ಬೆಂಗಳೂರು: ಮಂಗಳವಾರ ಸಂಜೆ, ಬುಧವಾರ ನಸುಕಿನ ಜಾವ 3:20ಕ್ಕೆ ರಾಜ್ಯದ ಹಲವೆಡೆ ಸಿಡಿಲು ಗುಡುಗು ಸಮೆತ ಭಾರಿಮಳೆ ಆಗಿದೆ. ಕೇವಲ ಅರ್ಧ ಗಂಟೆ ಸುರಿದ ಮಳೆರಾಯನ ಹೊಡೆತಕ್ಕೆ ಶಿವಮೊಗ್ಗ, ಬೆಂಗಳೂರು, ಮೈಸೂರು ನಾಗರಿಕರು ತತ್ತರಿಸಿದರು.
ಮೂರು ದಿನದ ಹಿಂದೆ ಭಾರಿ ಮಳೆಯಾಗಿ ಸೋಮವಾರ ಬಿಡುವು ಕೊಟ್ಟಿದ್ದ ಬೆಂಗಳೂರಿನಲ್ಲಿ ಬುಧವಾರ ಸಂಜೆ ಮತ್ತೆ ಮಳೆ ಸುರಿಯಿತು. ಶಾಂತಿನಗರ, ಕಾರ್ಪೊರೇಷನ್ ವೃತ್ತ, ವಿಧಾನಸೌಧ, ಶಿವಾಜಿನಗರ, ಕಾಡುಗೋಡಿ, ಹೆಬ್ಬಾಳ, ಕೋರಮಂಗಲ ಸೇರಿ ಅನೇಕ ಕಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸರ್ಕಾರಿ ರಚೆ ಕಾರಣ ವಾಹನ ಸಂಚಾರ ಕಡಿಮೆ ಇದ್ದದ್ದರಿಂದ ಸಮಸ್ಯೆ ತೀರಾ ಬಿಗಡಾಯಿಸಲಿಲ್ಲ. ಶಿವಮೊಗ್ಗದಲ್ಲಿ ಇನ್ನೇನು ಕೆಲಸ ಕಾರ್ಯಗಳಿಗೆ ಅಣಿಯಾಗಲು ಎಚ್ಚರಗೊಳ್ಳಬೇಕೆಂದಿದ್ದವರನ್ನು ಮಳೆಯೇ ಎಚ್ಚರಿಸಿತು. ಗುಡುಗು ಸಹಿತ ಭಾರ ಮಳೆಯಿಂದ ನಗರದ ಬಹುತೇಕ ಕಡೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ವ್ಯವಸ್ಥೆಗಳು ಅಸ್ತವ್ಯಸ್ತಗೊಂಡವು.
ಮೈಸುರಿನಲ್ಲಿಯೂ ಬಿರುಗಾಳಿ ಸಹಿತ ಮಳೆ ಆಗಿದೆ. ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯ ರೊಟರಿ ಶಾಲೆ ಬಳಿ ಭಾರಿಗಾತ್ರದ ಮರ ಬಿದ್ದು ಕಾರು ಸಂಪೂರ್ಣವಾಗಿ ಜಖಂ ಆದ ಘಟನೆ ನಡೆದಿದೆ. ಮರಬಿದ್ದ ರಭಸಕ್ಕೆ ವಿದ್ಯುತ್ ಕಂಬ ಹಾಗು ತಂತಿಗಳು ತುಂಡಾಗಿವೆ. ನಡುವಿನಹಳ್ಳಿ, ಗೀಕಳ್ಳಿ, ಹುಂಡಿ ಬಳಿಯೂ ಗಾಳಿ ಮಳೆಯಿಂದಾಗಿ ರಸ್ತೆಗೆ ಮರಗಳು ಬಿದ್ದು ಕೆಲಕಾಲ ಸಂಚಾರಕ್ಕೆ ಅಡ್ಡಿ ಆಯಿತು.
ಇದನ್ನೂ ಓದಿ: Video | ಬೆಂಗಳೂರಿನಲ್ಲಿ ತೆಂಗಿನ ಮರಕ್ಕೆ ಬಡಿದ ಸಿಡಿಲು: ರಾಜಧಾನಿಯಲ್ಲಿ ಮಳೆ ಆರ್ಭಟ