Site icon Vistara News

ಕೆ.ಜಿ ಹಳ್ಳಿ ಪ್ರಕರಣ | ತಿಂಗಳು ಕಳೆದರೂ ಪತ್ತೆಯಾಗದ ನಾಲ್ವರು ಪಿಎಫ್‌ಐ ಆರೋಪಿಗಳು

kg halli

ಬೆಂಗಳೂರು: ಕೆ.ಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ನಾಲ್ಕು ಮಂದಿ ಆರೋಪಿಗಳು ಒಂದೂವರೆ ತಿಂಗಳ ಶೋಧ ನಡೆಸಿದರೂ ಸಿಕ್ಕಿಲ್ಲ. ಹೀಗಾಗಿ ಎನ್‌ಐಎ ಮಾದರಿಯಲ್ಲಿ ಆರೋಪಿಗಳ ತಲೆಗೆ ಬಹುಮಾನ ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಮಂಗಳೂರಿನ ಮಹಮ್ಮದ್ ಷರೀಫ್, ಪುತ್ತೂರಿನ ಅಬ್ದುಲ್ ರಜಾಕ್, ದಾವಣಗೆರೆಯ ತಾಹೀರ್ ಹಾಗೂ ಶಿರಸಿಯ ಮೌಸೀನ್‌ಗಾಗಿ ತೀವ್ರ ತಲಾಶೆ ನಡೆದಿದೆ. ರಾಜ್ಯ ಪೊಲೀಸರು ರೈಡ್ ನಡೆಸಿದ ಬೆನ್ನಲ್ಲೇ ಈ ನಾಲ್ವರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದರು. ಒಂದೂವರೆ ತಿಂಗಳಿನಿಂದ ಇವರಿಗಾಗಿ ಹುಡುಕಾಟ ನಡೆಸಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ಕೆ.ಜಿ ಹಳ್ಳಿ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕುತ್ತಿದ್ದಾರೆ. ಆರೋಪಿಗಳ ಆತ್ಮೀಯರು, ಕುಟುಂಬಸ್ಥರು ಹಾಗೂ ಸ್ನೇಹಿತರ ಮೇಲೆ ನಿಗಾ ಇಡಲಾಗಿದೆ. ಆದರೆ ಆರೋಪಿಗಳು ಮೊಬೈಲ್ ಬಳಸುತ್ತಿಲ್ಲ ಹಾಗೂ ಯಾರನ್ನೂ ಸಂಪರ್ಕ ಮಾಡುತ್ತಿಲ್ಲ.

ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬೀಳುವ ಸಾಧ್ಯತೆ ಊಹಿಸಿ ಮೊಬೈಲ್‌ ಬಳಸದಿರುವುದು ಹಾಗೂ ತಂಗುದಾಣ ಬದಲಾಯಿಸುತ್ತಿರುವುದು ಅರಿವಿಗೆ ಬಂದಿದೆ. ವಿದೇಶಕ್ಕೆ ತೆರಳಿರುವ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ದೆಹಲಿ, ಕೇರಳ ಸೇರಿದಂತೆ ಯಾವುದಾದರೂ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಶಂಕೆ ಮೂಡಿದೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳ ಕುಟುಂಬಸ್ಥರಿಗೆ ನೋಟೀಸ್ ನೀಡಲಾಗಿದೆ. ಆದರೆ ಕುಟುಂಬಸ್ಥರಿಂದ ಆರೋಪಿಗಳ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಹೀಗಾಗಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸುವ ಕುರಿತು ಚಿಂತಿಸಲಾಗುತ್ತಿದೆ.

ಇದನ್ನೂ ಓದಿ | PFI | ಕೆ.ಜೆ ಹಳ್ಳಿ ಪೊಲೀಸರಿಂದ ಪಿಎಫ್‌ಐ ವಿಚಾರಣೆ ವೇಳೆ ಕರಾಳ ಸಂಚು ಬಯಲು, ವಿಧ್ವಂಸಕ ಕೃತ್ಯಗಳಿಗೆ ತರಬೇತಿ

Exit mobile version