Site icon Vistara News

IPL ಕಥನ ಹೇಳುವ ಕ್ರಿಟಿಕಲ್‌ ಕೀರ್ತನೆಗಳು ಇಂದು ಬಿಡುಗಡೆ

ಬೆಂಗಳೂರು: ಐಪಿಎಲ್‌ 2022 ಈಗಾಗಲೇ ಚಾಲ್ತಿಯಲ್ಲಿದೆ. ಮುಂಬೈ ಮತ್ತು ಚೆನ್ನೈ ಅದಾಗಲೇ ಟೂರ್ನಿಯ ಮುಂದಿನ ಹಂತಕ್ಕೆ ಹೋಗುವ ಅವಕಾಶವನ್ನೂ ಕಳೆದುಕೊಂಡಿವೆ. ಕ್ರಿಕೆಟ್‌ ಆಟದ ಖುಷಿಯ ಜತೆ ಐಪಿಎಲ್‌ನಲ್ಲಿ ಸರ್ವೇಸಾಮಾನ್ಯವಾಗಿ ಕಿವಿಗೆ ಬಬೀಳೋ ಪದ ಅಂದರೆ ಅದುವೇ ಬೆಟ್ಟಿಂಗ್.‌ ಇದೇ ಕಥಾ ಹಂದರವನ್ನು ಇಟ್ಟುಕೊಂಡು ಬೆಟ್ಟಿಂಗ್‌ ಕುರಿತಂತೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಒಂದು ರಿಲೀಸ್‌ ಆಗುತ್ತಿದೆ. ಅದುವೇ ಕ್ರಿಟಿಕಲ್‌ ಕೀರ್ತನೆಗಳು.

ಹೌದು. ಶಿರ್ಷಿಕೆ ಕೇಳುವಾಗಲೇ ವಿಚಿತ್ರವಾಗಿದೆ ಎನ್ನಿಸುತ್ತದೆ. ಜನರು ಟ್ರೈಲರ್‌ ವೀಕ್ಷಿಸಿ ಇದಾಗಲೇ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಮಾರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕ್ರಿಟಿಕಲ್‌ ಕೀರ್ತನೆಗಳು ಶುಕ್ರವಾರ ತೆರೆ ಕಾಣುತ್ತಿದೆ.

ಇದನ್ನೂ ಓದಿ |Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್‌ ಅನೌನ್ಸ್!

ಆನಂದ್‌ ಯ್ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೈಲರ್‌ ಈಗಾಗಲೇ ರಿಲೀಸ್‌ ಆಗಿದೆ. ಐಪಿಎಲ್‌ ಬೆಟ್ಟಿಗ್‌ನಿಂದಾಗಿ ಹಣವನ್ನು ಹೇಗೆ ಕಳೆದುಕೊಳ್ಳುತ್ತಾರೆ ಎಂಬುದೇ ಸಿನಿಮಾ ದ ಒನ್‌ ಲೈನ್‌ ಸ್ಟೋರಿ. ಶೀವಸೇನಾ ಅವರ ಛಾಯಾಗ್ರಹಣವಿದ್ದು, ವೀರ್‌ ಸಮಥರ್‌ ಅವರ ಸಂಗೀತ ಚಿತ್ರಕ್ಕಿದೆ.

ತಬಲಾನಾಣಿ, ಸುಚೇಂದ್ರ ಪ್ರಸಾದ್‌, ರಾಜೇಶ್‌ ನಟರಂಗ, ತರಂಗವಿಶ್ವ, ದೀಪಾ ಜಗದೀಶ್‌, ಅಪೂರ್ವ ಭಾರದ್ವಾಜ್‌, ಅರುಣ ಬಾಲ್‌ರಾಜ್‌, ಧರ್ಮ, ದಿನೇಶ್‌ ಮಂಗಳೂರು, ರಘು ಪಾಂಡೇಶ್ವರ, ಯಶಸ್‌ ಅಭಿ, ಗುರುರಾಜ ಹೊಸಕೋಟೆ, ಮಾ.ಮಹೇಂದ್ರ, ಮಾ.ಪುಟ್ಟರಾಜು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. . ಕೇಸರಿ ಫಿಲಂಸ್‌ ಕ್ಯಾಪ್ಚರ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಇದನ್ನೂ ಓದಿ |ಅದೊಂದು ರೂಮರ್‌ನಿಂದ ನನ್ನನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಅಂತಾರೆ ನಟಿ ಕಂಗನಾ!

Exit mobile version