Site icon Vistara News

Lokayukta Raid : ಆರೋಪಿಯ ಬಿಡುಗಡೆಗೆ 5 ಲಕ್ಷ ಕೇಳಿದ್ದ CPI ಮತ್ತು PSI ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

Lokayukta Raid CPI and PSI

ಬೆಂಗಳೂರು: ಅವರಲ್ಲಿ ಒಬ್ಬರು ಸೀನಿಯರ್‌ ಆಫೀಸರ್‌, ಇನ್ನೊಬ್ಬರು ಅವರ ಜ್ಯೂನಿಯರ್‌. ಇವರಿಬ್ಬರು ಸೇರಿ ಒಂದು ಡೀಲ್‌ ಕುದುರಿಸಿದ್ದರು. ಆದರೆ, ಅದು ಸಕ್ಸಸ್‌ ಆಗುವ ಮೊದಲೇ ಇಬ್ಬರೂ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ. ಇದು ಇಬ್ಬರು ಪೊಲೀಸರ ಲಂಚಾವತಾರದ (Corruption Case) ಕಥೆ.

ಅಂದರೆ ಲಂಚ ಸ್ವೀಕರಿಸುವಾಗಲೇ ಪೊಲೀಸ್ ಇನ್ಸ್‌ಪೆಕ್ಟರ್‌ (Police Inspector) ಹಾಗೂ ಸಬ್ ಇನ್ಸ್‌ಪೆಕ್ಟರ್‌ (Sub Inspector) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು. ಇವರು ಒಂದು ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಆಗಿದ್ದು ಏನೆಂದರೆ, ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಅವರು ವಂಚನೆ ಪ್ರಕರಣವೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆತನನ್ನು ತಮ್ಮ ವಶದಿಂದ ಬಿಡಲು ಐದು ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು. ಇದರಲ್ಲಿ ಆಗಲೇ ಐವತ್ತು ಸಾವಿರ ರೂ. ಮೊದಲು ಪಡೆದುಕೊಂಡಿದ್ದರು. ಎರಡನೇ ಕಂತಾಗಿ ಒಂದು ಲಕ್ಷ ರೂ.ಗೆ ಬೇಡಿಕೆ ಮಂಡಿಸಿದ್ದರು.

ಈ ನಡುವೆ, ವಂಚನೆ ಆರೋಪಿಯ ಕಡೆಯವರು ಎರಡನೇ ಕಂತು ಕೊಡುವ ಮುನ್ನ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು. ಇತ್ತ ಆರೋಪಿಯ ಪಾರ್ಟಿಯವರು ಹಣದೊಂದಿಗೆ ಬಂದರೆ ಲೋಕಾಯುಕ್ತ ಪೊಲೀಸರು ಅವರನ್ನು ಹಿಡಿಯಲು ಸಿದ್ಧರಾಗಿ ಬಂದಿದ್ದರು. ಹಾಗೆ ಆರೋಪಿ ಪಾರ್ಟಿ ಕಡೆಯಿಂದ ಒಂದು ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದರು.

ಇದನ್ನೂ ಓದಿ : Murder Case : ಅಪರಿಚಿತ ಮಹಿಳೆಯ ಕಾಲುಗಳು ಪತ್ತೆ! ತುಂಡು ತುಂಡಾಗಿ ಕತ್ತರಿಸಿ ಎಸೆದರೆ ಹಂತಕರು

Couple death: ದಂಪತಿ ಶವವಾಗಿ ಪತ್ತೆ; ಪತ್ನಿಯ ಕೊಂದು ಆತ್ಮಹತ್ಯೆ ಮಾಡಿಕೊಂಡನಾ ?

ಹಾಸನ: ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ (Garments Workers) ದಂಪತಿಯ ಶವ ಮನೆಯೊಳಗೆ ಪತ್ತೆಯಾಗಿದೆ (Couple death). ಶವಗಳು ಇರುವ ಸ್ಥಿತಿ ನೋಡಿದರೆ ಗಂಡ ತನ್ನ ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆ (Husband kills wife and ends life) ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಹಾಸನ ನಗರದ (Hasana News) ಕೆ. ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ.

ಹಾಸನ ನಗರದ ಕೆ.ಹೊಸಕೊಪ್ಪಲಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ದಂಪತಿಯನ್ನು ದೇವರಾಜು (43), ಮಂಜುಳಾ (35) ಎಂದು ಗುರುತಿಸಲಾಗಿದೆ. ಮೃತ ದಂಪತಿ ಹೊಳೆನರಸೀಪುರ ತಾಲ್ಲೂಕು ಮೂಲದವರು. ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಕೆ. ಹೊಸಕೊಪ್ಪಲಿಗೆ ಬರುವ ಮೊದಲು ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ ಇಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.

ದಿನವೂ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ಕಳೆದ ಸೋಮವಾರದಿಂದ ಮನೆಯಿಂದ ಹೊರ ಬಂದಿರಲಿಲ್ಲ. ಆದರೆ, ಹೆಚ್ಚು ಮಂದಿ ಅದನ್ನು ಗಮನಿಸಿರಲಿಲ್ಲ. ಆದರೆ, ಗುರುವಾರ ಮನೆಯಿಂದ ದುರ್ವಾಸನೆ ಬಂದಾಗ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಶರು ಬೀಗ ಒಡೆದು ಮನೆಯ ಒಳಗೆ ಪ್ರವೇಶಿಸಿದರು. ಆಗ ಅವರಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿರುವ ದೇವರಾಜು ಶವ ಕಂಡಿತು. ಮಂಚದ ಮೇಲೆ ಇರುವ ಮಂಜುಳಾ ಮೃತದೇಹ ಕಂಡಿತು. ಇವರಿಬ್ಬರ ಶವಗಳೂ ಕೊಳೆತು ಹೋಗಿರುವ ಸ್ಥಿತಿ ನೋಡಿದರೆ ಸೋಮವಾರವೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರಿಬ್ಬರೂ ಜತೆಯಾಗಿ ನಿರ್ಧರಿಸಿ ಪ್ರಾಣ ಕಳೆದುಕೊಂಡರೇ ಗಂಡ ಹೆಂಡತಿಯನ್ನು ಕೊಂದು ಪ್ರಾಣ ಕಳೆದುಕೊಂಡನೇ ಎನ್ನುವುದು ಸ್ಪಷ್ಟವಿಲ್ಲ.

ದೇವರಾಜು, ಮಂಜುಳ ಹದಿನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದೇವರಾಜು ಮೂಲತಃ ಹೊಳೆನರಸೀಪುರ ತಾಲ್ಲೂಕಿನ ಕೆರಗೋಡು ಗ್ರಾಮದವನು. ಮಂಜುಳಾ‌ ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದವರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version