ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನದ ಯುವತಿ ಹಾಗೂ ಆಕೆಯ ಪತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಇಕ್ರಾ ಜೀವನಿ (19) ಬಂಧಿತ ಯುವತಿ. ನೇಪಾಳ ಮೂಲಕ ಭಾರತದ ಗಡಿ ದಾಟಿದ್ದ ಇಕ್ರಾ ಜೀವನಿ, ಬಳಿಕ ಡೇಟಿಂಗ್ ಆಪ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಎಂಬವನನ್ನು ವಿವಾಹವಾಗಿದ್ದಳು. ಬಳಿಕ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜನ್ನಸಂದ್ರದಲ್ಲಿ ವಾಸವಾಗಿದ್ದಳು. ಈ ಮಧ್ಯೆ ಪಾಕ್‌ನಲ್ಲಿದ್ದ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದಳು.
ಇದರಿಂದ ಅನುಮಾನ ಮೂಡಿ ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿ ರಾಜ್ಯಕ್ಕೆ ರವಾನಿಸಿತ್ತು. ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದು, ಯುವತಿಯ ಇತಿವೃತ್ತಗಳನ್ನು ವಿಚಾರಿಸುತ್ತಿದ್ದಾರೆ. ಈಕೆ ರಾವಾ ಯಾದವ್ ಎಂಬುದಾಗಿ ಹೆಸರು ಬದಲಾಯಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದಳು ಎಂಬುದು ಗೊತ್ತಾಗಿದೆ. ಬಂಧಿತ ಯುವತಿಯ ಬಗ್ಗೆ ಎಫ್‌ಆರ್‌ಆರ್‌ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ಸದ್ಯ ಈಕೆ ಮಹಿಳಾ ಪುನರ್ವಸತಿ ಕೇಂದ್ರದಲ್ಲಿದ್ದಾಳೆ.
ಇದನ್ನೂ ಓದಿ | Areca News | ಅಕ್ರಮವಾಗಿ ಆಮದಾಗುತ್ತಲೇ ಇದೆ ಅಡಿಕೆ; ಆಮದು ಅಡಿಕೆಯಿಂದ ಬೆಲೆ ಕುಸಿತವಾಗಿಲ್ಲ ಎಂದ ಕೇಂದ್ರ