ಬೆಂಗಳೂರು: ಕೆಳಮನೆ ಪತ್ನಿ ಹಾಗೂ ಮೇಲ್ಮನೆ ಗಂಡ ಪರಾರಿಯಾದ ಪ್ರಕರಣದಲ್ಲಿ ಗಂಡ ವಾಪಸಾಗಿದ್ದಾನೆ. ಆದರೆ ಮನೆಗೆ ಮರಳಿಲ್ಲ. ಹೆಂಡತಿ ತಾನು ಮರಳದೇ ತನ್ನ ವಕೀಲರ ಮೂಲಕ ಗಂಡನಿಗೆ ಡೈವೋರ್ಸ್ ನೋಟಿಸ್ ಕಳಿಸಿದ್ದಾಳೆ.
ಪ್ರಕರಣದ ಹಿನ್ನೆಲೆ ಹೀಗಿದೆ- ಒಂದೇ ಮನೆಯ ಕೆಳಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ ದಂಪತಿ ವಾಸವಾಗಿದ್ದರು. ಎರಡನೇ ಮಹಡಿಯಲ್ಲಿ ನವೀದ್ ಮತ್ತು ಝೀನತ್ ದಂಪತಿ ಇದ್ದರು. ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್‌ಗೆ ದೈಹಿಕ ಸಂಬಂಧವಿತ್ತು ಎಂದು ಆರೋಪಿಸಲಾಗಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಈ ಜೋಡಿ ಕಾಣೆಯಾಗಿತ್ತು. ತಮ್ಮವರು ಕಾಣೆಯಾದ ಹಿನ್ನೆಲೆಯಲ್ಲಿ ಮುಬಾರಕ್ ಹಾಗು ಝೀನತ್ ಪಶ್ಚಿಮ ವಿಭಾಗ ಡಿಸಿಪಿ ಮೊರೆ ಹೋಗಿದ್ದರು.
ಇದೀಗ ಹತ್ತು ದಿನದ ಬಳಿಕ, ವಕೀಲರೊಂದಿಗೆ ತಡರಾತ್ರಿ ಜ್ಞಾನಭಾರತಿ ಪೊಲೀಸ್ ಠ಼ಾಣೆಯಲ್ಲಿ ನವೀದ್ ಪ್ರತ್ಯಕ್ಷನಾಗಿದ್ದಾನೆ. ಶಾಜಿಯಾಳನ್ನು ನಾನು ಕರೆದುಕೊಂಡು ಹೋಗಿಲ್ಲ. ನನ್ನ ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ನಾಪತ್ತೆ ಪ್ರಕರಣವಾದುದರಿಂದ ಆತನ ಸಹಿ ಮಾಡಿಸಿ ನವೀದ್‌ನನ್ನು ಪೊಲೀಸರು ಕಳಿಸಿಕೊಟ್ಟಿದ್ದಾರೆ. ಇತ್ತ ನವೀದ್ ಪತ್ನಿ ಝೀನತ್, ನನ್ನ ಗಂಡನನ್ನು ಕರೆದುಕೊಂಡು ಬಂದಿರುವ ಪೊಲೀಸರು ನನ್ನ ಜೊತೆ ಕಳಿಸದೆ ವಕೀಲರೊಟ್ಟಿಗೆ ಕಳಿಸಿದ್ದಾರೆಂದು ಝೀನತ್ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.
ಅತ್ತ ನವೀದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆ ಇತ್ತ ಶಾಜಿಯ ತನ್ನ ಗಂಡ ಮುಬಾರಕ್‌ಗೆ ವಕೀಲರ ಮೂಲಕ ಡೈವೋರ್ಸ್ ಪೇಪರ್ ಕಳಿಸಿಕೊಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ, ನವೀದ್ ಮತ್ತು ಶಾಜಿಯ ಒಟ್ಟಿಗೆ ಇರುವುದರ ಬಗ್ಗೆ ಎರಡೂ ಕುಟುಂಬಸ್ಥರು ಅನುಮಾನಿಸಿದ್ದಾರೆ. ನವೀದ್ ಜೊತೆ ಹೋಗಿರುವ ಶಾಜಿಯ ಈ ಹಿಂದೆ ಕೂಡ ಬೇರೊಬ್ಬನ ಜೊತೆ ಓಡಿ ಹೋಗಿದ್ದರು ಎಂದು ಮುಬಾರಕ್ ಕುಟುಂಬಸ್ಥರು ಆರೋಪಿಸಿದ್ದಾರೆ. ನವೀದ್ ಹಾಗೂ ಮುಬಾರಕ್ ದಂಪತಿಗೆ ಎರಡು ಎರಡು ಮಕ್ಕಳಿದ್ದಾರೆ. ಶಾಜಿಯ ಎಲ್ಲಿದ್ದಾರೆ ಎಂದು ವಕೀಲರು ಮಾಹಿತಿ ನೀಡಿಲ್ಲ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎರಡೂ ದೂರುಗಳು ದಾಖಲಾಗಿದ್ದವು.
ಇದನ್ನೂ ಓದಿ: Illicit relationship: ಪಕ್ಕದ ಮನೆಯ ಗಂಡ, ಎದುರು ಮನೆಯವನ ಹೆಂಡತಿ ಜತೆ ಸ್ಯಾಂಟ್ರೋ ಕಾರಲ್ಲಿ ಪರಾರಿ!