Site icon Vistara News

Drug peddlers‌ | ಸಿಲಿಕಾನ್‌ ಸಿಟಿಯಲ್ಲಿ ಡ್ರಗ್‌ ಪೆಡ್ಲರ್‌ಗಳ ಹಾವಳಿ : ಪೊಲೀಸರ ಮೆಗಾ ಕಾರ್ಯಾಚರಣೆ

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ದಿನೇ ದಿನೇ ಡ್ರಗ್‌ ಪೆಡ್ಲರ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಸಿಟಿ ಮಾರ್ಕೆಟ್‌, ಮಟನ್‌ ಮಾರ್ಕೆಟ್‌, ಸಾದಹಳ್ಳಿ ಗೇಟ್‌ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಉದ್ಯಮಿಯೂ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಕೇಸಲ್ಲಿ‌ ಉದ್ಯಮಿಯ ರೋಚಕ ಸ್ಟೋರಿ

ಸಾದಹಳ್ಳಿ ಗೇಟ್ ಬಳಿಯ ಮೆಕ್ ಡೊನಾಲ್ಡ್ ಬಳಿ ಉದ್ಯಮಿ‌ ಶ್ರೀನಿವಾಸ್ ದಳವಾಯಿ ಎನ್‌ಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೋಟ್ಯಾಧಿಪತಿ ಉದ್ಯಮಿ ಆಗಿರುವ ಶ್ರೀನಿವಾಸ್‌ಗೆ ಡ್ರಗ್‌ ತಂದುಕೊಟ್ಟಿದ್ದು ಟಿವಿಎಸ್ ಎಕ್ಸ್‌ಎಲ್‌ನಲ್ಲಿ ಎಂದು ತಿಳಿಯಲ್ಪಟ್ಟಿದೆ. ಮಧ್ಯರಾತ್ರಿ ಏರ್‌ಪೋರ್ಟ್ ರಸ್ತೆಯಲ್ಲಿ ಮೆಗಾ ಕಾರ್ಯಾಚರಣೆ ವೇಳೆಯಲ್ಲಿ ಉದ್ಯಮಿ‌ ಶ್ರೀನಿವಾಸ್ ದಳವಾಯಿ ಪೊಲೀಸರಿಗೆ ಲಾಕ್‌ ಆಗಿದ್ದಾನೆ.

ಗಿರೀಶ್ ಎಂಬಾತ ಟಿವಿಎಸ್ ಎಕ್ಸ್‌ಎಲ್‌ನಲ್ಲಿ ಉದ್ಯಮಿ ಶ್ರೀನಿವಾಸ್‌ಗೆ ಒಂದು ಗ್ರಾಂ ಕೊಕೈನ್ ತಂದುಕೊಟ್ಟಿದ್ದ. ಶ್ರೀನಿವಾಸ್ ದಳವಾಯಿಗೆ ಗಿರೀಶ್ ಡ್ರಗ್ಸ್ ಪಾಕೇಟ್ ನೀಡುತ್ತಿದ್ದಂತೆ ಎನ್‌ಸಿಬಿ ಅಧಿಕಾರಿಗಳು ಸುತ್ತುವರಿದಿದ್ದಾರೆ.

ಉದ್ಯಮಿ‌ ಶ್ರೀನಿವಾಸ್ ದಳವಾಯಿ

ಎಂಜಿ ರಸ್ತೆಯ ಪ್ರತಿಷ್ಠಿತ ಕಿಡ್ಸ್ ಕ್ಯಾಂಪ್ ಮೇಲಿರುವ ಪೆಂಟ್ ಹೌಸ್, ಪಾರ್ಕ್ ಟ್ರೀ ಅವೆನ್ಯೂ ಹೊಟೇಲ್‌ನಲ್ಲಿ ಸೆಲೆಕ್ಟೆಡ್ ವ್ಯಕ್ತಿಗಳೊಂದಿಗೆ ಮಾತ್ರ ಶ್ರೀನಿವಾಸ್‌ ಪಾರ್ಟಿ ಮಾಡುತ್ತಿದ್ದ.  ವಿದೇಶಿ ಡ್ರಗ್ ಪೆಡ್ಲರ್‌ಗಳಿಂದ ಡ್ರಗ್ಸ್ ತರೆಸಿಕೊಳ್ಳುತ್ತಿದ್ದ,  ಹಲವು ಡ್ರಗ್ ಪೆಡ್ಲರ್‌ಗಳು ಶ್ರೀನಿವಾಸ್ ಡ್ರಗ್ ಕಲೆಕ್ಟ್ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಪೆಡ್ಲರ್‌ಗಳ ಮಾಹಿತಿ ಮೇರೆಗೆ ಹೈದರಾಬಾದ್‌ನಿಂದ ಬರುವಾಗ ಶ್ರೀನಿವಾಸನನ್ನು ಎನ್‌ಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಸದಾಶಿವನಗರ ಮನೆ ಮೇಲೆ ದಾಳಿ ನಡೆಸಿದ್ದರು. ಕ್ಯಾರವನಲ್ಲೇ ಸುತ್ತಾಡುತ್ತಿದ್ದ ಶ್ರೀನಿವಾಸ್ ದಿನಕ್ಕೆ ₹35 ಲಕ್ಷ ಟರ್ನ್ ಓವರ್ ಮಾಡುತ್ತಿದ್ದ.

ಮೊದಲೆ ಸಿಕ್ಕ ಖಚಿತ ಮಾಹಿತಿ ಆಧರಿಸಿ‌ ಸ್ಥಳದಲ್ಲಿ ಎನ್‌ಸಿಬಿ ಅಧಿಕಾರಿಗಳು ಕಾಯುತ್ತಿದ್ದರು. ಅದರಂತೆ ಹೈದರಾಬಾದ್ ನಿಂದ ಬರುತ್ತಿದ್ದ ಉದ್ಯಮಿ‌ ಶ್ರೀನಿವಾಸ್ ಸಾದಹಳ್ಳಿ ಗೇಟ್ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಶ್ರೀನಿವಾಸ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಿಟಿ ಮಾರ್ಕೆಟ್‌ ಬಳಿ ಮಾರಾಟ

ಸುನೀಲ್ ಕುಮಾರ್ ವಿಸ್ನೋಯ್

ಸಿಟಿ ಮಾರ್ಕೆಟ್‌, ಮಟನ್‌ ಮಾರ್ಕೆಟ್‌ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಸುನೀಲ್ ಕುಮಾರ್ ವಿಸ್ನೋಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ದಾಳಿ ನಡೆಸಿದಾಗ ಡ್ರಗ್‌ ಪತ್ತೆಯಾಗಿದ್ದು, ಪರಿಶೀಲನೆ ವೇಳೆ 90 ಗ್ರಾಂ ಎಂಡಿಎಂಎ, 33 ಗ್ರಾಂ ಬ್ರೌನ್ ಶುಗರ್ ,300 ಗ್ರಾಂ ಅಫೀಮ್ ಸಿಕ್ಕಿದೆ. ಬಂಧಿತನ ಮೇಲೆ ತಮಿಳುನಾಡಿನ ಪೆಳ್ಳಿಕೊಂಡದಲ್ಲಿ ಕೂಡ ಎನ್ ಡಿಪಿಎಸ್ ಪ್ರಕರಣ ದಾಕಲಾಗಿತ್ತು. ಸದ್ಯ ಸಿಟಿ ಮಾರ್ಕೆಟ್ ಪೊಲೀಸರಿಂದ ಆರೋಪಿಯ ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ.  

ಇದನ್ನೂ ಓದಿ | Drug peddler ಬಂಧನ! ₹20 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ವಿದ್ಯಾರ್ಥಿಗಳಿಗೆ ಚರಸ್‌ ಮಾರಾಟ

ರವಿತೇಜ

ಪುಟ್ಟೇನಹಳ್ಳಿ ಪ್ರದೇಶದಲ್ಲಿ ಸಿಸಿಬಿ ಪೊಲೀಸರ ಕಾರ್ಯಚರಣೆಯಲ್ಲಿ ಡ್ರಗ್‌ ಪೆಡ್ಲರ್ ರವಿತೇಜನನ್ನು ಪೊಲೀಸರು ಬಂಧಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ಮಾದಕ ವಸ್ತು ತರಿಸಿಕೊಂಡು ಸಿಟಿಯಲ್ಲಿ ಹಣ ಮಾಡುತ್ತಿದ್ದ. ನಿಷೇದಿತ ಚರಸ್ಸ್ ಅನ್ನು ವಿದ್ಯಾರ್ಥಿಗಳಿಗೆ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಮಾರಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿ ಬಂಧಿತ ಆರೋಪಿ ರವಿತೇಜನಿಂದ ಸುಮಾರು ₹8 ಲಕ್ಷ ಮೌಲ್ಯದ ಡ್ರಗ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Drug peddlers | ಎರಡು ಪ್ರಕರಣದಲ್ಲಿ ನಾಲ್ವರ ಬಂಧನ

Exit mobile version