Site icon Vistara News

Harassment Case : ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಗಂಡನಿಗೆ 1 ತಿಂಗಳ ಜೈಲು ಶಿಕ್ಷೆ!

Harassment Case obscene video

ಬೆಂಗಳೂರು: ವ್ಯಕ್ತಿಯೊಬ್ಬ ವಿದೇಶದಲ್ಲಿರುವ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋ (Obscene Video) ಕಳುಹಿಸಿ ಜೈಲುಪಾಲಾಗಲು ಸಿದ್ಧನಾಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ (Employee in Private Company) ಈ ವ್ಯಕ್ತಿಯನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ (Information Technology Act) ಆರೋಪಿ (Harassment Case) ಎಂದು ಗುರುತಿಸಲಾಗಿದೆ. ಆತನಿಗೆ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯ 1 ತಿಂಗಳು ಸಾದಾ ಜೈಲು ಶಿಕ್ಷೆ (one month Jail Term) ಮತ್ತು 45 ಸಾವಿರ ರೂ. ದಂಡ ವಿಧಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಗಂಡ-ಹೆಂಡಿರ ನಡುವೆ ಹರಿದಾಡೋ ವಿಡಿಯೊಗಳಿಗೂ ಅನ್ವಯವಾಗುತ್ತದಾ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ, ಈ ಪ್ರಕರಣದಲ್ಲಿ ಒಂದು ಟ್ವಿಸ್ಟ್‌ ಇದೆ. ಅದೇನೆಂದರೆ ಈ ಗಂಡ ಹೆಂಡತಿ ಈಗ ಇಂಥ ವಿಡಿಯೊಗಳನ್ನು ಹಂಚಿಕೊಂಡು ಖುಷಿಪಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅವರಿಬ್ಬರ ನಡುವೆ ಜಗಳವಾಗಿ ಡೈವೋರ್ಸ್‌ ಕೇಸು ನಡೆಯುತ್ತಿದೆ.

ಅಂದ ಹಾಗೆ ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿ ಶಿಕ್ಷೆಗೆ ಒಳಗಾದ ಈ ವ್ಯಕ್ತಿಯ ಹೆಸರು ರಾಘವನ್‌ ಸಂಪತ್‌ (30). ರಾಘವನ್‌ ಸಂಪತ್‌ ಮತ್ತು ಯುವತಿ ನಡುವೆ 2016ರಲ್ಲಿ ಮದುವೆಯಾಗಿತ್ತು. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಕೆ 2016ರಲ್ಲಿ ನಗರಕ್ಕೆ ಆಗಮಿಸಿ ಸಂಪತ್‌ ರಾಘವನ್‌ರನ್ನು ಮದುವೆಯಾಗಿದ್ದರು.

ಮುಂದೆ ಒಂದೇ ವರ್ಷದಲ್ಲಿ ಅವರಿಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತು ಮತ್ತು ಇಬ್ಬರೂ ಸೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಅರ್ಜಿಯ ವಿಚಾರಣೆ ನಿಧಾನಕ್ಕೆ ನಡೆಯುತ್ತಿದೆ. ಈ ನಡುವೆ ಯುವತಿ ಮತ್ತು ಕೆಲಸದ ಸಲುವಾಗಿ ವಿದೇಶಕ್ಕೆ ಹೋಗಿದ್ದು, ಅಲ್ಲೇ ಇದ್ದರು.

ಇದರ ನಡುವೆ ಸಂಪತ್‌ ರಾಜ್‌ ಇರಲಾರದವನು ಇರುವೆ ಬಿಟ್ಟುಕೊಂಡ ಅನ್ನುವ ಹಾಗೆ ಒಂದು ಅಶ್ಲೀಲ ವಿಡಿಯೊವನ್ನು ಹೆಂಡತಿಗೆ ಈ ಮೇಲ್‌ ಮೂಲಕ ಕಳುಹಿಸಿದ್ದಾನೆ. ಸಾಲದ್ದಕ್ಕೆ ಅದರಲ್ಲಿ ಅಪಮಾನಕಾರಿ ಮಾಡುಗಳನ್ನು ಆಡಿದ್ದಾನೆ. ಇದು ಯಾವ ಅಶ್ಲೀಲ ವಿಡಿಯೊ ಎನ್ನುವುದು ಗೊತ್ತಿಲ್ಲ. ಅವರಿಬ್ಬರ ಖಾಸಗಿ ವಿಡಿಯೊನಾ ಅಥವಾ ಬೇರೆ ವಿಡಿಯೊನಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ವಿಡಿಯೊವನ್ನು ನೋಡಿದ ಯುವತಿ ತನ್ನ ಸೋದರನಿಗೆ ವಿಷಯ ತಿಳಿಸಿದ್ದಾಳೆ. ಆತ ಕೂಡಲೇ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ಹೋಗಿ ತನ್ನ ಬಾವನ ವಿರುದ್ಧ ದೂರು ದಾಖಲಿಸಿದ್ದಾನೆ. ಅದರ ಬೆನ್ನಿಗೆ ಯುವತಿ ಕೂಡಾ ವಿದೇಶದಿಂದ ಬಂದು ಸ್ವತಃ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ : Family Problem : ಹೆಂಡತಿಗೆ ಮಂಡೆ ಸರಿ ಇಲ್ಲ ಎಂದ ಗಂಡನಿಗೆ ಹೈಕೋರ್ಟ್‌ ದಂಡ!

ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿ ಅದನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ತನಿಖಾಧಿಕಾರಿಗಳು ರಾಘವನ್‌ ವಿರುದ್ಧ ಐಟಿ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಗೆ ಒಂದು ತಿಂಗಳ ಜೈಲು ಮತ್ತು 45 ಸಾವಿರ ರೂ. ದಂಡ ವಿಧಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ, ಅಶ್ಲೀಲ ವಿಡಿಯೊಗಳನ್ನು ಯಾರು ಯಾರಿಗೂ ಪ್ರಸರಣ ಮಾಡಬಾರದು. ಅದರಲ್ಲೂ ಇನ್ನೊಬ್ಬರ ಇಚ್ಛೆಗೆ ವಿರುದ್ಧವಾಗಿ ಮಾಡಲೇಬಾರದು. ಇಲ್ಲಿ ಗಂಡ-ಹೆಂಡತಿ ನಡುವೆ ವೈಮನಸ್ಯವಿತ್ತು. ಒಂದೊಮ್ಮೆ ವೈಮನಸ್ಯ ಇಲ್ಲದಿದ್ದರೂ ಆಕೆಗೆ ಅದು ಇಷ್ಟವಿಲ್ಲ ಎಂದಾದರೆ ಆಕ್ಷೇಪ ಮಾಡಲು ಕಾಯಿದೆಯಲ್ಲಿ ಅವಕಾಶವಿದೆ.

Exit mobile version