Site icon Vistara News

Honey Trap: ಸಿನಿಮಾ ಆಸೆ ತೋರಿಸಿ ಸುಂದರಿ ಗ್ಯಾಂಗ್‌ನಿಂದ ಹನಿಟ್ರ್ಯಾಪ್‌! ಬೆತ್ತಲೆ ವಿಡಿಯೊ ತೋರಿಸಿ ಬೆದರಿಕೆ

Businessman honey-trapped by gang after showing him movie aspirations

ಬೆಂಗಳೂರು: ಸಿನಿಮಾ ಆಸೆ ತೋರಿಸಿ ಹನಿಟ್ರ್ಯಾಪ್‌ ಮೂಲಕ ಖೆಡ್ಡಾಗೆ ಕೆಡವಿ 40 ಲಕ್ಷ ರೂ. ದೋಚಿದ ಯುವತಿ ಆ್ಯಂಡ್ ಗ್ಯಾಂಗ್ ವಿರುದ್ಧ ಎಫ್‌ಐಆರ್ (Honey Trap) ದಾಖಲಾಗಿದೆ. ಸಿನಿಮಾ ಹೆಸರಿನಲ್ಲಿ ಆ ಸುಂದರಿ ಬ್ಯುಸಿನೆಸ್ ಮೆನ್‌ಗಳಿಗೆ ಹನಿಟ್ರ್ಯಾಪ್ ಮಾಡುತ್ತಿದ್ದಳು.

ಸಿನಿಮಾ‌ ಮಾಡೋಣ.. ನಾನು ಅದೇ ಫೀಲ್ಡ್‌ನಲ್ಲಿದ್ದೇನೆ ಎಂದು ನಂಬಿಸುತ್ತಿದ್ದಳು. ಯುವತಿಯ ಮಾತು ನಂಬಿ ಆ ಬ್ಯುಸಿನೆಸ್‌ಮೆನ್ ಕೂಡ ಆಕೆಯ ಸಂಗ ಮಾಡಿದ್ದ. ಇದಾದ ಕೆಲ ದಿನಗಳ‌ ನಂತರ ಡೈರೆಕ್ಟ್ ಆಗಿ ಹಣದ ಬೇಡಿಕೆ ಇಟ್ಟಿದ್ದಳು.

ಕಷ್ಟ ಇದೆ ಎಂದೇಳಿ ಬ್ಯುಸಿನೆಸ್‌ಮೆನ್‌ ಬಳಿ ನಾಲ್ಕು ಲಕ್ಷ ರೂ. ಹಣವನ್ನು ಯುವತಿ ಪಡೆದಿದ್ದಳು. ನಂತರ ಹಣ ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು, ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಗೊತ್ತಿಲ್ಲದಂತೆ ಅದನ್ನು ವಿಡಿಯೊ ಮಾಡಿಕೊಂಡಿರುವುದಾಗಿ ದೂರುದಾರನಿಂದ ಆರೋಪಿಸಿದ್ದಾರೆ.

ಇದನ್ನೂ ಓದಿ: Assault Case : ಟೋಲ್‌ ಕಟ್ಟಲು ಕಿರಿಕ್‌; ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪುಂಡರು

ಇಷ್ಟಕ್ಕೆ ಸುಮ್ಮನಾಗದೆ ಆ ಸುಂದರಿ ಇದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಬ್ರೇಸ್ ಲೈಟ್, ಚೈನ್ ಅಂತೆಲ್ಲಾ ಸುಮಾರು ನಲವತ್ತು ಲಕ್ಷ ಹಣ ವಂಚನೆ ಮಾಡಿದ್ದಾರೆ. ಕಾವ್ಯ ಎಂಬಾಕೆ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬುವವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿದ್ದಾಳೆ. ಹಣ ಕೊಡದೆ ಇದ್ದರೆ ವಿಡಿಯೋಗಳನ್ನು ಟಿವಿಗೆ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದರು.

ಅಷ್ಟೇ ಅಲ್ಲದೆ ಹಣ ನೀಡದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ದೂರುದಾರನ ಫೋಟೋ ಹಾಕಿ ಮಾನ ಹರಣ ಮಾಡುವುದಾಗಿ ಹೆದರಿಸಿದ್ದರು. ಸದ್ಯ ಅಶೋಕನಗರ ಠಾಣೆಯಲ್ಲಿ ಕಾವ್ಯ, ದಿಲೀಪ್, ರವಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version