ಬೆಂಗಳೂರು: ಕೆಜಿ ಹಳ್ಳಿಯಲ್ಲಿ ನಡೆದ ಅಪ್ರಾಪ್ತ ವಯಸ್ಕನೊಬ್ಬನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಏಪ್ರಿಲ್ ಮೂರರಂದು ಕೆಜಿ ಹಳ್ಳಿ ರೈಲು ಹಳಿ ಬಳಿ ಕೊಲೆ ನಡೆದಿತ್ತು. 15 ವರ್ಷದ ಬಾಲಕ ಸತೀಶ್ ಎಂಬಾತನ ಕೊಲೆಯಾಗಿತ್ತು. ಸೈಯದ್ ಶೋಯೆಬ್, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಎಂಬ ಆರೋಪಿಗಳು ಕೊಲೆ ಮಾಡಿದ್ದಾರೆ.
ಮಾಸ್ಕ್ ರಸ್ತೆಯಲ್ಲಿ ಕುದುರೆ ಇಟ್ಟುಕೊಂಡಿದ್ದ ಮೃತ ಬಾಲಕ, ಮಕ್ಕಳನ್ನು ಅದರ ಮೇಲೆ ಸವಾರಿ ಮಾಡಿಸುತ್ತಿದ್ದ. ಆರೋಪಿ ಸುಹೇಲುಲ್ಲಾ ಷರೀಫ್ ಕುದುರೆ ಮೇಲೆ ಸವಾರಿ ಮಾಡಲು ಬಂದಾಗ, ದೊಡ್ಡವರನ್ನು ಕೂರಿಸುವುದಿಲ್ಲ ಎಂದು ಬಾಲಕ ಸತೀಶ್ ಹೇಳಿದ್ದ. ಈ ವೇಳೆ ಸಿಟ್ಟಿಗೆದ್ದಿದ್ದ ಆರೋಪಿ ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದ.
ಕೆಲ ದಿನಗಳ ಬಳಿಕ ಹೊಟೇಲ್ ಬಳಿ ಷರೀಫ್‌ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಆತನ ಸ್ನೇಹಿತರು ಷರೀಫ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೆ ಪ್ರತೀಕಾರವಾಗಿ ಬಾಲಕನ ಕೊಲೆಗೆ ಸಂಚು ಹೂಡಿದ ಷರೀಫ್, ಏಪ್ರಿಲ್ ಮೂರರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಇತರ ಇಬ್ಬರನ್ನು ಕೂಡಿಕೊಂಡು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಂತರ ಆತನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.
ಸುಮಾರು 60 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Assault Case: ದಲಿತರ ಮೇಲೆ ಹಲ್ಲೆ, ಪೊಲೀಸ್ ನಿಷ್ಕ್ರಿಯತೆ ವಿರೋಧಿಸಿ ಇಂದು ಶ್ರೀರಂಗಪಟ್ಟಣ ಬಂದ್