Site icon Vistara News

ಅವ್ಯವಸ್ಥೆ, ಅಸೌಖ್ಯ; ಮಧ್ಯಪ್ರದೇಶ ಚುನಾವಣೆ ಡ್ಯೂಟಿಗೆ ಹೋಗಿದ್ದ ಹೋಂ ಗಾರ್ಡ್ ಮರಳುವಾಗ ಸಾವು

home guard

ಬೆಂಗಳೂರು: ರಾಜ್ಯದಿಂದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Assembly Election) ಡ್ಯೂಟಿಗೆ ಹೋಗಿದ್ದ ಹೋಂ ಗಾರ್ಡ್ (Home Guard) ಒಬ್ಬರು ಮರಳುವಾಗ ಸಾವಿಗೀಡಾಗಿದ್ದಾರೆ.

ಮಂಡ್ಯ (Mandya news) ಮೂಲದ ಹೋಂ ಗಾರ್ಡ್ ಸಿದ್ದು ಮೃತಪಟ್ಟವರು. ಮಧ್ಯಪ್ರದೇಶದಿಂದ ವಾಪಸ್ ಆಗುವಾಗ ರೈಲಿನಲ್ಲಿ ಅಸ್ವಸ್ಥರಾಗಿದ್ದರು. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಸಹೋದ್ಯೋಗಿಗಳು ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ 5.30ಕ್ಕೆ ಸಾವಿಗೀಡಾಗಿದ್ದಾರೆ.

ಮೂಲತಃ ಮಂಡ್ಯದವರಾದ ಇವರು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಡ್ಯೂಟಿಗಾಗಿ ತೆರಳಿದ್ದರು. ಡ್ಯೂಟಿ ನವೆಂಬರ್ 17ಕ್ಕೆ ಮುಗಿದಿದ್ದರೂ ವಾಪಸ್ ರಾಜ್ಯಕ್ಕೆ ಮರಳಿ ಬರಲು ಸರಿಯಾದ ವ್ಯವಸ್ಥೆ ಇಲ್ಲದೆ ರಾಜ್ಯದ ಹೋಂ ಗಾರ್ಡ್‌ಗಳು ಪರದಾಡಿದ್ದರು. ಸರಿಯಾದ ಊಟ ತಿಂಡಿ ಸಿಗದೇ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಿದ್ದು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಮ್ ಗಾರ್ಡ್‌ಗಳಿಗೆ ಕೊಟ್ಟಿರುವ ಊಟದಲ್ಲಿ ಏರುಪೇರಾಗಿದೆ. ಮಾರ್ಗ ಮಧ್ಯೆಯೇ ರೈಲಿನಲ್ಲಿ ಸಿದ್ದು ಎರಡು ಮೂರು ಬಾರಿ ವಾಂತಿ ಮಾಡಿಕೊಂಡಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸದ್ಯ ಮೃತ ಹೋಂ ಗಾರ್ಡ್ ಪಾರ್ಥಿವ ಶರೀರ ಕೆಸಿ ಜನರಲ್ ಆಸ್ಪತ್ರೆ ಶವಾಗಾರದಲ್ಲಿದೆ.

ಇದನ್ನೂ ಓದಿ: Kudle beach | ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನೀರಲೆಗಳಿಗೆ ಸಿಲುಕಿ ಮುಳುಗೇಳುತ್ತಿದ್ದ ಐಟಿ ಉದ್ಯೋಗಿಗಳ ರಕ್ಷಣೆ

Exit mobile version