ಬೆಂಗಳೂರು: ಸೆರಲ್ಯಾಕ್ ಪ್ಯಾಕ್‌ನಲ್ಲಿ 6 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ (Drugs Seized) ಸಪ್ಲೈ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರ ಮಾಡಲು ಬ್ಯುಸಿನೆಸ್ ವೀಸಾದಲ್ಲಿ ಬಂದಿದ್ದ ವಿದೇಶಿ ಪ್ರಜೆಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ಮುಂಬೈನ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದ ಎಂಡಿಎಂ ಪೌಡರ್ ಅನ್ನು ಮಕ್ಕಳು ಸೇವಿಸುವ ಸೆರಲ್ಯಾಕ್, ಕಾರ್ನ್ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ, ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದ. ಬಳಿಕ ಸಣ್ಣ ಸಣ್ಣ ಪ್ಯಾಕ್ ಮಾಡಿ ಡೀಲರ್‌ಗಳಿಗೆ ಮಾರಾಟ ಮಾಡಲಾಗುತ್ತಿತ್ತು.
ನೈಜಿರೀಯ ಮೂಲದ ಆರೋಪಿಯೊಬ್ಬ ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ನಾಲ್ಕು ಕೆಜಿ ಡ್ರಗ್‌ನನ್ನು ಮನೆಯಲ್ಲಿ ಸಂಗ್ರಹಿಸಿದ್ದ. ಎಲೆಕ್ಟ್ರಾನಿನ್ ಸಿಟಿ ಪೊಲೀಸ್ ಠಾಣ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಸೀಜ್ ಮಾಡಲಾಗಿದ್ದು, ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಡ್ರಗ್ ಪೆಡ್ಲರ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಡ್ರೈವಿಂಗ್ ಜತೆಗೆ ಡ್ರಗ್ ಸೇಲ್
ಓಲಾ, ಉಬರ್ ಡ್ರೈವಿಂಗ್ ಜತೆ ಜತೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಕೋಟಿ 50 ಲಕ್ಷ ಮೌಲ್ಯದ 19.9 ಎಂಡಿಎಂಎ ಕ್ರಿಸ್ಟಲ್, 746 ಕೊಕೇನ್ ವಶಕ್ಕೆ ಪಡೆಯಲಾಗಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಾಸವಾಗಿದ್ದ.
ಇದನ್ನೂ ಓದಿ: Assault Case : ರಾಜಧಾನಿಯಲ್ಲಿ ನಿಲ್ಲದ ಪುಂಡರ ಪುಂಡಾಟ; ಕಾರು ಚಾಲಕನ ಚೇಸ್ ಮಾಡಿ ಹಲ್ಲೆ
ಇಬ್ಬರು ಮನೆಗಳ್ಳರ ಬಂಧನ
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಮನೆಗಳ್ಳರನ್ನು ಬಂಧಿಸಿದ್ದಾರೆ. ಇಬ್ಬರು ಮನೆಗಳ್ಳರಿಂದ 28 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡು ಮೂಲದ ದಿನಕರ್, ರಘುರಾಮನ್ ಬಂಧಿತ ಆರೋಪಿಗಳಾಗಿದ್ದಾರೆ.
ಎಷ್‌ಎಸ್‌ಆರ್ ಲೇಔಟ್‌ನ 1ಸೆಕ್ಟರ್‌ನ ನಿವಾಸಿಯೊಬ್ಬರು ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಕಿಟಕಿ ಗ್ರಿಲ್ ಕಟ್ ಮಾಡಿ ಮನೆಯೊಳಗೆ ಪ್ರವೇಶ ಮಾಡಿದ್ದ ಇವರಿಬ್ಬರು 430 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಕದ್ದಿದ್ದರು. ಬಳಿಕ ಪಾಂಡಿಚೇರಿಯ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಸಿಬಿಐ ನಿರ್ದೇಶಕರ ಹೆಸರಿನಲ್ಲಿ ಬೆದರಿಕೆ ಕರೆ
ಕರ್ನಾಟಕದ ಮಾಜಿ ಡಿಜಿ ಐಜಿಪಿ ಹಾಲಿ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಹೆಸರನ್ನು ಕಿಡಿಗೇಡಿಯೊಬ್ಬ ದುರ್ಬಳಕೆ ಮಾಡಿದ್ದಾನೆ. ಸಿಬಿಐ ನಿರ್ದೇಶಕರ ಫೋಟೊ ಬಳಸಿ ಅವರ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ಹಣ ನೀಡದೆ ಇದ್ದರೆ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೀಪಂಕರ್ ಸಾಹೋ ಎಂಬುವವರ ತಂದೆಗೆ ಬೆದರಿಸಿದ್ದಾರೆ.
ಕೋಣನ ಕುಂಟೆ ಪೊಲೀಸರಿಂದ ಸೆಂಚುರಿ ಕಳ್ಳ ಅರೆಸ್ಟ್
ಬೆಂಗಳೂರಿನ ಕೋಣನಕುಂಟೆ ಪೊಲೀಸರು ಸೆಂಚುರಿ ಕಳ್ಳನನ್ನು ಬಂಧಿಸಿದ್ದಾರೆ. ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. ಕರ್ನಾಟಕ ಸೇರಿ ಹಲವಾರು ಹೊರ ರಾಜ್ಯದಲ್ಲಿ ಸುಮಾರು 120ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿದ್ದ. ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಸದ್ಯ ಇಮ್ರಾನ್‌ನನ್ನು ಬಂಧಿಸಿ, ಆತ ಬಳಿ ಇದ್ದ 1 ಕೆಜಿ 250 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಆಭರಣಗಳನ್ನು ಮುಂಬೈ, ಹೈದರಾಬಾದ್, ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದ. ಸದ್ಯ ಚೋರ್ ಇಮ್ರಾನ್ ಬಂಧನದಿಂದ 12 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 28 ಕಳವು ಪ್ರಕರಣಗಳು ಪತ್ತೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ