ್ರೊಸೆಸಿಂಗ್ ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಹಾರ ಮೂಲದ ಕಾರ್ಮಿಕರಾಗಿದ್ದರು. ಕಳೆದ ಹಲವು ವರ್ಷಗಳಿಂದ ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ 15 ಗಂಟೆಗಳಿಂದ 4 ಕ್ರೇನ್‌ ಹಾಗೂ ಜೆಸಿಬಿಗಳ ಮೂಲಕ ಸಂಸ್ಕರಣಾ ಘಟಕವನ್ನು ಎತ್ತಿ, ಅದರಡಿ ಸಿಲುಕಿದ ಕಾರ್ಮಿಕರ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.

ಇದುವರೆಗೆ ಐವರು ಮೃತ ಕಾರ್ಮಿಕರ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಇಬ್ಬರು ಕಾರ್ಮಿಕರನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರಿದಿದೆ. ಅವರೆಲ್ಲಾ ಬಹುತೇಕ ಬದುಕಿರುವ ಸಾಧ್ಯತೆಗಳು ಕ್ಷೀಣ ಎನ್ನಲಾಗುತ್ತಿದೆ. ಒಟ್ಟು 11 ಕಾರ್ಮಿಕರು ಅವಘಡದಲ್ಲಿ ಸಿಲುಕಿದ್ದರು. ಘಟನಾ ಸಂದರ್ಭದಲ್ಲಿ ಮೂವರು ಬಚಾವ್ ಆಗಿದ್ದರು. ಕಾರ್ಯಾಚರಣೆ ವೇಳೆ ಓರ್ವನನ್ನು ಸಿಬ್ಬಂದಿ ರಕ್ಷಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
war Between Sangeetha And Captain Snehith Gowda
ಬಿಗ್ ಬಾಸ್13 mins ago

BBK SEASON 10: ನೀನು ಯಾರಿಗೆ ʻಚೇಲಾʼ ಅಂತ ಗೊತ್ತು ʻಹೋಗೋಲೋʼ ಎಂದು ಸ್ನೇಹಿತ್‌ ಮೇಲೆ ರೊಚ್ಚಿಗೆದ್ದ ಸಂಗೀತಾ!

Captain Snehith Gowda Not Bother To Stop Physical Fight Between vinay and Karthik
ಬಿಗ್ ಬಾಸ್15 mins ago

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

woman eating
ಆರೋಗ್ಯ48 mins ago

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

viral video pak military officer
ದೇಶ1 hour ago

Viral video: ಭಾರತ ವಶಕ್ಕೆ, ಮೋದಿಗೆ ಸರಪಳಿಯ ಬಂಧನ! ಜೋಕ್‌ ಆದ ಪಾಕ್‌ ಸೇನಾಧಿಕಾರಿ!

Sonia Gandhi Will not choose me to pm post; Book on Pranab Mukherjee
ದೇಶ1 hour ago

ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

IPL Auction 1
ಕ್ರಿಕೆಟ್1 hour ago

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

RCB Team
ಕ್ರಿಕೆಟ್2 hours ago

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

arun murderd
ಕ್ರೈಂ2 hours ago

Murder Case: ಮುಂದಿನ ತಿಂಗಳು ಮದುವೆಯಾಗಲಿ‌ದ್ದ ಆಟೋ ಚಾಲಕನ ಬರ್ಬರ ಹತ್ಯೆ

dry fruits
ಆರೋಗ್ಯ2 hours ago

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

Sachin Pilot movements monitored, phone tracked Say OSD for Ashok Gehlot
ದೇಶ2 hours ago

ಸಚಿನ್ ಪೈಲಟ್ ಮೇಲೆ ನಿಗಾ, ಫೋನ್ ಕದ್ದಾಲಿಕೆ! ಸಿಎಂ ವಿಶೇಷ ಅಧಿಕಾರಿ ಹೇಳಿಕೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ12 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ13 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ13 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌