Site icon Vistara News

ಜಸ್ಟ್‌ ಗುರಾಯಿಸಿದ್ದಕ್ಕೆ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!

kr puram

ಬೆಂಗಳೂರು: “ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳುʼʼ ಎಂಬ ಮಾತು ನಮ್ಮಲ್ಲಿದೆ. ದಾಯಾದಿಗಳ ಕಲಹದ ಸುದ್ದಿ ಹೊಸತೇನೂ ಅಲ್ಲ. ಆಸ್ತಿ-ಪಾಸ್ತಿ ವಿಚಾರ, ಹಣಕಾಸಿನ ವ್ಯವಹಾರಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ಗದ್ದಲ ಗಲಾಟೆ ನಡೆಯುತ್ತಲೇ ಇರುತ್ತದೆ. ಕೆಲವು ಕಡೆ ಕೊಲೆಗಳೂ ನಡೆದಿವೆ. ಆದರೆ ನಗರದ ಕೆ.ಆರ್‌.ಪುರಂನ ಪ್ರಿಯಾಂಕ ನಗರದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಇದನ್ನೂ ಓದಿ | ಒಂದೇ ಮನೆಯ 9 ಮಂದಿಯ ಸಾಮೂಹಿಕ ಸಾವು ಆತ್ಮಹತ್ಯೆಯಲ್ಲ, ಮಂತ್ರವಾದಿ ಮಾಡಿದ ಕೊಲೆ!

ತಮ್ಮ ಗುರಾಯಿಸಿದ ಎಂಬ ಕಾರಣಕ್ಕೆ ಅಣ್ಣ ರಾಮಕೃಷ್ಣ ಎಂಬಾತ ಮನೆಯ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಒಡಹುಟ್ಟಿದ ತಮ್ಮ ಬಾಲುವನ್ನು ಇರಿದು ಕೊಲೆ ಮಾಡಿದ್ದಾನೆ. ಕೊನೆಗೆ ತಾನೇ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ, ಕೆ ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ | ಸುಪಾರಿ ಕೊಲೆ ಆರೋಪಿ 25 ವರ್ಷಗಳ ಬಳಿಕ ಅರೆಸ್ಟ್!

Exit mobile version