Site icon Vistara News

Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

Child assaulted by Mother and her boyfriend in Bengaluru

ಬೆಂಗಳೂರು: ಪ್ರತಿ ಮಕ್ಕಳಿಗೂ ಹೆತ್ತ ತಾಯಿಯೇ ಶ್ರೀರಕ್ಷೆ.. ಅದೆಷ್ಟೋ ಹೆಣ್ಮಕ್ಕಳು ಮಕ್ಕಳಾಗಿಲ್ಲ ಎಂದು ಕೊರಗುತ್ತಾ ಶತಕೋಟಿ ದೇವರನ್ನೆಲ್ಲ ಪೂಜಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಪಾಪಿ ತಾಯಿಯೊಬ್ಬಳು ಪ್ರಿಯಕರನ ಜತೆ ಸೇರಿ ಹೆತ್ತ ಮಗುವಿನ (Assault Case) ಮೇಲೆ ಹಲ್ಲೆ (Inhuman Behaviour) ನಡೆಸಿದ್ದಾಳೆ.

ಈ ಅಮಾನುಷ ಕೃತ್ಯವು ಬೆಂಗಳೂರಿನ ಗಿರಿನಗರ ಸಮೀಪದ ವೀರಭದ್ರನಗರದಲ್ಲಿ ನಡೆದಿದೆ. ಮಗುವಿನ ಲಾಲನೆ ಪಾಲನೆ ಮಾಡಬೇಕಾದವಳೇ ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಮಾಡಿದ್ದಾಳೆ. ತನ್ನ ಪ್ರಿಯಕರನ ಜತೆ ಸೇರಿ ಮಗುವಿನ ಮರ್ಮಾಂಗವನ್ನೇ ಕಚ್ಚಿದ್ದಾರೆ ಈ ಕಿರಾತಕರು.

ಮಗುವಿನ ಇಡೀ ದೇಹದ ತುಂಬೆಲ್ಲ ಗಾಯಗಳೇ ಇವೆ. 2-3 ವರ್ಷದ ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದೆ. ಮನೆಗೆ ಬಂದ ಅಂಕಲ್‌ವೊಬ್ಬರ್‌ ಕುಕ್ಕರ್‌ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸಂಘಟನೆಯೊಬ್ಬರ ಬಳಿ ಹೇಳಿಕೊಂಡಿದೆ.

ಇದನ್ನೂ ಓದಿ: Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗಯದೆ ಕೂಡಿಹಾಕುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ.

ಮೈತುಂಬ ಗಾಯಗೊಂಡಿದ್ದ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸಿಡಬ್ಲ್ಯೂಸಿಗೆ(CWC)ಗೆ ದೂರು ಕೊಟ್ಟರೂ ಕ್ರಮಕೈಗೊಂಡಿಲ್ಲ. ಮತ್ತೊಂದು ಕಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಸುದ್ದಿ ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಂದಿಸಿದ್ದಾರೆ. ಕೂಡಲೇ ಈ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮಗುವಿನ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವುದಾಗಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರಿಂದ ಮಾಹಿತಿಯನ್ನು ಪಡೆಯುವುದಾಗಿ ಪ್ರತಿಕ್ರಿಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version