ಬೆಂಗಳೂರು: ಡ್ರಗ್ ಮಾಫಿಯಾ (Drugs Mafia) ಪೋಸ್ಟ್ ಆಫೀಸಿಗೂ ತಟ್ಟಿದ್ದು ಇತ್ತೀಚೆಗಲ್ಲ. ಈ ಹಿಂದೆ ಕೂಡ ಫಾರೀನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ ಡ್ರಗ್ಸ್‌ಗಳು ಸಿಕ್ಕಿದ್ದವು. ಈಗ ಮತ್ತೊಮ್ಮೆ ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ.
ಚಾಮರಾಜಪೇಟೆ ಫಾರೀನ್ ಪೋಸ್ಟ್ ಆಫೀಸ್‌ನಲ್ಲಿ ಡ್ರಗ್ಸ್ ಮಾಫಿಯಾ ನಡೆದಿದೆ. ವಿದೇಶದಿಂದ ಬರುವ ಪಾರ್ಸಲ್‌ಗಳಲ್ಲಿ ಡ್ರಗ್ಸ್‌ಗಳು ಬರುತ್ತಿದೆ. ದುಬಾರಿ ಬೆಲೆಯ ಎಂಡಿಎಂಎ, ಬ್ರೌನ್ ಶುಗರ್, ಕೊಕೇನ್ ಸೇರಿದಂತೆ ಹಲವು ಮಾದರಿಯ ಡ್ರಗ್ ಪತ್ತೆಯಾಗಿವೆ.
ಬೇರೆಯದೆ ವಸ್ತುಗಳ ಹೆಸರಿನಲ್ಲಿ ವಿದೇಶದಿಂದ ಬರುತ್ತಿರುವ ಪಾರ್ಸಲ್ ಇದಾಗಿದೆ. ಅಪರಿಚಿತ ವಿಳಾಸವಿರುವ ಈ ಮಾದಕ ವಸ್ತುಗಳನ್ನು ಪಡೆದು , ಸಂಬಂಧಪಟ್ಟಂತಹ ಡ್ರಗ್ ಪೆಡ್ಲರ್‌ಗಳಿಗೆ ರವಾನೆ ಮಾಡಲಾಗುತ್ತದೆ. ಇಂತಹ ಪ್ಯೂರ್ ಡ್ರಗ್ಸ್‌ಗಳಿಗೆ ಬ್ಲಾಕ್ ಮಾರ್ಕೆಟ್‌ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ವಿದೇಶದಿಂದ ಬರುವ ಪ್ಯೂರ್ ಡ್ರಗ್ಸ್‌ಗಳನ್ನು ಪಡೆದು ಅದರಿಂದ ಮತ್ತಷ್ಟು ಡ್ರಗ್‌ಗಳನ್ನು ಮಾಡಬಹುದಾಗಿದೆ.
ಇದನ್ನೂ ಓದಿ: Drugs Mafia: ಥೈಲ್ಯಾಂಡ್ ಟು ದುಬೈ ಡ್ರಗ್ ಮಾಫಿಯಾಗೆ ಇಂಡಿಯಾನೆ ಮೈನ್ ಲಿಂಕ್; 3 ಕೋಟಿ ಮೌಲ್ಯದ ಗಾಂಜಾ ವಶ
ಅಂದರೆ ಒಂದು ಗ್ರಾಂ ಪ್ಯೂರ್ ಡ್ರಗ್‌ನಿಂದ ಹತ್ತು ಗ್ರಾಂನಷ್ಟು ಡ್ರಗ್‌ಗಳನ್ನು ತಯಾರಿಸಬಹುದು. ಹೀಗಾಗಿ ಇಂತಹ ಪ್ಯೂರ್ ಸಿಂಥಟಿಕ್ ಡ್ರಗ್‌ಗಳನ್ನು ವಿದೇಶದಲ್ಲಿ ಸಿಗುವ ಹಿನ್ನೆಲೆಯಲ್ಲಿ ಅದನ್ನು ತರಿಸಿಕೊಳ್ಳಲು ಫಾರಿನ್ ಪೋಸ್ಟ್ ಆಫೀಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಹಿಂದೆ ಕೂಡ ಡ್ರಗ್ ವಿಚಾರವಾಗಿ ದಾಳಿ ನಡೆಸಿದಾಗಲು ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಸದ್ಯ ಈ ಸಲವು ಕೂಡ ಅಪಾರ ಪ್ರಮಾಣದಲ್ಲಿ ಡ್ರಗ್ ಪತ್ತೆಯಾಗಿದೆ.
ಇದರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅಕ್ಟೋಬರ್ ಒಂದನೇ ತಾರೀಖು ಫಾರಿನ್ ಪೋಸ್ಟ್ ಆಫೀಸ್‌ಗೆ ದಾಳಿ ನಡೆಸಿದಾಗ, ಸುಮಾರು 626 ಸಿಂಥಟಿಕ್ ಡ್ರಗ್ ಪಾರ್ಸಲ್‌ಗಳು ಸಿಕ್ಕಿದೆ. 2018ರಂದು ದಾಳಿ ನಡೆಸಿದಾಗ ಡ್ರಗ್ ಸಿಕ್ಕಿತ್ತು. ಹೀಗಾಗಿ ಅಂದಿನಿಂದ ಇಂದಿನವರೆಗೆ ಪೊಲೀಸರು ತಮ್ಮ ಮೇಲೆ ಕಣ್ಣೀಟ್ಟಿರುತ್ತಾರೆಂಬ ಕಾರಣಕ್ಕೆ ಪಾರ್ಸಲ್‌ಗಳನ್ನು ಪಡೆಯಲು ಯಾರು ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಅನೇಕ ಪಾರ್ಸಲ್‌ಗಳು ಪೋಸ್ಟ್ ಆಫೀಸ್‌ನಲ್ಲೆ ಬಿದ್ದಿದೆ.
ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು , ಮಾಹಿತಿ ಬಂದ ಕಡೆ ದಾಳಿ ನಡೆಸುತ್ತಲೆ ಇದ್ದಾರೆ. ಅದೇ ರೀತಿ ಫಾರೀನ್ ಪೋಸ್ಟ್ ಮೇಲೆ ಕೂಡ ದಾಳಿ ನಡೆಸಲಾಗಿದೆ. ಸದ್ಯ ಯಾವ ಹೆಸರಿಗೆ ಪಾರ್ಸಲ್‌ಗಳು ಬಂದಿದೆ ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ