ಬೆಂಗಳೂರು: ಸೈಬರ್ ಕ್ರೈಂ ವಿಭಾಗ ಓಪನ್ ಆದ ಬಳಿಕದ ಅತಿ ದೊಡ್ಡ ವಂಚನೆ ಕೇಸೊಂದು ದಾಖಲಾಗಿದ್ದು, ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಖದೀಮರು ಒಂದಲ್ಲ, ಎರಡಲ್ಲ ಬರೋಬ್ಬರಿ 41 ಕೋಟಿ ರೂ. ವಂಚನೆ ಮಾಡಿದ್ದು, ವಂಚನೆಯಾಗಿ ಎರಡು ತಿಂಗಳಾದರೂ ಯಾವುದೆ ಕ್ಲೂ ಸಿಗದೆ ಪೊಲೀಸರು ಒದ್ದಾಡುತ್ತಿದ್ದಾರೆ.
ಎಚ್‌ಎಸ್‌ಆರ್ ಲೇಔಟ್‌ನ ಉದ್ಯಮಿಯಾಗಿರುವ ಮಧುಕರ್ ದಹಾಕೆ ಎಂಬವರಿಗೆ ಸೇರಿದ ಕ್ರಿಪ್ಟೋಕರೆನ್ಸಿ ಅಕೌಂಟ್‌ನಿಂದ ಈ ಹಣ ಮಾಯವಾಗಿದೆ. ಇವರ ಖಾತೆಯಿಂದ ಸೈಬರ್ ವಂಚಕರು 41 ಕೋಟಿ ಟ್ರಾನ್ಸ್‌ಫರ್ ಮಾಡಿಕೊಂಡಿದ್ದಾರೆ. ವಿಚಿತ್ರವೆಂದರೆ, ಇವರಿಗೆ ಈ ಕುರಿತು ಯಾವುದೇ ಒಟಿಪಿ ಬಂದಿಲ್ಲ, ಯಾವುದೇ ಕರೆ ಬಂದಿಲ್ಲ, ಏನೂ ಮಾಹಿತಿ ದೊರೆತಿಲ್ಲ.
ಒಂದು ತಿಂಗಳ ಹಿಂದೆ ಆಗ್ನೇಯ ವಿಭಾಗದ ಸೆನ್ ಠಾಣೆಗೆ ಮಧುಕರ್ ಧಹಾಕೆ ದೂರು ನೀಡಿದ್ದರು. ಸದ್ಯ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಡಿಜಿಪಿ ಆದೇಶಿಸಿದ್ದಾರೆ. ನಾಲ್ಕೈದು ರಾಷ್ಟ್ರಗಳನ್ನು ಸುತ್ತಾಡಿದರೂ ವಂಚಕರ ಸುಳಿವು ಮಾತ್ರ ಸಿಕ್ಕಿಲ್ಲ. ಮಧುಕರ್ ಹೊಂದಿದ್ದ Binance ಎಂಬ ಕ್ರಿಪ್ಟೋಕರೆನ್ಸಿ, ಜಗತ್ತಿನಲ್ಲೇ ಸುರಕ್ಷಿತ ಎನ್ನಲಾಗಿತ್ತು ಹಾಗೂ ಹೆಚ್ಚು ಟ್ರೇಡಿಂಗ್ ಹೊಂದಿತ್ತು. ಇದೀಗ ಈ ವಂಚನೆಯ ಹಿನ್ನೆಲೆಯಲ್ಲಿ ಈ ಸುರಕ್ಷತೆ ಪೊಳ್ಳೆಂದು ಸಾಬೀತಾಗಿದೆ.
ಇದನ್ನೂ ಓದಿ | Cyber Crime | ನ್ಯಾಯಾಧೀಶರ ಹೆಸರಿನಲ್ಲಿಯೂ ಸೈಬರ್ ದೋಖಾ! ಹೈಕೋರ್ಟ್ ಪಿಆರ್‌ಒ ಅಕೌಂಟ್‌ಗೆ ಕನ್ನ