Site icon Vistara News

Maruti Suzuki Vitara | ಬೆಂಗಳೂರಿನಲ್ಲಿ ಗ್ರ್ಯಾಂಡ್‌ ವಿಟಾರ ಬಿಡುಗಡೆ ಮಾಡಿದ ನಟ ಪ್ರಜ್ವಲ್‌ ದೇವರಾಜ್‌

grand vitara

ಬೆಂಗಳೂರು: ಮಾರುತಿ ಸುಜುಕಿಯವರ ಹೊಚ್ಚ ಹೊಸ ಗ್ರ್ಯಾಂಡ್‌ ವಿಟಾರ ಕಾರನ್ನು ಸ್ಯಾಂಡಲ್‌ವುಡ್‌ ನಡ ಡೈನಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್ ಅನಾವರಣಗೊಳಿಸಿದರು. ಗುರುವಾರ (ಜುಲೈ 28) ಸಂಜೆ 4.30ಕ್ಕೆ ಬೆಂಗಳೂರಿನ ಆರ್​ ಆರ್​ ನಗರದ ನೆಕ್ಸಾ ಕಲ್ಯಾಣಿ ಮೋಟಾರ್ಸ್​ ಶೋ ರೂಂನಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಲ್ಯಾಣಿ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ್​ ರಾಜುರವರು ಉಪಸ್ಥಿತರಿದ್ದರು.

ಕಾರು ಹೇಗಿದೆ?

ಗ್ರಾಂಡ್​ ವಿಟಾರ 1.5 ಲೀಟರ್​ ಸಾಮರ್ಥ್ಯದ ಪೆಟ್ರೋಲ್​ ಎಂಜಿನ್‌ ಹೊಂದಿದ್ದು, ಎಸ್‌ಯುವಿ ಸೆಗ್ಮೆಂಟ್‌ನ ಪ್ರಥಮ ಹೈಬ್ರಿಡ್‌ ಕಾರು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮಾರುತಿ ಸುಜುಕಿಯವರ ಈ ಹಿಂದಿನ ಎಲ್ಲ ಕಾರುಗಳಿಗಿಂತ ಅತ್ಯಾಧುನಿಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಈ ಕಾರು ಇಂಧನ ಚಾಲಿತ ಎಂಜಿನ್‌ ಹಾಗೂ ಎಲೆಕ್ಟ್ರಿಕ್‌ ಮೋಟಾರ್‌ ಹೊಂದಿರುವ ಹೈಬ್ರಿಡ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಸ್ಮಾರ್ಟ್​ ಹೈಬ್ರಿಡ್​ ಮತ್ತು ಫುಲ್ಲಿ (fully) ಹೈ ಬ್ರೀಡ್​ ಎಂಬ ಎರಡು ಬಗೆಯ ವೇರಿಯಂಟ್​ಗಳಲ್ಲಿ ಈ ಕಾರನ್ನು ಪರಿಚಯಿಸಲಾಗಿದೆ. ಸ್ಮಾರ್ಟ್​ ಹೈಬ್ರೀಡ್​ನಲ್ಲಿ ಪ್ರತ್ಯೇಕ ಬ್ಯಾಟರಿಗಳು ಇರುವುದಿಲ್ಲ. ಅಲ್ಲದೆ, ಬಹುತೆಕ ಇಂಧನದಿಂದಲೇ ಕಾರು ಚಲಿಸುತ್ತದೆ. ಫುಲ್ಲಿ (fully) ಹೈಬ್ರಿಡ್​ ವೇರಿಯಂಟನ್‌ನಲ್ಲಿ ಪ್ರತ್ಯೇಕ ಬ್ಯಾಟರಿಗಳನ್ನು ಅಳವಡಿಸಲಾಗಿದೆ ಮತ್ತು ಪ್ರಯಾಣದ ಶೇಕಡ 60% ರಷ್ಟು ಎಲೆಕ್ಟ್ರಿಕ್‌ ಮೋಟರ್‌ಗಳನ್ನು ಬಳಸಿಕೊಳ್ಳುತ್ತದೆ.

ಈ ಕಾರಿನ ಹೊರ ಮತ್ತು ಒಳ ವಿನ್ಯಾಸ​ ಅತ್ಯಾಕರ್ಷಕವಾಗಿದೆ. ಜತೆಗೆ ಎಸ್.ಯು.ವಿ ಸೆಗ್ಮೆಂಟ್‌ನಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ (ಮೈಲೇಜ್‌)ಹೊಂದಿದೆ. ಈ ಕಾರು ಲೀಟರ್‌ ಪೆಟ್ರೋಲ್‌ಗೆ 21.11 ಮೈಲೇಜ್‌ ಕೊಡುತ್ತದೆ ಎಂದು ಕಂಪನಿ ಹೇಳಿದೆ. ಬಟನ್​ ಸ್ಟಾರ್ಟ್​, ಕ್ರೂಸ್​ ಕಂಟ್ರೋಲ್ , ಆಟೋಮ್ಯಾಟೆಕ್​ ಕ್ಲೈಮೇಟ್​ ಕಂಟ್ರೋಲ್​ , ಪ್ಯಾನರೋಮಿಕ್​ ಸನ್​ ರೂಫ್ ರೀತಿಯ ಫೀಚರ್ಸ್​ಗಳೊಂದಿಗೆ ಮಾರಕಟ್ಟೆಗೆ ಇಳಿದಿದೆ. ಅಲ್ಲದೆ, ಇದರ ಜತೆಗೆ ಸುಜುಕಿ ಕನೆಕ್ಟ್​ನಂಥ ವಾಯ್ಸ್‌ ಅಸಿಸ್ಟ್‌ ತಂತ್ರಜ್ಷಾನ ಮತ್ತು ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಈ ಕಾರು ಒಳಗೊಂಡಿದೆ.

ಇದೊಂದು ಎಸ್​.ಯು.ವಿ ವಿಭಾಗದ ಗ್ಲೋಬಲ್​ ಕಾರ್​ ಎಂದು ಖ್ಯಾತಿ ಗಳಿಸಿದೆ. ಚಾಲನೆಯ ವೇಳೆ ಸ್ನೋ, ಸ್ಯಾಂಡ್​ ಮತ್ತು ರಾಕ್​ ಎಂಬ ಮೂರು ಮೋಡ್​ಗಳನ್ನು ಬಳಸಿಕೊಳ್ಳಬಹುದು. ಆಲ್​ ಗ್ರಿಪ್​ ಕಾರ್​ ಎಂಬ ವಿಶಿಷ್ಟ ತಂತ್ರಜ್ಞಾನವೂ ಇದೆ. ದಕ್ಷಿಣ ಭಾರತದಲ್ಲಿ ಈ ಕಾರಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು, ಸಾವಿರಾರು ಕಾರುಗಳಿಗೆ ಬುಕಿಂಗ್‌ ಅಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | Maruti Suzuki Grand Vitara ಅನಾವರಣ, ಸೆಪ್ಟೆಂಬರ್​ನಲ್ಲಿ ಮಾರುಕಟ್ಟೆಗೆ

Exit mobile version