Lokayukta Raid : ಆರೋಪಿಯ ಬಿಡುಗಡೆಗೆ 5 ಲಕ್ಷ ಕೇಳಿದ್ದ CPI ಮತ್ತು PSI ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ - Vistara News

ಬೆಂಗಳೂರು

Lokayukta Raid : ಆರೋಪಿಯ ಬಿಡುಗಡೆಗೆ 5 ಲಕ್ಷ ಕೇಳಿದ್ದ CPI ಮತ್ತು PSI ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

Lokayukta raid : ಬೆಂಗಳೂರಿನಲ್ಲಿ ನಡೆದ ಲೋಕಾಯುಕ್ತ ದಾಳಿಯಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅವರು ಒಬ್ಬ ವಂಚಕನನ್ನು ಬಿಟ್ಟು ಬಿಡಲು ಐದು ಲಕ್ಷ ರೂ. ಕೇಳಿದ್ದರು.

VISTARANEWS.COM


on

Lokayukta Raid CPI and PSI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಅವರಲ್ಲಿ ಒಬ್ಬರು ಸೀನಿಯರ್‌ ಆಫೀಸರ್‌, ಇನ್ನೊಬ್ಬರು ಅವರ ಜ್ಯೂನಿಯರ್‌. ಇವರಿಬ್ಬರು ಸೇರಿ ಒಂದು ಡೀಲ್‌ ಕುದುರಿಸಿದ್ದರು. ಆದರೆ, ಅದು ಸಕ್ಸಸ್‌ ಆಗುವ ಮೊದಲೇ ಇಬ್ಬರೂ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ. ಇದು ಇಬ್ಬರು ಪೊಲೀಸರ ಲಂಚಾವತಾರದ (Corruption Case) ಕಥೆ.

ಅಂದರೆ ಲಂಚ ಸ್ವೀಕರಿಸುವಾಗಲೇ ಪೊಲೀಸ್ ಇನ್ಸ್‌ಪೆಕ್ಟರ್‌ (Police Inspector) ಹಾಗೂ ಸಬ್ ಇನ್ಸ್‌ಪೆಕ್ಟರ್‌ (Sub Inspector) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು. ಇವರು ಒಂದು ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಆಗಿದ್ದು ಏನೆಂದರೆ, ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಅವರು ವಂಚನೆ ಪ್ರಕರಣವೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆತನನ್ನು ತಮ್ಮ ವಶದಿಂದ ಬಿಡಲು ಐದು ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು. ಇದರಲ್ಲಿ ಆಗಲೇ ಐವತ್ತು ಸಾವಿರ ರೂ. ಮೊದಲು ಪಡೆದುಕೊಂಡಿದ್ದರು. ಎರಡನೇ ಕಂತಾಗಿ ಒಂದು ಲಕ್ಷ ರೂ.ಗೆ ಬೇಡಿಕೆ ಮಂಡಿಸಿದ್ದರು.

ಈ ನಡುವೆ, ವಂಚನೆ ಆರೋಪಿಯ ಕಡೆಯವರು ಎರಡನೇ ಕಂತು ಕೊಡುವ ಮುನ್ನ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು. ಇತ್ತ ಆರೋಪಿಯ ಪಾರ್ಟಿಯವರು ಹಣದೊಂದಿಗೆ ಬಂದರೆ ಲೋಕಾಯುಕ್ತ ಪೊಲೀಸರು ಅವರನ್ನು ಹಿಡಿಯಲು ಸಿದ್ಧರಾಗಿ ಬಂದಿದ್ದರು. ಹಾಗೆ ಆರೋಪಿ ಪಾರ್ಟಿ ಕಡೆಯಿಂದ ಒಂದು ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದರು.

ಇದನ್ನೂ ಓದಿ : Murder Case : ಅಪರಿಚಿತ ಮಹಿಳೆಯ ಕಾಲುಗಳು ಪತ್ತೆ! ತುಂಡು ತುಂಡಾಗಿ ಕತ್ತರಿಸಿ ಎಸೆದರೆ ಹಂತಕರು

Couple death: ದಂಪತಿ ಶವವಾಗಿ ಪತ್ತೆ; ಪತ್ನಿಯ ಕೊಂದು ಆತ್ಮಹತ್ಯೆ ಮಾಡಿಕೊಂಡನಾ ?

ಹಾಸನ: ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ (Garments Workers) ದಂಪತಿಯ ಶವ ಮನೆಯೊಳಗೆ ಪತ್ತೆಯಾಗಿದೆ (Couple death). ಶವಗಳು ಇರುವ ಸ್ಥಿತಿ ನೋಡಿದರೆ ಗಂಡ ತನ್ನ ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆ (Husband kills wife and ends life) ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಹಾಸನ ನಗರದ (Hasana News) ಕೆ. ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ.

ಹಾಸನ ನಗರದ ಕೆ.ಹೊಸಕೊಪ್ಪಲಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ದಂಪತಿಯನ್ನು ದೇವರಾಜು (43), ಮಂಜುಳಾ (35) ಎಂದು ಗುರುತಿಸಲಾಗಿದೆ. ಮೃತ ದಂಪತಿ ಹೊಳೆನರಸೀಪುರ ತಾಲ್ಲೂಕು ಮೂಲದವರು. ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಕೆ. ಹೊಸಕೊಪ್ಪಲಿಗೆ ಬರುವ ಮೊದಲು ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ ಇಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.

ದಿನವೂ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ಕಳೆದ ಸೋಮವಾರದಿಂದ ಮನೆಯಿಂದ ಹೊರ ಬಂದಿರಲಿಲ್ಲ. ಆದರೆ, ಹೆಚ್ಚು ಮಂದಿ ಅದನ್ನು ಗಮನಿಸಿರಲಿಲ್ಲ. ಆದರೆ, ಗುರುವಾರ ಮನೆಯಿಂದ ದುರ್ವಾಸನೆ ಬಂದಾಗ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಶರು ಬೀಗ ಒಡೆದು ಮನೆಯ ಒಳಗೆ ಪ್ರವೇಶಿಸಿದರು. ಆಗ ಅವರಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿರುವ ದೇವರಾಜು ಶವ ಕಂಡಿತು. ಮಂಚದ ಮೇಲೆ ಇರುವ ಮಂಜುಳಾ ಮೃತದೇಹ ಕಂಡಿತು. ಇವರಿಬ್ಬರ ಶವಗಳೂ ಕೊಳೆತು ಹೋಗಿರುವ ಸ್ಥಿತಿ ನೋಡಿದರೆ ಸೋಮವಾರವೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರಿಬ್ಬರೂ ಜತೆಯಾಗಿ ನಿರ್ಧರಿಸಿ ಪ್ರಾಣ ಕಳೆದುಕೊಂಡರೇ ಗಂಡ ಹೆಂಡತಿಯನ್ನು ಕೊಂದು ಪ್ರಾಣ ಕಳೆದುಕೊಂಡನೇ ಎನ್ನುವುದು ಸ್ಪಷ್ಟವಿಲ್ಲ.

ದೇವರಾಜು, ಮಂಜುಳ ಹದಿನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದೇವರಾಜು ಮೂಲತಃ ಹೊಳೆನರಸೀಪುರ ತಾಲ್ಲೂಕಿನ ಕೆರಗೋಡು ಗ್ರಾಮದವನು. ಮಂಜುಳಾ‌ ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದವರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

VISTARANEWS.COM


on

ಬೆಂಗಳೂರು: ನಗರದ ಜೈಲಿನಲ್ಲಿದ್ದುಕೊಂಡೇ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳ ಎಸೆಗಲು ಸಂಚು ರೂಪಿಸಿದ್ದ ಲಷ್ಕರ್‌ ಎ ತೊಬ್ಯಾ ಸಂಪರ್ಕಿತ ಏಳು ಆರೋಪಿಗಳಿಗೆ ಎನ್‌ ಐ ಎ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.
ಅಪರಾಧಿಗಳಾದ ಲಷ್ಕರ್‌ – ಎ-ತೊಯ್ಬಾ ಸಂಪರ್ಕಿತ ಉಗ್ರ ಟಿ.ನಾಸಿರ್‌ ನೇತೃತ್ವದಲ್ಲಿ ಸಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸಯ್ಯದ್ ಮುದಸ್ಸಿರ್ ಪಾಶಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್ ಶಿಕ್ಷೆಗೆ ಗುರಿಯಾದವರು. ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.
ಇವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದುಕೊಂಡೇ ಯುವಕರನ್ನು ಉಗ್ರವಾದದತ್ತ ಆಕರ್ಷಿಸಿ, ಮತಾಂತರಗೊಳಿಸಿ ದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ಸೇರಿದಂತೆ 48 ಸಾವಿರ ರೂಪಾಯಿ ದಂಡ ವಿಧಿಸಿದೆ.
2023ರ ಜುಲೈನಲ್ಲಿ ಶಸ್ತ್ರಾಸ್ತ್ರಗಳು, ಗುಂಡುಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಈ ಬಗ್ಗೆ ಪ್ರಕರಣ ದಾಖಲಿಸಿತ್ತು. ಇವರು ಬೆಂಗಳೂರಿನಲ್ಲಿಯೂ ಉಗ್ರ ದಾಳಿಗಳನ್ನು ನಡೆಸುವ ಯೋಜನೆ ರೂಪಿಸಿದ್ದರು ಎಂಬುದು ಬಯಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.
2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಟಿ. ನಾಸೀರ್ ಅದಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಎಂಬುದು ಗಮನಾರ್ಹ. ಬಂಧಿತರಲ್ಲಿ ಸಲ್ಮಾನ್ ಖಾನ್ ಎಂಬಾತನನ್ನು ರುವಾಂಡಾ ಗಣರಾಜ್ಯದಿಂದ ಹಸ್ತಾಂತರದ ಮೂಲಕ ಭಾರತಕ್ಕೆ ತರಲಾಗಿತ್ತು.
ಈ ಪ್ರಕರಣದಲ್ಲಿ 11 ಮಂದಿ ಬಂಧಿತ ಆರೋಪಿಗಳು ಹಾಗೂ ಪರಾರಿಯಾಗಿರುವ ಜುನೈದ್ ಅಹ್ಮದ್ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

Continue Reading

Latest

ಸರ್ಕಾರಿ ನೌಕರರಿಗೆ ಸಂಬಳ ಕೊಡದ ಸರ್ಕಾರ: ವಿಜಯೇಂದ್ರ ವಾಗ್ದಾಳಿ

VISTARANEWS.COM


on

BJP State President B Y Vijayendra latest statement in bengaluru

ಬೆಂಗಳೂರು: ರಾಜ್ಯಸರ್ಕಾರದ ದುರಾಡಳಿತ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನೀತಿಗಳ ವೈಫಲ್ಯ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರುವ ಪರಿಣಾಮವಾಗಿ ರಾಜ್ಯದ ಸರಿಸುಮಾರು 5 ಲಕ್ಷ ಸರಕಾರಿ ನೌಕರರ ಪೈಕಿ ಬಹುತೇಕ ನೌಕರರಿಗೆ ಏಪ್ರಿಲ್ ತಿಂಗಳ 22 ರವರೆಗೆ ರಾಜ್ಯ ಸರ್ಕಾರ ಸಂಬಳವನ್ನೇ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.


ಈ ಕುರಿತು ಎಕ್ಸ್‌ ಖಾತೆಯಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್‌ ಮಾಡಿರುವ ಅವರು, ಕಳೆದ ವರ್ಷ ಎರಡು ತಿಂಗಳ ಅವಧಿಗೆ ಗ್ರಹಲಕ್ಷ್ಮಿ ಹಣವನ್ನೇ ನುಂಗಿ ಹಾಕಿದ ರಾಜ್ಯ ಸರ್ಕಾರ ಈ ವರ್ಷ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಕಾರಣಕ್ಕಾಗಿ ಮಾರ್ಚ್ ಅಂತ್ಯಕ್ಕೆ ಖಜಾನೆಯಲ್ಲಿದ್ದ ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ ಎಂದಿದ್ದಾರೆ.


ಪರಿಣಾಮವಾಗಿ ರಾಜ್ಯ ಸರ್ಕಾರದ 5 ಲಕ್ಷ ಸರ್ಕಾರಿ ನೌಕರರಿಗೆ ತಿಂಗಳು ಕಳೆಯುತ್ತಾ ಬಂದರೂ ಸಂಬಳ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.


ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ, ಮುಸ್ಲಿಮರ ತುಷ್ಟಿಕರಣ ಹೀಗೆ ಹಲವು ಆಂತರಿಕ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವೈಯಕ್ತಿಕ ಪ್ರತಿಷ್ಠೆಯಲ್ಲಿ ಮುಳುಗಿ ಹೋಗಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಜನರ ಮೇಲೆ ಉಂಟಾಗುತ್ತಿದೆ.


ಸರ್ಕಾರಿ ನೌಕರರಿಗೆ ಸಂಬಳವನ್ನೇ ಕೊಡಲು ಸಾಧ್ಯವಾಗದ ಈ ಸರಕಾರ ಈ ವರ್ಷ ಬಿರು ಬೇಸಿಗೆ ಹಾಗೂ ಬರದ ಛಾಯೆಯಲ್ಲಿ ಈಗಾಗಲೇ ಬಸವಳಿದು ಹೋಗಿರುವ ರಾಜ್ಯದ ಜನರನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ.


ಪ್ರತಿಪಕ್ಷವಾಗಿ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಿ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಜನ , ಜಾನುವಾರು ನೆರವಿಗೆ ಮುಂದಾಗುವಂತೆ ಹೋರಾಟ ನಡೆಸಲು ಬದ್ಧವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

Continue Reading

Latest

ಫ್ಲೈ-91 ವಿಮಾನದಲ್ಲಿ ಮತ್ತೆ ಲ್ಯಾಂಡಿಂಗ್ ಸಮಸ್ಯೆ: ಹುಬ್ಬಳ್ಳಿ ಆಗಸದಲ್ಲಿ ಪ್ರಯಾಣಿಕರ ತಳಮಳ

VISTARANEWS.COM


on

ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಫ್ಲೈ-91 (Fly91) ವಿಮಾನದಲ್ಲಿ ಮತ್ತೆ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿದ್ದು, ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರು ಎರಡು ಗಂಟೆಗಳ ಕಾಲ ಆಗಸದಲ್ಲೇ ಜೀವ ಬಿಗಿಹಿಡಿದು ಕುಳಿತುಕೊಳ್ಳುವಂತಾದ ಘಟನೆ ನಡೆದಿದೆ. ಮಂಗಳವಾರ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ IC3412 ಸಂಖ್ಯೆಯ ವಿಮಾನವು ನಿಗದಿತ ಸಮಯದಂತೆ 6:50ಕ್ಕೆ ಹುಬ್ಬಳ್ಳಿ ತಲುಪಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ರನ್‌ವೇ ಮೇಲೆ ಇಳಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ವಿಮಾನವು ಸತತ ಎರಡು ಗಂಟೆಗಳ ಕಾಲ ನಗರದ ಆಗಸದಲ್ಲೇ ಸುತ್ತಾಟ ನಡೆಸಬೇಕಾಯಿತು, ಅಂತಿಮವಾಗಿ ರಾತ್ರಿ 9:15ಕ್ಕೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.

ಕೇವಲ ಐದು ದಿನಗಳ ಅಂತರದಲ್ಲಿ ಫ್ಲೈ-91 ಸಂಸ್ಥೆಯ ವಿಮಾನಕ್ಕೆ ಎದುರಾದ ಎರಡನೇ ಲ್ಯಾಂಡಿಂಗ್ ಸಮಸ್ಯೆ ಇದಾಗಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ವಾರವಷ್ಟೇ ಹೈದರಾಬಾದ್‌ನಿಂದ ಬಂದಿದ್ದ ಇದೇ ಸಂಸ್ಥೆಯ ವಿಮಾನವು ಹವಾಮಾನ ವೈಪರಿತ್ಯದ ನೆಪವೊಡ್ಡಿ ಮೂರು ಗಂಟೆಗಳ ಕಾಲ ಹಾರಾಟ ನಡೆಸಿತ್ತು. ಆದರೆ ಮಂಗಳವಾರದ ಘಟನೆಯ ವೇಳೆ ವಿಮಾನ ನಿಲ್ದಾಣದಲ್ಲಿ ಹವಾಮಾನವು ಸಹಜವಾಗಿಯೇ ಇತ್ತು. ಅದೇ ಸಮಯದಲ್ಲಿ ಇತರ ಸಂಸ್ಥೆಗಳ ವಿಮಾನಗಳು ಯಾವುದೇ ಅಡೆತಡೆಯಿಲ್ಲದೆ ಟೇಕಾಫ್ ಮತ್ತು ಲ್ಯಾಂಡಿಂಗ್ ನಡೆಸುತ್ತಿದ್ದುದು, ಫ್ಲೈ-91 ವಿಮಾನಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಅನುಮಾನಗಳನ್ನು ಹುಟ್ಟುಹಾಕಿದೆ.

ವಿಮಾನವು ಆಗಸದಲ್ಲೇ ಗಿರಕಿ ಹೊಡೆಯುತ್ತಿದ್ದಾಗ ಒಳಗಿದ್ದ ಪ್ರಯಾಣಿಕರು ತೀವ್ರ ಭಯಭೀತರಾಗಿ ದೇವರ ಮೊರೆ ಹೋಗಿದ್ದರು. ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗುವವರೆಗೆ ಪ್ರಯಾಣಿಕರು ಅನುಭವಿಸಿದ ಮಾನಸಿಕ ಒತ್ತಡವು ವಿಮಾನ ನಿಲ್ದಾಣದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ವಿಮಾನಯಾನ ಸಂಸ್ಥೆಯ ನಿರ್ವಹಣಾ ಲೋಪವೇ ಅಥವಾ ತಾಂತ್ರಿಕ ದೋಷವೇ ಎಂಬ ಪ್ರಶ್ನೆ ಕಾಡುತ್ತಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಬಗ್ಗೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Continue Reading

Latest

ಬೆಸ್ಕಾಂ ಗ್ರಾಹಕರಿಗೆ ಪ್ರಮುಖ ಸೂಚನೆ: ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ

VISTARANEWS.COM


on

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಬೆಸ್ಕಾಂ (BESCOM) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬಾಡಿಗೆದಾರರು ಪದೇ ಪದೇ ಮನೆ ಬದಲಾಯಿಸಿದಾಗ, ಹಳೆಯ ಮನೆಯಲ್ಲಿ ನೋಂದಣಿಯಾಗಿದ್ದ ಉಚಿತ ವಿದ್ಯುತ್ ಸೌಲಭ್ಯವನ್ನು ಹೊಸ ಮನೆಗೆ ವರ್ಗಾಯಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಮನಗಂಡ ಬೆಸ್ಕಾಂ, ಇದೀಗ ‘ಡಿ-ಲಿಂಕ್’ (De-link) ವ್ಯವಸ್ಥೆಯನ್ನು ಅತ್ಯಂತ ಸುಲಭಗೊಳಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಗ್ರಾಹಕರು ತಾವು ವಾಸವಿದ್ದ ಹಳೆಯ ಮನೆಯ ಆರ್.ಆರ್ (RR) ಸಂಖ್ಯೆಯನ್ನು ಯೋಜನೆಯಿಂದ ರದ್ದುಗೊಳಿಸಿ, ಹೊಸ ಮನೆಯ ಆರ್.ಆರ್ ಸಂಖ್ಯೆಗೆ ಸೌಲಭ್ಯವನ್ನು ಸುಲಭವಾಗಿ ವರ್ಗಾಯಿಸಿಕೊಳ್ಳಬಹುದಾಗಿದೆ.

ಮನೆ ಬದಲಾಯಿಸಿದ ಮೇಲೂ ಗೃಹ ಜ್ಯೋತಿ ಸೌಲಭ್ಯ ಮುಂದುವರಿಸಲು ಇಚ್ಛಿಸುವವರು ಸರ್ಕಾರದ ಅಧಿಕೃತ ‘ಸೇವಾಸಿಂಧು’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಹಕರು ಸೇವಾಸಿಂಧು ಜಾಲತಾಣದ ‘GruhaJyothi_Delink’ ಲಿಂಕ್‌ಗೆ ಭೇಟಿ ನೀಡಿ, ತಮ್ಮ ಆಧಾರ್ ಸಂಖ್ಯೆಯ ದೃಢೀಕರಣದೊಂದಿಗೆ ಹಳೆಯ ಮನೆಯ ಸಂಪರ್ಕವನ್ನು ಕಡಿತಗೊಳಿಸಿ ಹೊಸ ಮನೆಗೆ ನೋಂದಾಯಿಸಿಕೊಳ್ಳಬಹುದು. ಈ ಕ್ರಮವು ಸರ್ಕಾರದ ಉಚಿತ ವಿದ್ಯುತ್ ಯೋಜನೆಯಿಂದ ಯಾವುದೇ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶವನ್ನು ಹೊಂದಿದೆ. ಬಾಡಿಗೆದಾರರು ಒಂದು ಮನೆಯಿಂದ ಮತ್ತೊಂದು ಮನೆಗೆ ಹೋದಾಗ ತಕ್ಷಣವೇ ಈ ಡಿ-ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲು ಬೆಸ್ಕಾಂ ಸಲಹೆ ನೀಡಿದೆ.

ಇದಲ್ಲದೆ, ವಿದ್ಯುತ್ ಮೀಟರ್‌ಗಳು ಇನ್ನೂ ಮೃತ ವ್ಯಕ್ತಿಗಳ ಹೆಸರಿನಲ್ಲಿ ಅಥವಾ ಹಳೆಯ ಮಾಲೀಕರ ಹೆಸರಿನಲ್ಲೇ ಇರುವುದರಿಂದ ಯೋಜನೆ ಪಡೆಯಲು ಹಲವರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ಬೆಸ್ಕಾಂ ಹೆಸರು ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಗ್ರಾಹಕರು ತಮ್ಮ ವ್ಯಾಪ್ತಿಯ ಉಪವಿಭಾಗದ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ಶುಲ್ಕ ಪಾವತಿಸಿ ಮೀಟರ್ ಅನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬಹುದು. ದಾಖಲೆಗಳ ಪರಿಶೀಲನೆಯ ನಂತರ ಹೆಸರು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಇದರಿಂದ ಗೃಹ ಜ್ಯೋತಿ ಯೋಜನೆಯ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಲಿವೆ.

Continue Reading
Advertisement
Latest13 hours ago

ಫರ್ಮಾನ್ ಖಾನ್ ಜೊತೆ ಮದುವೆಯಾದ ಒಂದೇ ತಿಂಗಳಲ್ಲಿ ಮೊನಾಲಿಸಾ ಭೋಸ್ಲೆ ಗರ್ಭಿಣಿ!

Latest14 hours ago

ಎಸ್ಎಸ್ಎಲ್‌ಸಿ: ಹಿಂದಿಗೆ ಈ ಬಾರಿ ಗ್ರೇಡ್‌ ಬದಲು ಅಂಕ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

Latest14 hours ago

ಇರಾನ್‌ ಸರಕು ಸಾಗಣೆ ಹಡಗಿನ ಮೇಲೆ ಗುಂಡಿನ ದಾಳಿ: ಅಮೆರಿಕ ವಿರುದ್ಧ ಆಕ್ರೋಶ

Latest15 hours ago

ಹೋಮ್‌ಸ್ಟೇನಲ್ಲಿ ಅತ್ಯಾಚಾರ: ಸುತ್ತೋಲೆ ಹೊರಡಿಸಲಾಗಿದೆ ಎಂದ ಸಚಿವ ಪರಮೇಶ್ವರ್‌

Latest15 hours ago

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

Latest15 hours ago

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಿರಲು ನಿರ್ಧಾರ

Latest16 hours ago

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

Latest16 hours ago

ತಮಿಳುನಾಡು: ಯಾರು ಹಿತವರು ಈ ಮೂವರೊಳಗೆ?:dmk; aiadmk; tvk

Latest17 hours ago

ಗೋಲ್ಡ್ ಸ್ಮಗ್ಲಿಂಗ್ ಹಗರಣ: ನಟಿ ರನ್ಯಾ ರಾವ್​​ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

ಅವಿಭಾಗೀಕೃತ17 hours ago

“ನಿಮ್ಮಿಂದಲೇ ಟ್ರಾಫಿಕ್‌ ಜಾಮ್!‌ ಗೆಟ್‌ ಔಟ್‌” ಎಂದು ಸಚಿವರನ್ನು ನಿಂದಿಸಿದ ಮಹಿಳೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌