Site icon Vistara News

MAHE Manipal: ಕೆಎಂಸಿಯಲ್ಲಿ 1 ದಿನದ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

MAHE Manipal 1 Day Treatment Capacity Development Training Program at KMC

ಬೆಂಗಳೂರು: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ನ ಸಾಂಸ್ಥಿಕ ಸಂಪರ್ಕ ಕಚೇರಿಯಿಂದ ನಗರದ ಕೆಎಂಸಿಯಲ್ಲಿ ಫಿಲಿಪ್ಸ್‌ ಎಂಜಿನಿಯರ್‌ಗಳಿಗಾಗಿ ಒಂದು ದಿನದ ಚಿಕಿತ್ಸಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು (MAHE Manipal) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ನ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಉಪಕುಲಪತಿ ಡಾ. ನಾರಾಯಣ ಸಭಾಹಿತ್‌ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯದ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವಲ್ಲಿ ಪ್ರಸ್ತುತ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಎಂಜಿನಿಯರ್‌ಗಳನ್ನು ವೈದ್ಯಕೀಯ ಜ್ಞಾನದೊಂದಿಗೆ ಸಿದ್ಧಗೊಳಿಸುವುದರ ಅಗತ್ಯದ ಕುರಿತು ಮಾತನಾಡಿದರು.

ಇದನ್ನೂ ಓದಿ: Kisan Samman Nidhi: ರೈತರಿಗೆ ಗುಡ್‌ನ್ಯೂಸ್‌; ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ನಾಳೆ ನಿಮ್ಮ ಅಕೌಂಟ್‌ಗೆ; ಹೀಗೆ ಪರಿಶೀಲಿಸಿ

ಮಾಹೆಯ ತಾಂತ್ರಿಕ ಮತ್ತು ಯೋಜನಾ ವಿಭಾಗದ ಸಹ-ಉಪಕುಲಪತಿ ಡಾ. ಎನ್‌.ಎನ್‌. ಶರ್ಮಾ ಮಾತನಾಡಿ, ‘ಎರಡೂ ಜ್ಞಾನಶಿಸ್ತುಗಳ ಸಹಭಾಗಿತ್ವದಿಂದಾಗಿ ಕೇವಲ ತಾಂತ್ರಿಕ ಸುಧಾರಣೆಯಷ್ಟೇ ಅಲ್ಲ, ವೈದ್ಯಕೀಯ ಶುಶ್ರೂಷಾ ವಿಭಾಗದ ನವೀನ ಸಂಶೋಧನೆಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವಲ್ಲಿಯೂ ಪರಿಣಾಮ ಬೀರಲಿದೆ. ಅಂತಿಮವಾಗಿ ರೋಗಿಗಳ ಶುಶ್ರೂಷೆಯಲ್ಲಿ ಸುಧಾರಣೆ ತರುವ ಜೀವಪರ ಧೋರಣೆಯೇ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: GPF Interest: ಸರ್ಕಾರಿ ನೌಕರರೇ ಗಮನಿಸಿ; 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ಸರ್ಕಾರ ಆದೇಶ

ಬಳಿಕ ಮಾಹೆಯ ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಯೋಜನೆ ಮತ್ತು ಆರ್ಥಿಕ ವಿಭಾಗದ ನಿರ್ದೇಶಕ ಡಾ. ರವಿರಾಜ ಎನ್‌. ಎಸ್‌. ಮಾತನಾಡಿ, ಕೃತಕ ಬುದ್ದಿಮತ್ತೆ (ಆರ್ಟಿಫಿಶಲ್‌ ಇಂಟಲಿಜೆನ್ಸ್‌) ನಿಯಂತ್ರಿತ ಶುಶ್ರೂಷಾ ವಿಧಾನ, ವೈಯಕ್ತಿಕ ಶುಶ್ರೂಷೆ, ದೂರನಿಯಂತ್ರಿತವಾಗಿ ರೋಗಿಯ ಚಿಕಿತ್ಸೆ ಮುಂತಾದ ಅತ್ಯಾಧುನಿಕ ಸೌಲಭ್ಯಗಳ ನಿರ್ವಹಣೆಯಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ವ್ಯವಸ್ಥೆ ಜತೆಯಾಗಿ ಕಾರ್ಯನಿರ್ವಹಿಸಬೇಕಾಗಿರುವುದರ ಅಗತ್ಯವನ್ನು ಒತ್ತಿಹೇಳಿದರು.

ತರಬೇತಿಯ ವಿಶೇಷತೆ

ತರಬೇತಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹೃದಯದಲ್ಲಿ ವಿದ್ಯುತ್‌ಕ್ರಿಯೆಯನ್ನು ಪರಿಶೀಲಿಸುವ ಮತ್ತು ಕಾಯಿಲೆಯನ್ನು ನಿರ್ಧರಿಸುವ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದ್ದು, ಇದು ತಂತ್ರಜ್ಞಾನ ಮತ್ತು ಆರೋಗ್ಯ ಆರೈಕೆಯ ವಿಭಾಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ಮತ್ತು ಭಾಗಿಗಳಾದವರಿಗೆ ಸಮಗ್ರ ಪ್ರಾಯೋಗಿಕ ಅನುಭವವನ್ನು ನೀಡುವ ಕಾರ್ಯಕ್ರಮವಾಗಿತ್ತು.

ಕೆಎಂಸಿಯ ನುರಿತ ಬೋಧಕರು ತರಗತಿಗಳನ್ನು ನಡೆಸಿಕೊಟ್ಟರಲ್ಲದೆ, ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಕಾರ್ಯ ವೈಖರಿ, ಅವುಗಳ ಅನ್ವಯಗಳು, ಮತ್ತು ರೋಗಿಗಳ ಚಿಕಿತ್ಸೆಯ ಸವಾಲುಗಳ ಬಗ್ಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ವಿಷಯಗಳ ಅರಿವಿನ ಜತೆಗೆ ಪ್ರಾಯೋಗಿಕ ಅನುಭವಗಳನ್ನು ನೀಡುವ ಕುರಿತು ಒತ್ತು ನೀಡಲಾಯಿತು.

ಇದನ್ನೂ ಓದಿ: Gold Rate Today: ಆಭರಣ ಖರೀದಿಸುವವರಿಗೆ ರಿಲೀಫ್‌; ಇಳಿದ ಚಿನ್ನದ ದರ

ತರಬೇತಿಯಲ್ಲಿ ಬೆಂಗಳೂರಿನ ಫಿಲಿಪ್ಸ್‌ ಇನ್ನೋವೇಶನ್‌ ಸೆಂಟರ್‌ನ ಆ್ಯಂಬುಲೇಟರಿ ಮಾನಿಟರಿಂಗ್‌ ಮತ್ತು ಡಯಾಗ್ನಿಸ್ಟಿಕ್ಸ್‌ ವಿಭಾಗದ 14 ಜನ ಎಂಜಿನಿಯರ್‌ಗಳು ಪಾಲ್ಗೊಂಡಿದ್ದರು.

Exit mobile version