Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್‌ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್‌ ಸೀಜ್‌ - Vistara News

ಬೆಂಗಳೂರು

Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್‌ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್‌ ಸೀಜ್‌

Drugs Seized :ಪ್ರತ್ಯೇಕ ಕಡೆಗಳಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕಿರಾತಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು, ಕೋಣನ ಕುಂಟೆ ಪೊಲೀಸರಿಂದ ಸೆಂಚುರಿ ಕಳ್ಳನನ್ನು ಬಂಧಿಸಲಾಗಿದೆ.

VISTARANEWS.COM


on

Drugs Seized
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸೆರಲ್ಯಾಕ್ ಪ್ಯಾಕ್‌ನಲ್ಲಿ 6 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ (Drugs Seized) ಸಪ್ಲೈ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರ ಮಾಡಲು ಬ್ಯುಸಿನೆಸ್ ವೀಸಾದಲ್ಲಿ ಬಂದಿದ್ದ ವಿದೇಶಿ ಪ್ರಜೆಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಮುಂಬೈನ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದ ಎಂಡಿಎಂ ಪೌಡರ್‌ ಅನ್ನು ಮಕ್ಕಳು ಸೇವಿಸುವ ಸೆರಲ್ಯಾಕ್, ಕಾರ್ನ್ ಪ್ಯಾಕೆಟ್‌ಗಳಲ್ಲಿ ಪ್ಯಾಕ್‌ ಮಾಡಿ, ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದ. ಬಳಿಕ ಸಣ್ಣ ಸಣ್ಣ ಪ್ಯಾಕ್ ಮಾಡಿ ಡೀಲರ್‌ಗಳಿಗೆ ಮಾರಾಟ ಮಾಡಲಾಗುತ್ತಿತ್ತು.

ನೈಜಿರೀಯ ಮೂಲದ ಆರೋಪಿಯೊಬ್ಬ ಸಿಸಿಬಿ ಮಾದಕ‌ದ್ರವ್ಯ ನಿಗ್ರಹದಳ‌ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ನಾಲ್ಕು ಕೆಜಿ ಡ್ರಗ್‌ನನ್ನು ಮನೆಯಲ್ಲಿ ಸಂಗ್ರಹಿಸಿದ್ದ. ಎಲೆಕ್ಟ್ರಾನಿನ್ ಸಿಟಿ ಪೊಲೀಸ್ ಠಾಣ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಸೀಜ್ ಮಾಡಲಾಗಿದ್ದು, ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಡ್ರಗ್ ಪೆಡ್ಲರ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ.

ಡ್ರೈವಿಂಗ್ ಜತೆಗೆ ಡ್ರಗ್ ಸೇಲ್

ಓಲಾ, ಉಬರ್‌ ಡ್ರೈವಿಂಗ್‌ ಜತೆ ಜತೆಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಕೋಟಿ 50 ಲಕ್ಷ ಮೌಲ್ಯದ 19.9 ಎಂಡಿಎಂಎ ಕ್ರಿಸ್ಟಲ್, 746 ಕೊಕೇನ್ ವಶಕ್ಕೆ ಪಡೆಯಲಾಗಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಾಸವಾಗಿದ್ದ.

ಇದನ್ನೂ ಓದಿ: Assault Case : ರಾಜಧಾನಿಯಲ್ಲಿ ನಿಲ್ಲದ ಪುಂಡರ ಪುಂಡಾಟ; ಕಾರು ಚಾಲಕನ ಚೇಸ್‌ ಮಾಡಿ ಹಲ್ಲೆ

ಇಬ್ಬರು ಮನೆಗಳ್ಳರ ಬಂಧನ

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಮನೆಗಳ್ಳರನ್ನು ಬಂಧಿಸಿದ್ದಾರೆ. ಇಬ್ಬರು ಮನೆಗಳ್ಳರಿಂದ 28 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡು ಮೂಲದ ದಿನಕರ್, ರಘುರಾಮನ್ ಬಂಧಿತ ಆರೋಪಿಗಳಾಗಿದ್ದಾರೆ.

ಎಷ್‌ಎಸ್‌ಆರ್ ಲೇಔಟ್‌ನ 1ಸೆಕ್ಟರ್‌ನ ನಿವಾಸಿಯೊಬ್ಬರು ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಕಿಟಕಿ ಗ್ರಿಲ್ ಕಟ್‌ ಮಾಡಿ ಮನೆಯೊಳಗೆ ಪ್ರವೇಶ ಮಾಡಿದ್ದ ಇವರಿಬ್ಬರು 430 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಕದ್ದಿದ್ದರು. ಬಳಿಕ ಪಾಂಡಿಚೇರಿಯ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಸಿಬಿಐ ನಿರ್ದೇಶಕರ ಹೆಸರಿನಲ್ಲಿ ಬೆದರಿಕೆ ಕರೆ

ಕರ್ನಾಟಕದ ಮಾಜಿ ಡಿಜಿ ಐಜಿಪಿ ಹಾಲಿ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಹೆಸರನ್ನು ಕಿಡಿಗೇಡಿಯೊಬ್ಬ ದುರ್ಬಳಕೆ ಮಾಡಿದ್ದಾನೆ. ಸಿಬಿಐ ನಿರ್ದೇಶಕರ ಫೋಟೊ ಬಳಸಿ ಅವರ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ಹಣ ನೀಡದೆ ಇದ್ದರೆ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೀಪಂಕರ್ ಸಾಹೋ ಎಂಬುವವರ ತಂದೆಗೆ ಬೆದರಿಸಿದ್ದಾರೆ.

ಕೋಣನ ಕುಂಟೆ ಪೊಲೀಸರಿಂದ ಸೆಂಚುರಿ ಕಳ್ಳ ಅರೆಸ್ಟ್

ಬೆಂಗಳೂರಿನ ಕೋಣನಕುಂಟೆ ಪೊಲೀಸರು ಸೆಂಚುರಿ ಕಳ್ಳನನ್ನು ಬಂಧಿಸಿದ್ದಾರೆ. ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. ಕರ್ನಾಟಕ ಸೇರಿ ಹಲವಾರು ಹೊರ ರಾಜ್ಯದಲ್ಲಿ ಸುಮಾರು 120ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿದ್ದ. ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಸದ್ಯ ಇಮ್ರಾನ್‌ನನ್ನು ಬಂಧಿಸಿ, ಆತ ಬಳಿ ಇದ್ದ 1 ಕೆಜಿ 250 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಆಭರಣಗಳನ್ನು ಮುಂಬೈ, ಹೈದರಾಬಾದ್, ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದ. ಸದ್ಯ ಚೋರ್ ಇಮ್ರಾನ್ ಬಂಧನದಿಂದ 12 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 28 ಕಳವು ಪ್ರಕರಣಗಳು ಪತ್ತೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ

MUDA Scam: ತಗಾದೆಯಲ್ಲಿರುವ ಸರ್ವೆ ನಂಬರ್ 464ರ 3‌ ಎಕರೆ 16 ಗುಂಟೆ ಜಮೀನಿನ 1935ನೇ ಇಸವಿಯ ಬಳಿಕದ ಸಂಪೂರ್ಣ ದಾಖಲಾತಿಗಳನ್ನು (Documents) ಸಿಎಂ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಅವ್ಯವಹಾರವೇ ನಡೆದಿಲ್ಲದ ಕಡೆಯಲ್ಲಿ ನಿರಾಧಾರ ಆರೋಪ ಮಾಡುವ ಮೂಲಕ ವಿಪಕ್ಷಗಳು ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿವೆ ಎಂದಿದ್ದಾರೆ.

VISTARANEWS.COM


on

CM Siddaramaiah muda scam
Koo

ಬೆಂಗಳೂರು: ಮುಡಾ ಜಮೀನು ಅವ್ಯವಹಾರ (MUDA Scam) ನಡೆಸಲಾಗಿದೆ ಎಂಬ ಬಿಜೆಪಿ- ಜೆಡಿಎಸ್‌ (BJP JDS) ಆರೋಪಗಳಿಗೆ ಪತ್ರಿಕಾಗೋಷ್ಠಿ (Pressmeet) ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಪ್ರತ್ಯುತ್ತರ ನೀಡಿದ್ದಾರೆ. ತಗಾದೆಯಲ್ಲಿರುವ ಸರ್ವೆ ನಂಬರ್ 464ರ 3‌ ಎಕರೆ 16 ಗುಂಟೆ ಜಮೀನಿನ 1935ನೇ ಇಸವಿಯ ಬಳಿಕದ ಸಂಪೂರ್ಣ ದಾಖಲಾತಿಗಳನ್ನು (Documents) ಮುಂದಿಟ್ಟಿದ್ದಾರೆ. ಅವ್ಯವಹಾರವೇ ನಡೆದಿಲ್ಲದ ಕಡೆಯಲ್ಲಿ ನಿರಾಧಾರ ಆರೋಪ ಮಾಡುವ ಮೂಲಕ ವಿಪಕ್ಷಗಳು ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿವೆ ಎಂದಿದ್ದಾರೆ.

ಸಿಎಂ ಮುಂದಿಟ್ಟ ಸಮಗ್ರ ವಿವರಗಳು ಹೀಗಿವೆ:

1) ಶ್ರೀ ನಿಂಗ ಬಿನ್ ಜವರ ಇವರ ವಾರಸುದಾರ ಪುತ್ರರಲ್ಲೊಬ್ಬರಿಂದ ಶ್ರೀ ಬಿ.ಎಂ ಮಲ್ಲಿಕಾರ್ಜುನ್ ರವರು ಭೂಮಿ ಖರೀದಿ ಮಾಡಿದ್ದು, ಈ ಕ್ರಯಕ್ಕೆ ಪಿ.ಟಿ.ಸಿ.ಎಲ್. ಕಾಯ್ದೆ ಅನ್ವಯಿಸುವುದಿಲ್ಲವೆ?

ಪ್ರತಿಕ್ರಿಯೆ:

2-8-1935 ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲ್ಲೂಕು ಕಛೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. “ಕೆಸರೆ ಗ್ರಾಮದ ಸ. ನಂ 464 ರ 3.16 [ ಜಮೀನು] 3 ರೂಪಾಯಿ 8 ಆಣೆ ಉಳ್ಳ ಜಮೀನು ತಾಲ್ಕು —— ರಿಂದ 27-9-35 ನೇ —– ಎಡಿ 12 ನೇ ಮೈಸೂರು ಹುಕುಂ ಮೇರೆ ಬೀಳು —— ಹರಾಜು ಮಾಡಿಸಲಾಯ್ತು. 3 ರೂಪಾಯಿ ಹರಾಜು. 1 ರೂಪಾಯಿ ನಿಂಗ ಬಿನ್ ಜವರ, ಇದರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು” ಎಂದು ದಾಖಲಿಸಲಾಗಿದೆ. 13-10-1935 ರಂದು ‘ Sale is confirmed” ಎಂದು ನಮೂದಿಸಿದ್ದಾರೆ. ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ. ಅಸಂಖ್ಯಾತ ತೀರ್ಪುಗಳೂ ಇವೆ.

2) ಖರೀದಿ ಮಾಡಲು ಅವರು ಸರ್ಕಾರದಿಂದ ಅನುಮತಿ ಪಡೆದಿದ್ದರೆ?

ಪ್ರತಿಕ್ರಿಯೆ:

ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.

3) ಈ ಜಮೀನುಗಳನ್ನು ಖರೀದಿ ಮಾಡುವಾಗ ವಾರಸುದಾರರನ್ನು ಈ ಭೂ ಕ್ರಯದಿಂದ ಏಕೆ ಹೊರಗಿಡಲಾಗಿತ್ತು? ಈ ಕ್ರಯವನ್ನು ಕಾನೂನಿನ ಪ್ರಕಾರ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಬಿಜೆಪಿಯವರು ಎತ್ತಿದ್ದಾರೆ.

ಪ್ರತಿಕ್ರಿಯೆ:

— 10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ ಮಂಜುನಾಥ್‌ಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. 3 ನೆಯವರು ದೇವರಾಜು ಎನ್ನುವವರು. [ಈ ದೇವರಾಜು ಎನ್ನುವವರೆ ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿರುವುದು]. ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.

— ಜೆ ದೇವರಾಜು ಎನ್ನುವವರ ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಹೆಳಿಕೆಯಲ್ಲಿ ಹೀಗೆ ಬರೆಯಲಾಗಿದೆ. “ ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ರೂಬು ರೂಬು. ಡಿಟೊ ಮೈಸೂರು ಸಿಟಿ ಗಾಂಧಿನಗರ 8 ನೇ ಕ್ರಾಸ್ , ಮನೆ ನಂ 4038 ರ ನಿವಾಸಿಗಳಾದ ಲೇಟ್ ನಿಂಗಯ್ಯ ಬಿನ್ ಜವರ ರವರ ಮೊದಲನೆ ಮಗ ಮಲ್ಲಯ್ಯ ಮತ್ತು ಲೇಟ್ ಮೈಲಾರಯ್ಯನವರ ಹೆಂಡತಿ ಪುಟ್ಟಗೌರಮ್ಮ ಹಾಗೂ ಮಗ ಎಂ. ಮಂಜುನಾಥಸ್ವಾಮಿ ಆದ ನಾವುಗಳು ಹೆಳಿ ಬರೆಸಿದ ಹೇಳಿಕೆ.

— ಅದಾಗಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464 ರ 3-16 ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ರವರ ಮೂರನೆ ಮಗ ಜೆ.ದೇವರಾಜು ನಮೂನೆ 19 ರ ಮೂಲಕ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ . ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು ಅವರು ಫವತಿಯಾಗಿ ನಮ್ಮಗಳಿಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲವೆಂದು ಹೇಳಿ ಬರೆಯಿಸಿದ ಹೇಳಿಕೆ. ಓದಿಸಿ ಕೇಳಿ ಸರಿ ಎಂದು ಒಪ್ಪಿ ರುಜು ಮಾಡಿರುತ್ತೇವೆ. ಮಲ್ಲಯ್ಯ, ಪುಟ್ಟಗೌರಮ್ಮ ಇಬ್ಬರೂ ಕನ್ನಡದಲ್ಲಿ ಸಹಿ ಮಾಡಿರುತ್ತಾರೆ. ಎಂ.ಮಂಜುನಾಥಸ್ವಾಮಿ ಇಂಗ್ಲಿಷಿನಲ್ಲಿ ಸಹಿ ಮಾಡಿರುತ್ತಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ.

— ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ.

4) ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮುಡಾದಿಂದ ಅಭಿವೃದ್ಧಿ ಹೊಂದಿದ ಜಾಗಗಳು ಎಷ್ಟು ಇವೆ? ಅಂತಹ ಡಿ-ನೋಟಿಫಿಕೇಶನ್ ಪ್ರಸ್ತಾವನೆಗಳಿಗೆ ಸರ್ಕಾರದ ಅನುಮತಿ ಪಡೆಯಲಾಗಿತ್ತೆ?

ಪ್ರತಿಕ್ರಿಯೆ

ಅದಕ್ಕೂ ಮೊದಲು ಪ್ಯಾರಾ ನಂ.6 ರಲ್ಲಿ ಬಿ.ಜೆಪಿ ಯವರು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ಮನವಿ/ ದೂರಿನಲ್ಲಿ ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯೂ ಕೊಟ್ಟಿರಲಿಲ್ಲ, ಆದರೂ ಡಿ.ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದಾಗ ಕಂಡು ಬಂದ ಸತ್ಯಾಂಶಗಳು:

ಬಿಜೆಪಿಯವರು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನು ಗೌರವಾನ್ವಿತ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

— ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿರುವುದು ಕಂಡುಬರುವುದಿಲ್ಲ. ಆಗ, ಜಿ.ದೇವರಾಜು, ರೋಡ್ ನಂ.3406, 4ನೇ ಮುಖ್ಯ ರಸ್ತೆ, ಲಷ್ಕರ್ ಮೊಹಲ್ಲಾ ಉರ್ದು ನಗರ, ಮೈಸೂರು ರಸ್ತೆ ಇವರು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ.

— ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದಾರೆ. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಶ್ರೀ ಬಿ.ಎನ್. ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದಾರೆ. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ.

— ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

— ಸದರಿ ಶಿಫಾರಸ್ಸನ್ನು ಆಧರಿಸಿ, ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ. ವಿ ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ವಿ.ಗೋವಿಂದರಾಜು ಸೆಕ್ರೆಟರಿ-2, ನಗರಾಭಿವೃದ್ಧಿ ಇಲಾಖೆ ಮತ್ತು ಕೆ. ಎಂ. ತಿಮ್ಮಯ್ಯ, ಕಾನೂನು ಇಲಾಖೆಯ ಅಡಿಶನಲ್ ಸೆಕ್ರೆಟರಿ ಒಳಗೊಂಡ ತ್ರಿಸದಸ್ಯ ಸಮಿತಿಯು ಪರಿಶೀಲಿಸಿ ಡಿ ನೋಟಿಫೈ ಮಾಡಿದೆ.

— ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು- ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುವಂತೆ ಕಾಣುತ್ತಿದೆ. ಈ ಸಮಿತಿಯು “ The Committee noted that the Mysore UDA in its meeting held on 24-7-97 has resolved to recommend to government to drop the acquisition proceedings in respect of land mentioned above since this land is situated at one end of the scheme. Further it noted that in this land, the Karnataka urban water supply and drainage Board has not prepared any major plan for their scheme. No plans have been prepared for Melapura water supply scheme also.

— The final notification was issued during April — and August 1997 for acquisition of the land by MUDA for its scheme. No award has been passed yet. In view of the fact that if the land is denotified the scheme will not get affected and no award has been passed and also the KUWS and dB has not prepared any major plan in the land, the committee accepted the resolution of the MUDA and recommended for denotification”. ಎಂದು ದಾಖಲಿಸಿದ್ದಾರೆ. ಈ ಪ್ಯಾರಾದಲ್ಲಿ ಅರ್ಥವಾಗುವ ಅಂಶಗಳೆAದರೆ ಈ ಭೂಮಿ ಬಡಾವಣೆಯ ಕೊನೆಯಲ್ಲಿದೆ ಎಂಬುದು ಕಂಡು ಬರುತ್ತದೆ. ಇಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯವರು ಈ ಜಮೀನನಲ್ಲಿ ಯಾವುದೇ ಪ್ಲಾನ್ ಸಿದ್ಧಪಡಿಸಿಲ್ಲ. ಈ ಜಮೀನುಗಳನ್ನು ಡಿ ನೋಟಿಫೈ ಮಾಡುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಕುರಿತು ಮುಡಾದಲ್ಲೂ ನಿರ್ಣಯವಾಗಿದೆ ಎಂದು ಹೇಳಿ ಡಿನೋಟಿಫೈ ಮಾಡಲು ತೀರ್ಮಾನಿಸಿದ್ದಾರೆ. ಇದರ ಅಧಾರದ ಮೇಲೆ ಈ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಕಂಡುಬರುತ್ತದೆ.

— ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.

— ಇಲ್ಲಿ ಕಾಮನ್ ಸೆನ್ಸಿನ ಪ್ರಶ್ನೆಯೊಂದಿದೆ. ದೇವರಾಜು ಎನ್ನುವವರು 13-8-1996 ರಲ್ಲಿ ಅರ್ಜಿ ಕೊಡುತ್ತಾರೆ. ನಗರಾಭಿವೃದ್ಧಿ ಇಲಾಖೆಯವರು 3-9-1996 ರಂದು ಮೂಡಾ ಆಯುಕ್ತರಿಗೆ ಪತ್ರ ಬರೆದು ವರದಿ ಕೇಳುತ್ತಾರೆ. ಅದಾಗಿ 30-8-1997 ಕ್ಕೆ ಮೂಡಾದವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕೇವಲ ವರದಿ ನೀಡುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ವಿ.ಬಾಲಸುಬ್ರಮಣ್ಯನ್ ಎಂಬ ಟಫ್ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಈ ಜಮೀನುಗಳೂ ಸೇರಿದಂತೆ ರಾಜ್ಯದ ಸುಮಾರು 19 ಕಡೆ ಭೂ ಸ್ವಾಧೀನದಿಂದ ಕೈ ಬಿಡಲು ತೀರ್ಮಾನಿಸಿದ್ದಾರೆ. ಅಂತಿಮವಾಗಿ 18-5-1998 ರಂದು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಈಗ ನಿಮ್ಮನ್ನು ಕೇಳಬಯಸುತ್ತೇನೆ. ಮುಖ್ಯಮಂತ್ರಿಯೊ, ಉಪಮುಖ್ಯಮಂತ್ರಿಯೊ ಅಥವಾ ಮಂತ್ರಿಯೊ, ಎಮ್.ಎಲ್.ಎ ಯೊ ಇದ್ದರೆ ಈ ಪ್ರಕ್ರಿಯೆ ಮುಗಿಸಲು ಎರಡು ವರ್ಷ ತೆಗೆದುಕೊಳ್ಳುತ್ತಿದ್ದರೆ?

5) ಭೂಮಿಯನ್ನು ಸಂಪೂರ್ಣವಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಡಿ-ನೋಟಿಫಿಕೇಶನ್ ಮಾಡಬಹುದೇ?

6) ಅಂತಹ ಅಭಿವೃದ್ಧಿ ಹೊಂದಿದ ಅಥವಾ ಭಾಗಶಃ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೇ? ಅದನ್ನು ಡಿ-ನೋಟಿಫೈ ಮಾಡಿದಾಗ ಭೂಮಿಯನ್ನು ಯಾರು ಹೊಂದಿದ್ದರು?

ಪ್ರತಿಕ್ರಿಯೆ:

  1. ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬುದೆ ಕುರಿತು ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಇಷ್ಟಕ್ಕೂ ಈ ಜಮೀನುಗಳನ್ನು 18-05-1998 ರಲ್ಲಿ ಕೈಬಿಡಲಾಗಿದೆ.
  2. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235- 30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.
  3. ಹಾಗಾಗಿ ಭುಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ.
  4. ಹಾಗಾಗಿ ಬಿಜೆಪಿಯವರು ಎತ್ತಿರುವ ಈ ಪ್ರಶ್ನೆ ಕೂಡ ಅಸಂಗತ ಪ್ರಶ್ನೆಯಾಗಿದೆ.

7) ಸರ್ಕಾರದ ಅನುಮತಿಯಿಲ್ಲದೆ 50:50 ಯೋಜನೆಯನ್ನು ಹೇಗೆ ಜಾರಿಗೆ ಬಂತು?

ಪ್ರತಿಕ್ರಿಯೆ:

— ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ ದಿನಾಂಕ: 15-7-2005 ರಲ್ಲಿ ಭೂಪರಿವರ್ತನೆಯಾಗಿವೆ. ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ.

— ಇದಾದ ಮೇಲೆ ದಿನಾಂಕ: 23-6-2014 ರಲ್ಲಿ ಮತ್ತು 25-10-2021 ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ.

— ನನ್ನ ಪತ್ನಿ ತನ್ನ ನಿವೇಶನ/ ಜಾಗ ಕೊಡಿ ಎಂದು ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ. ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ.

— ಭೂ ಸ್ವಾಧೀನ ಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ. 50:50 ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು 14-9-2020 ರಲ್ಲಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ.

— ಅಷ್ಟಕ್ಕೆ ಸುಮ್ಮನಿರದೆ 7-12-2020 ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದ್ದಾರೆ. ಆ ಸಭೆಯಲ್ಲಿ ಜಿ. ಟಿ. ದೇವೇಗೌಡ ಅವರು “ ಶೇ. 50:50ರ ಅನುಪಾತದಲ್ಲಿ ಒಪ್ಪಿಕೊಳ್ಳುವ ರೈತರಿಗೆ ಅದೇ ರೀತಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಶೇ.50;50 ರ ಅನುಪಾತಕ್ಕೆ ಒಪ್ಪಿಕೊಳ್ಳದ ಹಾಗೂ ಸಹಮತಿ ಸೂಚಿಸದ ಪ್ರಕರಣಗಳಲ್ಲಿ ಪ್ರತ್ಯೇಕ ಸಭೆ ಕರೆಯಲು ಸೂಚಿಸಿದರು”. ಎಂದು ದಾಖಲಾಗಿದೆ.

— ಮರಿತಿಬ್ಬೇಗೌಡ ಅವರು, “ಶೇ.50:50 ಅನುಪಾತದಲ್ಲಿ ರೈತರನ್ನು ಬಲವಂತಪಡಿಸಲು ಬರುವುದಿಲ್ಲವೆಂದು ಈ ಕಾರಣ ರೈತರ ಕೋರಿಕೆಯನ್ನು ಪರಿಗಣಿಸಬೇಕು, ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಸ್ವತ್ತುಗಳಿಗೆ ಅಷ್ಟೇ ವಿಸ್ತೀರ್ಣದ ಸ್ವತ್ತುಗಳನ್ನು ನೀಡುವುದು ಸೂಕ್ತವೆಂದು” ಹೇಳಿದ್ದಾರೆ. ಸಭೆಯಲ್ಲಿ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್ ಮುಂತಾದವರು ಮಾತನಾಡಿದ್ದಾರೆ.

— ಅಂತಿಮವಾಗಿ ಈ ರೀತಿ ನಿರ್ಣಯಿಸಿದ್ದಾರೆ, “ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಧೀನಪಡಿಸದೇ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು” ನಿರ್ಣಯಿಸಲಾಗಿದೆ.

— ಇದೆಲ್ಲ ಆದ ಮೇಲೆ ನನ್ನ ಪತ್ನಿ ದಿನಾಂಕ; 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು ದಿನಾಂಕ 30-12-2021 ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ.

— ಇದರಲ್ಲಿ ಕಾನೂನು ವಿದ್ಯಾರ್ಥಿಯಾದ ನನಗೆ ಹಾಗೂ 40 ವರ್ಷಗಳಿಂದ ಸುಧೀರ್ಘ ರಾಜಕಾರಣದಲ್ಲಿ ಇರುವ ನನಗೆ ಒಂದು ನಯಾಪೈಸೆಯಷ್ಟು ತಪ್ಪುಗಳೂ ಕಂಡುಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ಮಾಧ್ಯಮದ ಮೂಲಕ ಈ ನಾಡಿನ ಜನರ ಮುಂದೆ ಇಡುತ್ತಿದ್ದೇನೆ.

— ಈ ವಿಚಾರಗಳನ್ನೆಲ್ಲಾ ಪರಿಶೀಲಿಸಲು ಜಸ್ಟೀಸ್ ಪಿ.ಎನ್. ದೇಸಾಯಿ ಯವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ವಿಚಾರಣಾ ಆಯೋಗವು ಈ ಕುರಿತು ತನಿಖೆ ಪ್ರಾರಂಭಿಸಿದೆ.

— ಬಿಜೆಪಿ, ಜೆಡಿಎಸ್ ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Continue Reading

ಬೆಂಗಳೂರು

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡಿದೆ. ತಡರಾತ್ರಿ ಸಿಲಿಂಡರ್‌ ಸ್ಫೋಟಕ್ಕೆ ಪಾತ್ರೆ ಅಂಗಡಿ ಸೇರಿ ಎರಡು ಬೈಕ್‌ಗಳು ಸುಟ್ಟು ಕರಕಲಾಗಿವೆ.

VISTARANEWS.COM


on

By

Cylinder blast in Hulimavu
Koo

ಬೆಂಗಳೂರು: ಭೀಕರ ಸಿಲಿಂಡರ್ ಸ್ಫೋಟವೊಂದು (Cylinder Blast) ಹುಳಿಮಾವು ಜನರನ್ನು ಬೆಚ್ಚಿ ಬೀಳಿಸಿದೆ. ಸಿಲಿಂಡರ್‌ ಸ್ಫೋಟ ಹೇಗಿತ್ತು ಎಂದರೆ ಏರಿಯಾ ಜನರಿಗೆ ಭೂಕಂಪದ ಅನುಭವವಾಗಿತ್ತು. ಸುಮಾರು ಒಂದು ಕಿ.ಮೀವರೆಗೆ ಶಬ್ಧ ಕೇಳಿಸಿದ್ದು, ಇನ್ನೂರು ಮೀಟರ್ ಸುತ್ತ ಮುತ್ತಲ ಮನೆ, ಅಂಗಡಿಗಳ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿವೆ.

ನಿನ್ನೆ ಗುರುವಾರ ರಾತ್ರಿ 10.55ಕ್ಕೆ ಸ್ಟೀಲ್ ಪಾತ್ರೆಯ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ರಾಹುಲ್ ದಾಸ್ ಎಂಬಾತನಿಗೆ ಗಾಯವಾಗಿದ್ದು, ಅಂಗಡಿಯ ಶೆಟರ್ ಪುಡಿ ಪುಡಿಯಾಗಿ ಪಾತ್ರೆಗಳೆಲ್ಲವು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ರಸ್ತೆಯಲ್ಲಿ ನಿಂತಿದ್ದ ಎರಡು ಸ್ಕೂಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ರಸ್ತೆಯ ಎದುರು ಮನೆಯಲ್ಲಿದ್ದ ಕಬ್ಬಿಣದ ಗೇಟ್ ಉಢೀಸ್‌ ಆಗಿದೆ.

ಪಾತ್ರೆ ಅಂಗಡಿಯು ಸುರೇಶ್ ದಾಸ್ ಎಂಬುವವರಿಗೆ ಸೇರಿದ್ದು, ಕೆಲಸ ಮುಗಿಸಿ ಶೆಟರ್ ಕ್ಲೋಸ್ ಮಾಡಿ ಹೋಗಿದ್ದರು. ಈ ರಾಹುಲ್‌ ದಾಸ್‌ ಅಂಗಡಿಯಲ್ಲಿ ಕೆಲಸಗಾರನಾಗಿದ್ದ. ಇದೇ ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀ ಫಿಲ್ಲಿಂಗ್ ಕೂಡ ಮಾಡಲಾಗುತ್ತಿತ್ತು. ಅಂಗಡಿಯೊಳಗೆ ಗ್ಯಾಸ್ ಲೀಕ್ ಆಗಿದೆ. ಇದೇ ವೇಳೆ ಅಂಗಡಿಯ ಮುಂಭಾಗ ಎಲೆಕ್ಟ್ರಿಕ್ ಸ್ಕೂಟರ್‌ಗೆ ಚಾರ್ಜ್ ಮಾಡಲಾಗುತ್ತಿತ್ತು. ಚಾರ್ಜರ್ ತೆಗೆಯುವ ವೇಳೆ ಸ್ಪಾರ್ಕ್ ಆಗಿ ಸ್ಫೋಟಗೊಂಡಿರುವ ಶಂಕೆ ಇದೆ. ಸಿಲಿಂಡರ್‌ ಸ್ಫೋಟದಿಂದ ಪಾತ್ರೆ ಅಂಗಡಿ ಗೋಡೆ ಕುಸಿದು ಬಿದ್ದಿದೆ. ಸ್ಫೋಟದಿಂದ ಸುತ್ತಮುತ್ತ ಇರುವ ಕಟ್ಟಡಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್‌ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್‌ ಸೀಜ್‌

ಪ್ರಾಣಾಪಾಯದಿಂದ ಪಾರಾದ ಒಂದು ತಿಂಗಳ ಮಗು

ಸ್ಫೋಟ ಸಂಭವಿಸಿದ ಅಂಗಡಿ ಎದುರಿನಲ್ಲಿರುವ ಮನೆಯ ಎರಡನೇ ಮಹಡಿಯಲ್ಲಿ ಮಗುವೊಂದು ಮಲಗಿತ್ತು. ಸ್ಫೋಟದ ತೀವ್ರತೆಗೆ ಮಗು ಇದ್ದ ರೂಮಿನ ಕಿಟಕಿ ಗಾಜು ಪುಡಿ ಪುಡಿಯಾಗಿತ್ತು. ಮಂಚದ ಮೇಲೆ ಮಗು ಇದ್ದಿದ್ದರಿಂದ ಬಚಾವ್ ಆಗಿದೆ. ಸ್ಫೋಟದ ಬಳಿಕ ತಾಯಿ ತಕ್ಷಣಕ್ಕೆ ಮಗುವನ್ನು ಎತ್ತೊಯ್ದಿದ್ದಾರೆ.

ಇನ್ನೂ ಸ್ಫೋಟದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಸೆಕೆಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಅಂಗಡಿ ಛಿದ್ರ ಛಿದ್ರಗೊಂಡಿದೆ. ಎದುರು ಮನೆಯೊಳಗೆ ಧೂಳು ನುಗ್ಗಿದೆ. ಸ್ಫೋಟಕ್ಕೂ ಮೊದಲು ರಸ್ತೆಯಲ್ಲಿ ಆಗಷ್ಟೇ ಎರಡು ಬೈಕ್‌ಗಳು ಪಾಸ್‌ ಆಗಿದ್ದವು. ಎರಡು ಸೆಕೆಂಡ್ ತಡವಾಗಿದ್ದರೂ ಪ್ರಾಣಪಕ್ಷಿಯೇ ಹಾರಿಹೋಗುತ್ತಿತ್ತು.

ಇನ್ನೂ ಮೈ-ಕೈ ಸುಟ್ಟು ನರಳಾಡುತ್ತಿದ್ದರು ಗಾಯಾಳು ರಾಹುಲ್ ದಾಸ್ ಗಲ್ಲಾ ಪೆಟ್ಟಿಗೆ ಹುಡುಕಾಡುತ್ತಿದ್ದ. ಅಂಗಡಿಯ ಒಳಭಾಗದಲ್ಲೇ ಇದ್ದ ರಾಹುಲ್ ದಾಸ್ ಸಿಲಿಂಡರ್‌ ಸ್ಫೋಟ್‌ವಾಗುತ್ತಿದ್ದಂತೆ ಹೊರಗೆ ಬಂದಿದ್ದ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಾಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಅಕ್ರಮ ರೀ ಫಿಲ್ಲಿಂಗ್‌

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹುಳಿಮಾವು ಸುತ್ತಾಮುತ್ತಾ ಅಕ್ರಮ ರೀ ಫಿಲ್ಲಿಂಗ್ ತಲೆ ಎತ್ತಿದೆ. ಸ್ಫೋಟ ಸಂಭವಿಸಿದ ರಸ್ತೆಯಲ್ಲೇ 5 ಕ್ಕೂ ಹೆಚ್ಚು ರೀ ಫಿಲ್ಲಿಂಗ್ ಅಡ್ಡ ಇದೆ. ಹೀಗಾಗಿ ಹುಳಿಮಾವು ಠಾಣೆ ಪೊಲೀಸರು ಎಲ್ಲಾ ಅಂಗಡಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Actor Darshan: ಜೈಲಲ್ಲಿ ದರ್ಶನ್ ಭೇಟಿಯಾದ ಟಾಲಿವುಡ್ ಖ್ಯಾತ ನಟ ನಾಗಶೌರ್ಯ

Actor Darshan: ಸ್ಯಾಂಡಲ್‌ವುಡ್ ಸ್ಟಾರ್ಸ್ ಜತೆಗೆ ಟಾಲಿವುಡ್ ಸ್ಟಾರ್ಸ್ ಇಂದಲೂ ದರ್ಶನ್‌ ಭೇಟಿಗೆ ಯತ್ನ ನಡೆಯುತ್ತಿದೆ. ಇದೀಗ ತೆಲುಗಿನ ಖ್ಯಾತ ನಟ ನಾಗಶೌರ್ಯ ಅವರು ದರ್ಶನ್‌ರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದಾಗ ದರ್ಶನ್‌ ಬೆಂಬಲಕ್ಕೆ ಈ ನಟ ನಿಂತಿದ್ದರು.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು ನೋಡಲು ಆಪ್ತರು ಸೇರಿ ಹಲವು ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲವರಿಗೆ ಮಾತ್ರ ಭೇಟಿಯಾಗಲು ಅವಕಾಶ ಸಿಕ್ಕಿದೆ. ಈ ನಡುವೆ ತೆಲುಗಿನ ಖ್ಯಾತ ನಟ ನಾಗಶೌರ್ಯ (Naga Shaurya), ಸದ್ದಿಲ್ಲದೆ ನಟ ದರ್ಶನ್‌ರನ್ನು (Actor Darshan) ಭೇಟಿಯಾಗಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್ಸ್ ಜತೆಗೆ ಟಾಲಿವುಡ್ ಸ್ಟಾರ್ಸ್ ಇಂದಲೂ ದರ್ಶನ್‌ ಭೇಟಿಗೆ ಯತ್ನ ನಡೆಯುತ್ತಿದೆ. ರೇಣುಕಾಸ್ವಾಮಿ ಕೊಲೆಯಾದಾಗ ದರ್ಶನ್‌ ಬೆಂಬಲಕ್ಕೆ ನಿಂತಿದ್ದ ತೆಲುಗಿನ ಖ್ಯಾತ ನಟ ನಾಗಶೌರ್ಯ, ದರ್ಶನ್ ಕುಟುಂಬದ ಜತೆ ಹೋಗಿ ಜೈಲಲ್ಲಿ ದಾಸನ ದರ್ಶನ ಪಡೆದಿದ್ದಾರೆ.

ತನ್ನನ್ನು ನೋಡಲು ಬಂದ ನಾಗಶೌರ್ಯರ ಯೋಗಕ್ಷೇಮವನ್ನು ದರ್ಶನ್ ವಿಚಾರಿಸಿದ್ದಾರೆ. ಹೇಗಿದ್ಯಾ ಹೀರೊ, ಹೇಗೆ ನಡೆಯುತ್ತಿದೆ ಪ್ರಾಜೆಕ್ಟ್, ಯಾವ ಫಿಲಂ ಶೂಟಿಂಗ್ ನಡೆಯುತ್ತಿದೆ. ರಿಲೀಸ್ ಯಾವಾಗ ಅಂತೆಲ್ಲಾ ದರ್ಶನ್ ಮಾತುಕತೆ ನಡೆಸಿದ್ದು, ಆತ್ಮೀಯವಾಗಿ ಮಾತನಾಡಿ ನಾಗಶೌರ್ಯರನ್ನು ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ | Shekhar Home:  ಪತ್ತೇದಾರಿ ಕಾದಂಬರಿ ಆಧಾರಿತ ಸಿರೀಸ್‌ನಲ್ಲಿ ಅಬ್ಬರಿಸಲಿದ್ದಾರೆ ಕೇ ಕೇ ಮೆನನ್; ಫಸ್ಟ್‌ ಲುಕ್‌ ಔಟ್!‌

ದರ್ಶನ್‌ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ: ನಾಗ ಶೌರ್ಯ

ನಟ ದರ್ಶನ್ (Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಲ್ಲಿದ್ದಾರೆ. ಇಷ್ಟಾದರೂ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ದಿನ ಕಳೆದಂತೆ ತನಿಖೆಯಿಂದ ಬೆಚ್ಚಿ ಬೀಳಿಸುವ ಸತ್ಯಗಳು ಹೊರಬೀಳುತ್ತಿವೆ. ಕಲೆವರು ಅಂದಿನಿಂದ ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಸಾರ್ವಜನಿಕ ಆಕ್ರೋಶದ ನಡುವೆ, ಟಾಲಿವುಡ್ ಹೀರೊ ನಾಗ ಶೌರ್ಯ ದರ್ಶನ್‌ಗೆ ಇತ್ತೀಚೆಗೆ ಬೆಂಬಲ ನೀಡಿದ್ದಾರೆ. ʻದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆʼʼಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ನಾಗ ಶೌರ್ಯ ಬರೆದುಕೊಂಡಿದ್ದು ಹೀಗೆ ʻ“ಘಟನೆ ಕೇಳಿದಾಗ ಮೃತರ ಕುಟುಂಬಕ್ಕೆ ನನ್ನ ಹೃದಯ ಮರುಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ವಿಷಯದಲ್ಲಿ ಜನರು ಈಗಾಗಲೇ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತದೆ. ದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್‌ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಬದ್ಧತೆಯನ್ನು ಅವರನ್ನು ಚೆನ್ನಾಗಿ ಬಲ್ಲವರು ತಿಳಿದುಕೊಂಡಿದ್ದಾರೆ. ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆʼʼಎಂದು ಬರೆದುಕೊಂಡಿದ್ದರು.

ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ’ ಎಂದಿದ್ದರು.

ಇದನ್ನೂ ಓದಿ | Most Beautiful woman: ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿ ಬಿಡುಗಡೆ; ಟಾಪ್ 10ನಲ್ಲಿ ಏಕೈಕ ಬಾಲಿವುಡ್ ನಟಿ!

ದರ್ಶನ್ ಅವರನ್ನು ಬೆಂಬಲಿಸುವ ನಾಗಶೌರ್ಯ ನಿರ್ಧಾರವು ಮೂರ್ಖತನ ಎಂದು ಅನೇಕರು ಕಮೆಂಟ್‌ ಮಾಡಿದ್ದರು. ಒಬ್ಬ ಕೊಲೆಗಾರನನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ನಾಗ ಶೌರ್ಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದರು. ನಟನ ಈ ಪೋಸ್ಟ್‌ಗಾಗಿ ಛೀಮಾರಿ ಹಾಕಿದ್ದರು.

Continue Reading

ಪ್ರಮುಖ ಸುದ್ದಿ

MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

MUDA Scam: ಮುಡಾ ಜಮೀನು ಅವ್ಯವಹಾರದ ಕುರಿತು ಬಿಜೆಪಿ- ಜೆಡಿಎಸ್‌ ನಡೆಸುತ್ತಿರುವ ಹೋರಾಟ ಹಾಗೂ ಆರೋಪಗಳಿಗೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಜಮೀನು ಸರ್ಕಾದಿಂದ ಗ್ರ್ಯಾಂಟ್‌ ಆಗಿದ್ದಲ್ಲ ಹಾಗೂ ಪ್ರಸ್ತುತ ಹಕ್ಕುದಾರಿಕೆ ಇದೆ ಎಂದು ಹೇಳುತ್ತಿರುವ ಮಂಜುನಾಥ್‌ ಸ್ವಾಮಿ ಅದರ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

VISTARANEWS.COM


on

cm siddaramaiah pressmeet
Koo

ಬೆಂಗಳೂರು: ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ (MUDA Scam) ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಮುಡಾ ಜಮೀನು ಅವ್ಯವಹಾರದ ಕುರಿತು ಬಿಜೆಪಿ- ಜೆಡಿಎಸ್‌ ನಡೆಸುತ್ತಿರುವ ಹೋರಾಟ ಹಾಗೂ ಆರೋಪಗಳಿಗೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಜಮೀನು ಸರ್ಕಾದಿಂದ ಗ್ರ್ಯಾಂಟ್‌ ಆಗಿದ್ದಲ್ಲ ಹಾಗೂ ಪ್ರಸ್ತುತ ಹಕ್ಕುದಾರಿಕೆ ಇದೆ ಎಂದು ಹೇಳುತ್ತಿರುವ ಮಂಜುನಾಥ್‌ ಸ್ವಾಮಿ ಅದರ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

ಸಿಎಂ ಹೇಳಿಕೆಯ ಪೂರ್ಣ ಪಾಠ ಹೀಗಿದೆ:

ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿ ಉಭಯ ಸದನಗಳಲ್ಲಿ ನಿಲುವಳಿ ಸೂಚನೆಯನ್ನು ವಿಪಕ್ಷ ತಂದಿದ್ದರು. ಸದನದ ನಿಯಮಗಳ ಪ್ರಕಾರ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ, ಚರ್ಚೆ ಮಾಡಿದರೆ ಕೆಟ್ಟ ಸಂಪ್ರದಾಯ ಆಗುತ್ತದೆ ಎಂದು ಸ್ಪೀಕರ್‌ ಸದನದಲ್ಲಿ ರೂಲಿಂಗ್ ಕೊಟ್ಟು ವಿಪಕ್ಷ ನಿಲುವಳಿಯನ್ನ ತಿರಸ್ಕರಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಕಾರಣದಿಂದ ಈ ನಿಲುವಳಿ ಸೂಚನೆ ತಂದಿವೆ. ಯಾವುದಾದರೂ ನಿಲುವಳಿ ಸೂಚನೆ ‌ನಿಯಮಾನುಸಾರವಾಗಿ ಇರಬೇಕು. ಸದನದ ನಿಯಮಗಳಿಗೆ ವಿರುದ್ಧವಾಗಿದ್ರೆ ಚರ್ಚೆ ಮಾಡಲು ಸಾಧ್ಯವಿಲ್ಲ.

ಇಂದು ಬಿಜೆಪಿ ಮತ್ತು ಜೆಡಿಎಸ್‌ನವರು ಹತಾಶೆಗೊಂಡಿದ್ದಾರೆ. ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಆಗ್ತಾ ಇಲ್ಲ. ಎರಡು ವಾರಗಳ ಅಧಿವೇಶನದಲ್ಲಿ ಎರಡು ವಿಚಾರಗಳೇ ಚರ್ಚೆ ಆಯ್ತು. ಮುಡಾ ಮತ್ತು ವಾಲ್ಮೀಕಿ ಹಗರಣ ಎರಡು ಬಿಟ್ಟು ರಾಜ್ಯದ ವಿಚಾರ ಬಗ್ಗೆ ಚರ್ಚೆ ನಡೆದಿಲ್ಲ. ಸರ್ಕಾರ ಮತ್ತು ಸಿಎಂ ಮುಖಕ್ಕೆ ಮಸಿಬಳಿಯುವ ಯತ್ನ ಮಾಡಿದ್ದಾರೆ. ಬಿಜೆಪಿ- ಜೆಡಿಎಸ್ ರಾಜಕೀಯವಾಗಿ ಹತಾಶರಾಗಿದ್ದಾರೆ.

ರಾಜ್ಯ ಸರಕಾರ ಹಾಗೂ ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು, ಕಪ್ಪು ಚುಕ್ಕೆ ತರಬೇಕು ಅಂತ ಇಡೀ ಸದನ ಹಾಳು ಮಾಡಿದರು. 1983ರಲ್ಲಿ ನಾನು ಶಾಸಕನಾದವನು, 84ರಲ್ಲಿ ಮಂತ್ರಿಯಾದವನು. ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಸಿಎಂ ಆಗಿ ನಲವತ್ತು ವರ್ಷಗಳ ಕಾಲ ರಾಜಕೀಯವಾಗಿ ಇದ್ದೇನೆ. ಇವತ್ತಿನವರೆಗೆ ಒಂದೂ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ- ಜೆಡಿಎಸ್ ಸೇಡಿನ ದ್ವೇಷದ ರಾಜಕಾರಣ ಮಾಡ್ತಾ ಇವೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಸೇರಿದರೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಚುನಾವಣೆಯಲ್ಲಿ ನಮಗೆ ಮೊದಲಿಗಿಂತ 13 ಪರ್ಸೆಂಟ್ ಹೆಚ್ಚು ಮತ ಬಂದಿದೆ. 2019ರಲ್ಲಿ ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಇದರಿಂದ ಹತಾಶರಾಗಿ ಅವರು ವಾಮಮಾರ್ಗ ಹುಡುಕಿದ್ದಾರೆ.

ವಾಲ್ಮಿಕಿ ನಿಗಮದ ಬಗ್ಗೆ ನಿಲುವಳಿ ಸೂಚಿಸಿದ್ದರು. ಅದಕ್ಕೆ ಸರ್ಕಾರ ಸಮರ್ಥವಾದ ಉತ್ತರ ಕೊಟ್ಟಿದೆ. ಬುಧವಾರ ಮುಡಾದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದರು. 1987ರಲ್ಲಿ ಮುಡಾ ಆಗಿದೆ. ಆವತ್ತಿನಿಂದ ಸಾವಿರಾರು ಎಕರೆಗಳನ್ನು ವಸತಿ ಬಡಾವಣೆ ಮಾಡಲಾಗುತ್ತಿದೆ. ಸರ್ವೆ ನಂ 464, 3 ಎಕರೆ 16 ಗುಂಟೆ ಜಮೀನು ಪಿಟಿಸಿಎಲ್ ಕಾಯ್ದೆ ಅಟ್ರಾಕ್ಟ್ ಮಾಡುತ್ತದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಜಮೀನು ದಲಿತರಿಗೆ ಆಗಿದ್ದರೆ ಅದಕ್ಕೆ ಕೆಲವೊಂದು ನಿಬಂಧನೆ ಹಾಕಿರುತ್ತಾರೆ. ನಿಬಂಧನೆ ಉಲ್ಲಂಘನೆ ಆಗಿದ್ದರೆ ಪಿಟಿಸಿಎಲ್ ಕಾಯ್ದೆ ಬರುತ್ತದೆ. ಇಲ್ಲಿ ಇದು ಪಿತ್ರಾರ್ಜಿತ ಆಸ್ತಿ ಆದ್ದರಿಂದ ಪಿಟಿಸಿಎಲ್‌ ಕಾಯ್ದೆ ಅನ್ವಯ ಆಗುವುದಿಲ್ಲ.

ಈ ಜಮೀನಿನ ಮಾಲೀಕ ಪೂರ್ವದಲ್ಲಿ ನಿಂಗ ಬಿನ್ ಜವರ ಅಂತ. 2/8/1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿ ಕೊಡ್ತಾರೆ. ಅದರ ಮೇಲೆ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತ ಮೂರು ರೂಪಾಯಿ. 3/10/1935 ರಲ್ಲಿ ಹರಾಜಿನಲ್ಲಿ ಭಾಗಿಯಾಗಿ ಒಂದು ರೂಪಾಯಿಗೆ ಕೂಗ್ತಾರೆ. ಆಗ ನಿಂಗ ಬಿನ್ ಜವನ ಅವರಿಗೆ ಇದು ಕ್ರಯ ಆಗುತ್ತದೆ. 13/10/1935ರಲ್ಲಿ ಅವರಿಗೆ ಸೇಲ್ ಕನ್ಫರ್ಮ್ ಆಗುತ್ತದೆ. ಹೀಗೆ ಈ ಜಮೀನು ಹರಾಜಿನ ಮೂಲಕ ಬಂದಿದ್ದು, ಸ್ವಯಾರ್ಜಿತ ಆಸ್ತಿ.

ಮುಡಾ 1987ರಿಂದ ಜಾರಿಗೆ ಬಂದಿದೆ. ಅದಕ್ಕಿಂತ ಮುಂಚೆ ಸಿಐಟಿಬಿ ಅಂತ ಇತ್ತು. 1987ರಲ್ಲಿ ಕಾನೂನು ಮಾಡಿ ಅಥಾರಿಟಿ ಮಾಡಿದರು. ಅವತ್ತಿನಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಸಾಕಷ್ಟು ನಿವೇಶನಗಳನ್ನು ಮಾಡಲಾಗಿದೆ. ಮುಡಾದ ಸರ್ವೆ ನಂಬರ್ 464, 3.16 ಗುಂಟೆ ಜಮೀನು ಮಲ್ಲಿಕಾರ್ಜುನ ಸ್ವಾಮಿ ಕ್ರಯ ಮಾಡಿಕೊಂಡಿದ್ದಾರೆ. 2004ರಲ್ಲಿ ಇದರ ಕ್ರಯ ಆಗಿದೆ. ಈ ಜಮೀನು ಪಿಟಿಸಿಎಲ್ ಕಾಯಿದೆಗೆ ಒಳಪಟ್ಟಿಲ್ಲ.

ನಿಂಗ ಅವರಿಗೆ ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ಮೂವರು ಮಕ್ಕಳು. ಮೈಲಾರಯ್ಯನ ಮಗ ಎಂ. ಮಂಜುನಾಥ ಸ್ವಾಮಿ, ದೇವರಾಜ ಎಲ್ಲರೂ ಸೇರಿ ವಂಶವೃಕ್ಷಕ್ಕೆ ಸಹಿ ಮಾಡಿದ್ದಾರೆ. ಮೂರು ಜನ ಮಕ್ಕಳು ವಂಶವೃಕ್ಷಕ್ಕೆ ಸಹಿ ಹಾಕಿದ್ದಾರೆ. ಅದರಂತೆ ಮೂವರು 10/05/1993ರಲ್ಲಿ ಸರ್ವೆ ನಂಬರ್ 464 ರ‌ ಜಮೀನಿಗೆ ಯಾವುದೇ ತಕರಾರು ಇಲ್ಲ ಅಂತ ಎಲ್ಲರೂ ಸಹಿ ಮಾಡಿದ್ದಾರೆ. ಜಮೀನು ದೇವರಾಜ ಹೆಸರಿಗೆ ವರ್ಗಾವಣೆ ಮಾಡಲು ಸಹಿ ಹಾಕಿದ್ದರು. ದೇವರಾಜ ಹೆಸರಲ್ಲಿ ಪಹಣಿ‌ ಕೂಡ ಬಂದಿದೆ. ದಾಖಲಾತಿಗಳಲ್ಲಿ ಎಲ್ಲವೂ ದಾಖಲಾಗಿದೆ.

ಮಂಜುನಾಥ್ ಸ್ವಾಮಿ ಕಳೆದ 20 ವರ್ಷಗಳಲ್ಲಿ ಯಾವುದೇ ತಕರಾರು ಮಾಡಿಲ್ಲ. ಈಗ ಮಂಜುನಾಥ್ ಅವರನ್ನ ಎತ್ತಿ ಕಟ್ಟಿ ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ? ಈಗ ಬಿಜೆಪಿಯವರು ನಮಗೂ ಪಾಲು ಬರಬೇಕು ಅಂತ ಮಂಜುನಾಥ್ ಸ್ವಾಮಿ ಕೈಲಿ ಹೇಳಿಸ್ತಾರಲ್ಲ. ಹತಾಶರಾಗಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅವರು ಬರೆದುಕೊಟ್ಟ ಹೇಳಿಕೆ ಮೇಲೆ ದೇವರಾಜಗೆ ಮ್ಯುಟೇಷನ್ ಆಗಿದ್ದು. 20 ವರ್ಷದಿಂದ‌ ಜಗಳ‌ ಇಲ್ಲದ ಕುಟುಂಬದಲ್ಲಿ ಜಗಳ ತಂದಿದ್ದಾರಲ್ಲ ಬಿಜೆಪಿಯವರು, ಇಂಥವರಿಗೆ ಏನಂತ ಕರೆಯೋದು? ಮನೆ‌ ಮುರುಕರು ಇವರು.

ಇದಾದ ಮೇಲೆ ಮುಡಾದವರು ಈ ಜಮೀನು 464 ಸರ್ವೆ ನಂಬರ್ ಅನ್ನು 92ನೇ ಇಸ್ವಿಯಲ್ಲಿ ಪ್ರಿಲಿಮಿನರಿ ನೋಟಿಫಿಕೇಷನ್ ಮಾಡ್ತಾರೆ. 97ರಲ್ಲಿ ಅಂತಿಮ ನೋಟಿಫಿಕೇಷನ್ ಆಗುತ್ತದೆ. ಬಿಜೆಪಿ ಜೆಡಿಎಸ್‌ನವರು ಹೇಳೋದು ಅರ್ಜಿಯೇ ಕೊಡದೇ ಡಿನೋಟಿಫೈ ಆಗಿದೆ ಅಂತ. ಆದರೆ ಬಚ್ಚೇಗೌಡ ಮಂತ್ರಿ ಆಗಿದ್ದಾಗ 13-8-1996ರಲ್ಲಿ ಜಮೀನು ಮಾಲೀಕ ದೇವರಾಜ ಅರ್ಜಿ ಕೊಡ್ತಾರೆ. ಸದರಿ ಜಮೀನನ್ನು ಭೂ ಸ್ವಾದೀನದಿಂದ ಕೈ ಬಿಡಿ ಅಂತ ದೇವರಾಜ ಅರ್ಜಿ ಕೊಟ್ಟಿದ್ದರು. ಇದರ ಮೇಲೆ ಫೈಲ್ ಪುಟಪ್ ಆಗಿ ಡಿನೋಟಿಫೈ ಸಮಿತಿಗೆ ಹೋಗುತ್ತದೆ. ಖಡಕ್ ಆಫೀಸರ್ ವಿ.ಬಾಲಸುಬ್ರಹ್ಮಣ್ಯನ್ ಎಂಬವರ ನೇತೃತ್ವದಲ್ಲಿ ಸಮಿತಿ ಆಗುತ್ತದೆ. ಅವರ ಸಮಿತಿ 1998ರಲ್ಲಿ ಡಿನೋಟಿಫೈ ಮಾಡಲು ಶಿಫಾರಸು ಮಾಡುತ್ತದೆ. ಇದರ ಜತೆಗೆ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಅದೇ ಸಮಯದಲ್ಲಿ 18 ಪ್ರಕರಣ ಡಿನೋಟಿಫೈ ಮಾಡಲಾಗುತ್ತದೆ.

ನಮ್ಮ ಮಾವನಿಗೆ ಮೂವರ ಮಕ್ಕಳು. ಮಲ್ಲಿಕಾರ್ಜುನ, ಜಗದೀಶ್, ನನ್ನ ಹೆಂಡತಿ. ಅವರು ಭಾಗ ಆದಾಗ 2010ರಲ್ಲಿ ದಾನ ಪತ್ರದ ಮೂಲಕ ಅರಿಸಿನ-ಕುಂಕುಮ ಅಂತ ನನ್ನ ಹೆಂಡತಿಗೆ ಕೊಟ್ಟಿದ್ದಾರೆ. ನಮಗೆ ಈ 2013/14ರಲ್ಲಿ ಮುಡಾ ಅಕ್ರಮವಾಗಿ ಭೂಸ್ವಾಧೀನ ಮಾಡಿದ್ದು ಗೊತ್ತಾಯಿತು. 2014ರಲ್ಲಿ ನಾವು ಅರ್ಜಿ ಹಾಕಿದೆವು. ನಮ್ಮ ಜಮೀನಿಗೆ ಪರ್ಯಾಯವಾಗಿ ಜಮೀನು ಕೊಡಿ ಅಂತ ಕೇಳಿದೆವು. ಅದರಲ್ಲಿ ತಪ್ಪೇ‌ನಿದೆ? 2 ಅರ್ಜಿ ಹಾಕಿದ್ದೇವೆ- 2014 ಹಾಗೂ 2021ರಲ್ಲಿ. ನನ್ನ ಹೆಂಡತಿ ನಾನು ಸಿಎಂ ಆಗಿದ್ದಾಗ ನನ್ನ ಗಮನಕ್ಕೆ ತಂದರು. ಅದಕ್ಕೆ, ನಾನು ಸಿಎಂ ಆಗಿದ್ದೇನೆ, ಈಗ ನಾನು‌ ಹೇಳಲು ಬರಲ್ಲ ಅಂತ ಹೇಳಿದ್ದೆ.

ಮುಡಾದವರು ಸದರಿ ಜಮೀನು ಭೂಸ್ವಾಧೀನದಿಂದ ಕೈ ಬಿಟ್ಟಿದ್ದರೂ ಕೂಡ ಪ್ರಾಧಿಕಾರ ಆ ಜಮೀನು ಉಪಯೋಗಿಸಿಕೊಂಡಿದೆ. ಹೀಗಾಗಿ ಅರ್ಜಿದಾರರಿಗೆ ಸದರಿ ಜಮೀನಿಗೆ ಬದಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ. ಸುಂದರಮ್ಮ ಅವರಿಗೆ ಇದ್ದ 2.17 ಎಕರೆ ಜಮೀನಿಗೆ ಡೆವಲಪ್ಡ್ ಏರಿಯಾದಲ್ಲಿ ಜಮೀನು ಕೊಡುತ್ತಾರೆ. ಈ ಕೇಸ್ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಹೀಗಾಗಿ ಸುಂದರಮ್ಮ ಅವರಂತೆಯೇ ನ್ಯಾಯ ಆಗಿದೆ. 2.17 ಜಮೀನು ಅವರಿಗೆ ಕೊಟ್ಟಿದ್ದಾರೆ. ನಾವು ಮುಡಾದವರಿಗೆ ಇಲ್ಲಿಯೇ ಜಮೀನು ಕೊಡಿ ಅಂತ ಹೇಳಿಲ್ಲ. 50:50ರಡಿ ಕೊಡಿ ಅಂತ ನಾವು ಕೇಳಿರಲಿಲ್ಲ. ದೇವರಾಯ ಬಡವಾಣೆ, ವಿಜಯನಗರ ಬಡಾವಣೆಯಲ್ಲಿಯೇ‌ ಕೊಡಿ ಎಂದಿಲ್ಲ. ಮುಡಾದವರೇ ನಮಗೆ ಜಮೀನಿನ ಬದಲಿ ನಿವೇಶನ ಕೊಟ್ಟಿದ್ದಾರೆ. 3.16 ಎಕರೆ ಜಮೀನಿಗೆ 1.48 ಚದರ ಅಡಿ ಇದೆ. 38,284 ಚದರ ಅಡಿ ಜಮೀನು ನಮಗೆ ಬಂದಿದೆ.

Continue Reading
Advertisement
Sundar Pichai
ದೇಶ10 mins ago

Sundar Pichai: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಗೌರವ ಡಾಕ್ಟರೇಟ್‌ ಪ್ರದಾನ-ಫೋಟೋ ವೈರಲ್‌

Sai Pallavi Dating a Married Actor Who Has Two Kids
ಸಿನಿಮಾ15 mins ago

Sai Pallavi: ಮದುವೆಯಾಗಿ ಮಕ್ಕಳಿರುವ ಸಹ ನಟನೊಂದಿಗೆ ಸಾಯಿ ಪಲ್ಲವಿ ಡೇಟಿಂಗ್‌?

Nissan SUV X-TRAIL
ಆಟೋಮೊಬೈಲ್26 mins ago

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

CM Siddaramaiah muda scam
ಪ್ರಮುಖ ಸುದ್ದಿ28 mins ago

MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ

Vinod Raj Visited Renuka Swamy Family Gave Them 1 Lakh Rs and shares Opinion
ಸ್ಯಾಂಡಲ್ ವುಡ್33 mins ago

Actor Darshan: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ವಿನೋದ್‌ ರಾಜ್‌ !

Viral News
Latest34 mins ago

Viral News: ಸಾಯುವ ಮುನ್ನ ವಿದ್ಯಾರ್ಥಿಗಳ ಜೀವ ಕಾಪಾಡಿದ ಶಾಲಾ ಬಸ್ ಚಾಲಕ!

Cylinder blast in Hulimavu
ಬೆಂಗಳೂರು34 mins ago

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

Actor Darshan
ಕರ್ನಾಟಕ37 mins ago

Actor Darshan: ಜೈಲಲ್ಲಿ ದರ್ಶನ್ ಭೇಟಿಯಾದ ಟಾಲಿವುಡ್ ಖ್ಯಾತ ನಟ ನಾಗಶೌರ್ಯ

Maharaja Trophy Squads
ಕ್ರೀಡೆ45 mins ago

Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

cm siddaramaiah pressmeet
ಪ್ರಮುಖ ಸುದ್ದಿ58 mins ago

MUDA Scam: ಬಿಜೆಪಿಯವರದು ಮನೆಮುರುಕ ರಾಜಕೀಯ; ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌