Site icon Vistara News

ಮಂಪರು ಬರಿಸುವ ಮಾದಕ ತೈಲ ಮಾರುತ್ತಿದ್ದ ಆರೋಪಿ ಬಂಧನ, 200 ಗ್ರಾಂಗೆ 10 ಲಕ್ಷ!

ಬೆಂಗಳೂರು: ಬೆಂಗಳೂರಿನ ಆಡುಗೋಡಿ ಪೊಲೀಸರು ನಿಷೇಧಿತ ನಿದ್ರಾಜನಕ, ಮಾದಕ ಹಾಶಿಶ್‌ ತೈಲ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, 10 ಲಕ್ಷ ರೂಪಾಯಿ ಬೆಲೆ ಬಾಳುವ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಆಡುಗೋಡಿ ಪೊಲೀಸ್‌ ಠಾಣೆ ಸರಹದ್ದಿನ ಮಹಾಲಿಂಗೇಶ್ವರಬಂಡೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಹಾಶಿಶ್ ತೈಲ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣವೇ ದಾಳಿ ನಡೆಯಿತು.

ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್‌ ಆಯುಕ್ತರಾದ ಶ್ರೀನಾಥ್‌ ಮಹದೇವ ಜೋಶಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಸುಧೀರ್‌ ಎಂ ಹೆಗ್ಡೆ ರವರ ನೇತೃತ್ವದಲ್ಲಿ ಆಡುಗೋಡಿ ಪೊಲೀಸ್‌ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಆರೋಪಿಯಿಂದ 200 ಗ್ರಾಂ ಹಾಶಿಶ್‌ ವಶಪಡಿಸಿ ಕೊಳ್ಳಲಾಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ 10 ಲಕ್ಷ ರೂ. ಆಗಿದೆ.

ಇದನ್ನೂ ಓದಿ: Drug peddler ಬಂಧನ! ₹20 ಲಕ್ಷ ಮೌಲ್ಯದ ಡ್ರಗ್ಸ್‌ ವಶ

Exit mobile version