Site icon Vistara News

ಬೈಕ್‌ ಮರೆತು ಬಂದಿದ್ದನ್ನು ಪ್ರಶ್ನಿಸಿದ ಮಗನನ್ನೇ ಕೊಂದ ತಂದೆ; ಕುಡಿದ ಮತ್ತಲ್ಲಿ ನಡೆಯಿತು ದುರಂತ!

Bengaluru Crime News

Father Kills Son In Bengaluru Over Bike Issue

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್‌ ವಿಚಾರವಾಗಿ ತಂದೆಯೊಬ್ಬ ಮಗನನ್ನೇ ಕೊಲೆ ಮಾಡಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಸೋಮವಾರ (ಜೂನ್‌ 10) ಘಟನೆ ನಡೆದಿದೆ. ಬೈಕ್‌ ತೆಗೆದುಕೊಂಡು ಹೊರಗೆ ಹೋದ ತಂದೆ, ಬೈಕ್‌ನ ಕೀ ಕಳೆದುಕೊಂಡು, ಅದನ್ನು ಮನೆಗೆ ತೆಗೆದುಕೊಂಡು ಹೋಗದೆ, ಬರಿಗೈಯಲ್ಲಿ ಮನೆಗೆ ತೆರಳಿದ್ದಾನೆ. ಇದೇ ವಿಚಾರವಾಗಿ ಮಗ ಹಾಗೂ ತಂದೆ ಮಧ್ಯೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಅಂಜನ್‌ ಕುಮಾರ್‌ (27) ಹತ್ಯೆಗೀಡಾದ ಯುವಕ. ಕೊಲೆ ಆರೋಪಿ ವೆಂಕಟೇಶ್‌ (57) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ (ಜೂನ್‌ 9) ಸಂಜೆ ವೆಂಕಟೇಶ್‌ ಬೈಕ್‌ ತೆಗೆದುಕೊಂಡು ಹೋಗಿದ್ದರು. ಸಂಜೆ ಹೊರಗೆ ಹೋಗಿ ಮದ್ಯಪಾನ ಮಾಡಿದ್ದ ಅವರು ಅದೇ ನಶೆಯಲ್ಲಿ ಬೈಕ್‌ ಕೀ ಕಳೆದುಕೊಂಡಿದ್ದರು. ಇದೇ ಕಾರಣಕ್ಕಾಗಿ ಬೈಕ್‌ ಬಿಟ್ಟು ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಮಗ ಅಂಜನ್‌ ಬೈಕ್‌ ಎಲ್ಲಿ ಎಂದು ಪ್ರಶ್ನಿಸಿದ್ದ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ.

ವೆಂಕಟೇಶ್‌ ಅವರಿಗೆ ಪುತ್ರಿಯೂ ಇದ್ದು, ಆಕೆಗಾಗಿ ಸ್ಕೂಟಿ ಕೊಡಿಸಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವೆಂಕಟೇಶ್‌, ಮಗಳಿಗಾಗಿ ಖರೀದಿಸಿದ ಸ್ಕೂಟಿಯನ್ನು ಮರೆತುಬಂದಿದ್ದರು. ಇದನ್ನು ಅಂಜನ್‌ ಪ್ರಶ್ನಿಸಿದಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಸಿಟ್ಟಿನಲ್ಲಿ ತಂದೆ ಎಂಬುದನ್ನೂ ನೋಡದ ಅಂಜನ್‌ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದರು. ಇದರಿಂದ ಕುಪಿತಗೊಂಡ ವೆಂಕಟೇಶ್‌, ಅಡುಗೆ ಮನೆಯಿಂದ ಚಾಕು ತಂದು ಅಂಜನ್‌ಗೆ ಇರಿದಿದ್ದಾರೆ.

ಅಂಜನ್‌ನ ಎಡಭಾಗಕ್ಕೆ ಚಾಕು ಇರಿದ ಕಾರಣ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ. ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ಬೈಕ್‌ ವಿಚಾರವಾಗಿ ಆರಂಭದಲ್ಲಿ ವಾಗ್ವಾದ ನಡೆದಿದೆ. ವಾಗ್ವಾದವು ಜಗಳಕ್ಕೆ ತಿರುಗಿದ್ದು, ಮೊದಲು ಅಂಜನ್‌ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ವೆಂಕಟೇಶ್‌ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

Exit mobile version