Site icon Vistara News

Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

Honor Released Honor 200 Pro 5G and Honor 200 5G Smartphones

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಮಾಡುತ್ತಿರುವ ಪ್ರಮುಖ ಮೊಬೈಲ್ ತಯಾರಿಕ ಕಂಪನಿ ಹಾನರ್ (Honor 200 Series), ಶುಕ್ರವಾರ (ಜುಲೈ 19ರಂದು) ತನ್ನ ಹಾನರ್ 200 ಸರಣಿ (Honor 200 Series) ಎರಡು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಹಾನರ್ 200 ಪ್ರೊ 5ಜಿ ಮತ್ತು ಹಾನರ್ 200 5ಜಿ ಬಿಡುಗಡೆಗೊಂಡಿರುವ ಮೊಬೈಲ್​ಗಳು. ಎಐ-ಚಾಲಿತ ಪೋರ್ಟ್ರೇಟ್ ಸಾಮರ್ಥ್ಯಗಳು, ಇಮ್ಮರ್ಸಿವ್ ಡಿಸ್‌ಪ್ಲೇ, ದೃಢ ಹಾರ್ಡ್‌ವೇರ್ ಕಾರ್ಯಕ್ಷಮತೆ ಮತ್ತು ಬಳಕೆದಾರ-ಕೇಂದ್ರಿತ ಎಐ ಅನುಭವವನ್ನು ಈ ಸ್ಮಾರ್ಟ್​​ಫೋನ್ ನೀಡುತ್ತದೆ.

ಹಾನರ್ 200 ಪ್ರೊ 5ಜಿ

ಹಾನರ್ 200 ಪ್ರೊ 5ಜಿ ಓಷಿಯನ್ ಸಿಯಾನ್ ಮತ್ತು ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ 57,999 ರೂಪಾಯಿ. ಜುಲೈ 20 ರ ಮಧ್ಯರಾತ್ರಿ 12 ಗಂಟೆಯಿಂದ Amazon.in, ಬ್ರಾಂಡ್ ವೆಬ್ಸೈಟ್ – explorehonor.com ಮತ್ತು ಮೇನ್‌ಲೈನ್ ಮಳಿಗೆಗಳಲ್ಲಿ ಮಾರಾಟ ಪ್ರಾರಂಭವಾಗಿದೆ. ಜುಲೈ 20ರಿಂದ 23 ರ ವರೆಗೆ ಸ್ಮಾರ್ಟ್‌ ಫೋನ್ ಅನ್ನು ಎಲ್ಲಾ ಗ್ರಾಹಕರಿಗೆ 8000 ರೂ.ಗಳ ರಿಯಾಯಿತಿಯೊಂದಿಗೆ ನೀಡಲಾಗಿದೆ. ಇದಲ್ಲದೆ, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 3000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಗ್ರಾಹಕರು ಕೆಲವು ಆಯ್ದ ಮುಖ್ಯ ಲೈನ್ ಅಂಗಡಿಗಳಲ್ಲಿ 8,499 ಮೌಲ್ಯದ ಉಚಿತ ಹಾನರ್ ಉಡುಗೊರೆಗಳನ್ನು ಪಡೆಯಬಹುದು. ಅಥವಾ 2000 ರೂಪಾಯಿ ಕೂಪನ್ ರಿಯಾಯಿತಿ ಪಡೆಯಬಹುದು.

ಇದನ್ನೂ ಓದಿ: Kannada New Movie: ಜು.26ರಂದು ’ಕುಬುಸʼ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಹಾನರ್ 200 5ಜಿ

ಹಾನರ್ 200 5ಜಿ ಮೂನ್‌ಲೈಟ್ ವೈಟ್ ಮತ್ತು ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 12 ಜಿಬಿ ರ್ಯಾಮ್​ ಮತ್ತು 512 ಜಿಬಿ ಸ್ಟೋರೇಜ್​ನೊಂದಿಗೆ ಇದು ಲಭ್ಯವಿದೆ. ಇದರ 39,999 ರೂಪಾಯಿ. ಆದರೆ, 8 ಜಿಬಿ ಮತ್ತು 256 ಸ್ಟೋರೇಜ್ ಹೊಂದಿರುವ ಮೊಬೈಲ್ 34,999 ರೂಪಾಯಿ. ಜುಲೈ 20 ರಿಂದ 23 ರವರೆಗೆ ಸ್ಮಾರ್ಟ್‌ ಫೋನ್‌ ಅನ್ನು 1000 ರೂ.ಗಳ ರಿಯಾಯಿತಿ ಮತ್ತು 2000 ರೂ.ಗಳ ಬ್ಯಾಂಕ್ ಡಿಸ್ಕೌಂಟ್​ನೊಂದಿಗೆ ಖರೀದಿ ಮಾಡಬಹುದು. ಗ್ರಾಹಕರು ಮೇನ್ ಲೈನ್ ಸ್ಟೋರ್ ಗಳಲ್ಲಿ 8,499 ಮೌಲ್ಯದ ಉಚಿತ ಹಾನರ್ ಗಿಫ್ಟ್​ಗಳನ್ನು ಪಡೆಯಬಹುದು. ಎಲ್ಲ ಸೇರಿದರೆ ಜುಲೈ 20 ರಿಂದ 23 ರಂದು 29,999* ರೂಪಾಯಿಗಳಿಗೆ ಮೊಬೈಲ್ ಲಭ್ಯವಾಗುತ್ತದೆ.

ವಿಶೇಷತೆ ಏನು?

ಹಾನರ್ 200 ಸರಣಿಯು ಟ್ರಿಪಲ್-ಕ್ಯಾಮೆರಾ ಹೊಂದಿದೆ. 50 ಎಂಪಿ ಪೋರ್ಟ್ರೇಟ್ ಮೇನ್​ ಕ್ಯಾಮೆರಾ, 50 ಎಂಪಿ ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾ, 12 ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50 ಎಂಪಿ ಪೋರ್ಟ್ರೇಟ್ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.

ಇದನ್ನೂ ಓದಿ: Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

ಎರಡೂ ಮೊಬೈಲ್​ಗಳು ಎಐ-ಚಾಲಿತ ಕಣ್ಣಿನ ಕಂಫರ್ಟ್ ಮತ್ತು ಅಮೋಲೆಡ್ ಕ್ವಾಡ್ ಕರ್ವ್ಡ್ ಡಿಸ್‌ಪ್ಲೇಗಳನ್ನು ಹೊಂದಿವೆ. ದಿ ಹಾನರ್‌ನ ಮ್ಯಾಜಿಕ್ ಎಲ್ಎಂ ಎಐನೊಂದಿಗೆ ಮ್ಯಾಜಿಕ್ಒಎಸ್ 8.0 (ಆಂಡ್ರಾಯ್ಡ್ 14) ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಾನರ್ 200 ಪ್ರೊನಲ್ಲಿ ಸ್ನ್ಯಾಪ್‌ ಡ್ರ್ಯಾಗನ್‌ 8 ಎಸ್ ಜೆನ್​ 3 ಮತ್ತು ಹಾನರ್ 200 ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 7 ಜೆನ್​​ 3 ಚಿಪ್​ಸೆಟ್​ ಇದೆ.

ಹಾನರ್ 200 ಸರಣಿಯು ಮಿಂಚಿನ ವೇಗದ 100W ವೈರ್ಡ್ ಹಾನರ್ ಸೂಪರ್ ಚಾರ್ಜಿಂಗ್​ ವ್ಯವಸ್ಥೆ ಹೊಂದಿದೆ. ಕೇವಲ 41 ನಿಮಿಷಗಳಲ್ಲಿ ಹಾನರ್ 200 ಪ್ರೊ ಅನ್ನು ಚಾರ್ಜ್ ಮಾಡಬಹುದು. ಪ್ರೊ ರೂಪಾಂತರವು 66W ವೈರ್‌ಲೆಸ್ ಹಾನರ್ ಸೂಪರ್ ಚಾರ್ಜ್ ಕೆಪಾಸಿಟಿ ಹೊಂದಿದೆ.

ಬಿಡುಗಡೆ ಕುರಿತು ಎಚ್‌ಟೆಕ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಿಪಿ ಖಂಡೇಲ್ವಾಲ್ ಮಾತನಾಡಿ, ಹಾನರ್ 200 ಸರಣಿಯ ಬಿಡುಗಡೆಯು ಭಾರತದಲ್ಲಿ ಸ್ಮಾರ್ಟ್ ಫೋನ್ ಅನುಭವವನ್ನು ಮರುವ್ಯಾಖ್ಯಾನಿಸುವ ಕುರಿತ ಮಹತ್ವದ ಮೈಲಿಗಲ್ಲಾಗಿದೆ. .

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವುದು ಮಾತ್ರವಲ್ಲದೆ ಮೀರುವ ನವೀನ ಉತ್ಪನ್ನಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ ಮತ್ತು ಹಾನರ್ 200 ಸರಣಿಯು ಈ ಬದ್ಧತೆಗೆ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

Exit mobile version