ಬೆಂಗಳೂರು : 2019ರಲ್ಲಿ ಕೋವೀಡ್‌ನಿಂದಾಗಿ ರಾಜ್ಯದಲ್ಲಿ ಮೊದಲ ಲಾಕ್‌ಡೌನ್ ಘೋಷಿಸಿತ್ತು. ಲಾಕ್ ಡೌನ್ ಸಂದರ್ಭ ವಲಸೆ ಕಾರ್ಮಿಕರು ಅತಂತ್ರರಾಗಿದ್ದರು. ಬಡ ಕಾರ್ಮಿಕರಿಗೆ ಪುಡ್ ಕಿಟ್ ವಿತರಿಸಲು ಸರಕಾರ ಹಣ ಬಿಡುಗಡೆ ಮಾಡಿದ್ದನ್ನು ಹಂಚುವಾಗ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಆ ಸಂದರ್ಭದಲ್ಲಿ ಯೋಜನೆಯ ಹೊಣೆ ಹೊತ್ತಿದ್ದ IAS ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ಆರ್.ಟಿ.ಐ ಕಾರ್ಯಕರ್ತ ಕೆ.ಸಿ. ರಾಜಣ್ಣ ದೂರು ನೀಡಿದ್ದಾರೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪುಡ್ ಕಿಟ್ ವಿತರಿಸುವ ಜವಾಬ್ದಾರಿ ಹೊತ್ತಿತ್ತು. ಖಾಸಗಿ ಸಂಸ್ಥೆಗಳ ಮೂಲಕ ಸಿದ್ಧ ಪುಡ್ ಕಿಟ್ ಪಡೆದು ಸುಮಾರು ₹25,73,69,236 ಕೋಟಿ(25.73 ಕೋಟಿ) ಮೊತ್ತದ ಕಿಟ್ ಕಾರ್ಮಿಕರಿಗೆ ಇಲಾಖೆ ವಿತರಿಸಿತ್ತು.
ಆದರೆ ವಿತರಿಸುವ ಸಂಧರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಹಾರ ಪದಾರ್ಥ ಗುಣಮಟ್ಟ ಹಾಗು ತೂಕದಲ್ಲಿ ಗೋಲ್ಮಾಲ್ ಆಗಿದೆ. ಕಾರ್ಮಿಕರ ಹೆಸರಿನಲ್ಲಿ ಅವ್ಯವಹಾರ ನಡೆಸಿದ IAS ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ಆರ್.ಟಿ.ಐ ಕಾರ್ಯಕರ್ತ ದೂರಿನಲ್ಲಿ ತಿಳಿಸಿದ್ದಾರೆ. ಹಿಂದಿನ ಕಾರ್ಯನಿರ್ವಹಣಾಧಿಕಾರಿ ಜ್ಯೋತ್ನ, ಪ್ರಭಾರ ಕಾರ್ಯದರ್ಶಿ ಅಕ್ರಂ ಪಾಷ ಹಾಗು ಇಲಾಖೆ ಸಿಬ್ಬಂದಿಗಳ ಮೇಲೆ ಆರೋಪ ಮಾಡಿದ್ದಾರೆ.
ನಗರದಲ್ಲಿ ಅತಂತ್ರರಾಗಿದ್ದ ಕಾರ್ಮಿಕರ ಸಂಖ್ಯೆ:
ಪೂರ್ವ ವಿಭಾಗ | 4497 |
ಪಶ್ಚಿಮ ವಿಭಾಗ | 5456 |
ಉತ್ತರ ವಿಭಾಗ | 2694 |
ದಕ್ಷೀಣ ವಿಭಾಗ | 6140 |
ಕೇಂದ್ರ ವಿಭಾಗ | 2133 |
ಈಶಾನ್ಯ ವಿಭಾಗ | 11147 |
ಆಗ್ನೇಯ ವಿಭಾಗ | 3468 |
ವೈಟ್ ಫೀಲ್ಡ್ ವಿಭಾಗ | 36082 |
ಒಟ್ಟು ಅತಂತ್ರ ವಲಸಿಗರ ಸಂಖ್ಯೆ | 71617 |