Murder Case: ಬಾಲಕನ ಕೊಲೆ: ಮೂವರ ಬಂಧನ, ಕುದುರೆ ಸವಾರಿಯೇ ಹತ್ಯೆಗೆ ಕಾರಣ! - Vistara News

ಕ್ರೈಂ

Murder Case: ಬಾಲಕನ ಕೊಲೆ: ಮೂವರ ಬಂಧನ, ಕುದುರೆ ಸವಾರಿಯೇ ಹತ್ಯೆಗೆ ಕಾರಣ!

ಕೆಜಿ ಹಳ್ಳಿಯಲ್ಲಿ ಕುದುರೆ ಇಟ್ಟುಕೊಂಡು ಮಕ್ಕಳಿಗೆ ಸವಾರಿ ಮಾಡಿಸುತ್ತಿದ್ದ ಸತೀಶ್‌ ಎಂಬ ಬಾಲಕನ ಹತ್ಯೆಯ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ.

VISTARANEWS.COM


on

boy murder
ಮೃತ ಸತೀಶ್‌, ಆರೋಪಿಗಳಾದ ಸೈಯದ್ ಶೋಯೆಬ್‌, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಜಿ ಹಳ್ಳಿಯಲ್ಲಿ ನಡೆದ ಅಪ್ರಾಪ್ತ ವಯಸ್ಕನೊಬ್ಬನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಏಪ್ರಿಲ್ ಮೂರರಂದು ಕೆಜಿ ಹಳ್ಳಿ ರೈಲು ಹಳಿ ಬಳಿ ಕೊಲೆ ನಡೆದಿತ್ತು. 15 ವರ್ಷದ ಬಾಲಕ ಸತೀಶ್ ಎಂಬಾತನ ಕೊಲೆಯಾಗಿತ್ತು. ಸೈಯದ್ ಶೋಯೆಬ್‌, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಎಂಬ ಆರೋಪಿಗಳು ಕೊಲೆ ಮಾಡಿದ್ದಾರೆ.

ಮಾಸ್ಕ್ ರಸ್ತೆಯಲ್ಲಿ ಕುದುರೆ ಇಟ್ಟುಕೊಂಡಿದ್ದ ಮೃತ ಬಾಲಕ, ಮಕ್ಕಳನ್ನು ಅದರ ಮೇಲೆ ಸವಾರಿ ಮಾಡಿಸುತ್ತಿದ್ದ. ಆರೋಪಿ ಸುಹೇಲುಲ್ಲಾ ಷರೀಫ್ ಕುದುರೆ ಮೇಲೆ ಸವಾರಿ ಮಾಡಲು ಬಂದಾಗ, ದೊಡ್ಡವರನ್ನು ಕೂರಿಸುವುದಿಲ್ಲ ಎಂದು ಬಾಲಕ ಸತೀಶ್ ಹೇಳಿದ್ದ. ಈ ವೇಳೆ ಸಿಟ್ಟಿಗೆದ್ದಿದ್ದ ಆರೋಪಿ ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದ.

ಕೆಲ ದಿನಗಳ ಬಳಿಕ ಹೊಟೇಲ್ ಬಳಿ ಷರೀಫ್‌ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಆತನ ಸ್ನೇಹಿತರು ಷರೀಫ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೆ ಪ್ರತೀಕಾರವಾಗಿ ಬಾಲಕನ ಕೊಲೆಗೆ ಸಂಚು ಹೂಡಿದ ಷರೀಫ್‌, ಏಪ್ರಿಲ್ ಮೂರರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಇತರ ಇಬ್ಬರನ್ನು ಕೂಡಿಕೊಂಡು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಂತರ ಆತನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

ಸುಮಾರು 60 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Assault Case: ದಲಿತರ ಮೇಲೆ ಹಲ್ಲೆ, ಪೊಲೀಸ್‌ ನಿಷ್ಕ್ರಿಯತೆ ವಿರೋಧಿಸಿ ಇಂದು ಶ್ರೀರಂಗಪಟ್ಟಣ ಬಂದ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Pavithra Gowda: ಪವಿತ್ರಾ ಗೌಡ ಈಗ ಕೈದಿ ನಂಬರ್ 6024; ಹೈಫೈ ಲೈಫ್ ಲೀಡ್ ಮಾಡಿದ್ದ ನಟಿ ಈಗ ಜೈಲು ಹಕ್ಕಿ!

Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಅವರು ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.

VISTARANEWS.COM


on

Pavithra Gowda Number 6024 in parappana jail
Koo

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ (Pavithra Gowda) ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್‌ವನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಪವಿತ್ರಾ ಗೌಡ ವಿಚಾರಣಾಧೀನ(UTP)ಕೈದಿ ನಂಬರ್ 6024 ಆಗಿದೆ. ಜೈಲು ಅಧಿಕಾರಿಗಳಿಂದ ವಿಚಾರಣಾಧೀನ ಬಂಧಿ ನಂಬರ್ ವಿತರಣೆ ಆಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಅವರು ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ: Pavithra Gowda: ಪರಪ್ಪನ ಅಗ್ರಹಾರದಲ್ಲಿ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸುತ್ತಿರುವ ಪವಿತ್ರ ಗೌಡ!

ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ,ರವಿ ಕಾರ್ತಿಕ್‌ ಜೈಲುಪಾಲಾಗಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ ಗ್ಯಾಂಗ್ ಒಂದು ದಿನ ಕಾಲ ಕಳೆದಿದೆ. ಜೈಲಿನ ಮೆನುವಿನಂತೆ ಕೈದಿಗಳಿಗೆ ಉಪ್ಪಿಟ್ಟು ನೀಡಲಿದ್ದಾರೆ ಜೈಲು ಸಿಬ್ಬಂದಿ. ಇಂದು ಡಿ-ಗ್ಯಾಂಗ್ ಪಟಾಲಂ. ಜೈಲೂಟ ಸವಿಯಲಿದೆ. ಪರಪ್ಪನ ಅಗ್ರಹಾರಕ್ಕೆ ಪವಿತ್ರಾ ಗೌಡ ಕುಟುಂಬಸ್ಥರು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪವಿತ್ರಾ ಗೌಡ ಮಗಳು ಮತ್ತು ತಾಯಿ ಭೇಟಿಯಾಗುವ ಸಾಧ್ಯತೆ ಇದೆ.

ಇನ್ನು ನಿನ್ನೆ ಕೋರ್ಟ್​ನಲ್ಲಿ ವಿಚಾರಣೆ ಮುಗಿಸಿ ಪವಿತ್ರಾ ಪೊಲೀಸ್​ ವ್ಯಾನ್​ ಹತ್ತಿದಾಗ ಅವರನ್ನು ನೋಡಲು ಪುತ್ರಿ ಖುಷಿ ಗೌಡ (Pavithra Gowda Daughter Kushi Gowda) ಆಗಮಿಸಿದ್ದರು. ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಖುಷಿ ಗೌಡ ಹರಸಾಹಸ ಪಡಬೇಕಾಯಿತು. ಪವಿತ್ರಾ ಗೌಡ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್​ ವ್ಯಾನ್​ನ ಪಕ್ಕದಲ್ಲಿ ನಿಂತು ಮಾತನಾಡಿದರು.

Continue Reading

ಕ್ರೈಂ

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

Assault Case : ಮೂರು ವರ್ಷದ ಬಾಲಕಿ ಮೇಲೆ ಎರಗಿದ ಮಲತಂದೆ ಕ್ರೌರ್ಯವನ್ನೇ ಮೆರೆದಿದ್ದಾನೆ. ಬಾಲಕಿಯ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ. ಸದ್ಯ ಮಲತಂದೆ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

VISTARANEWS.COM


on

By

assault Case
ವಿಕೃತಿ ಮೆರೆದಿದ್ದ ಮಲತಂದೆ
Koo

ಬೆಂಗಳೂರು/ಚಿಕ್ಕಬಳ್ಳಾಪುರ: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆ ದೌರ್ಜನ್ಯ (Assault Case) ನಡೆಸಿದ್ದಾನೆ. ಮಹಿಳೆಯ ಮೂರನೇ ಗಂಡನ ವಿಕೃತಿ ಅದ್ಯಾವ ಪರಿ ಇದೆ ಎಂದರೆ ಮಗುವಿನ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ಮೃಗೀಯ ರೀತಿ ವರ್ತಿಸಿದ್ದಾನೆ.

ಗೌರಿಬಿದನೂರಿನಲ್ಲಿ ಮಲತಂದೆಯೊಬ್ಬ ಅಟ್ಟಹಾಸ ತೋರಿದ್ದಾನೆ. ಜರೀನಾ ತಾಜ್‌ ಎಂಬಾಕೆ ಒಟ್ಟು ಮೂರು ಮದುವೆ ಆಗಿದ್ದು, ಅದರಲ್ಲಿ ಎರಡನೇ ಗಂಡನ ಮಗುವಿಗೆ ಮೂರನೇ ಗಂಡ ಚಿತ್ರಹಿಂಸೆ ನೀಡಿದ್ದಾನೆ. ಅಜ್ಮಂತ್‌ ಎಂಬಾತ ಮಗುವಿಗಷ್ಟೇ ಅಲ್ಲದೇ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ.

ಮೂರು ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ. 15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ವಿಕೃತಿ ಮೆರೆದಿದ್ದಾನೆ.

ಜರೀನಾ ತಾಜ್‌ಗೆ ಮೂರು ಮದುವೆಯಾಗಿದ್ದು, ಮೊದಲ ಪತಿಯಿಂದ 2 ಹೆಣ್ಮಕ್ಕಳು ಆಗಿದ್ದವು. 2ನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ಅಜ್ಮಂತ್‌ ಜತೆಗೆ ಮೂರನೇ ಮದುವೆಯಾಗಿದ್ದಳು. ಎರಡನೇ ಪತಿಯಿಂದ ಜನಿಸಿದ್ದ ಹೆಣ್ಣು ಮಗುವಿನ ಮೇಲೆ ಅಜ್ಮಂತ್‌ ಕಿರುಕುಳ ನೀಡಿದ್ದಾನೆ.

ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್‌ಗೆಗೊಳಗಾಗಿದ್ದಾಳೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

ಪುಣೆ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳು ಈಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಹಾಗಾಗಿ ಯುವಕ-ಯುವತಿಯರು ತಮ್ಮ ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ಹಾಗೂ ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಅನೇಕರು ಸಾವನಪ್ಪಿರುವುದು, ಗಾಯಗೊಂಡಿರುವುದು ನಾವು ಆಗಾಗ ನೋಡಿದ್ದೇವೆ. ಆದರೂ ಜನರಿಗೆ ರೀಲ್ಸ್ ಹುಚ್ಚು ಬಿಡುವುದಿಲ್ಲ. ಇದೀಗ ಪುಣೆಯಲ್ಲಿ ಹುಡುಗಿಯೊಬ್ಬಳು, ಹುಡುಗನೊಬ್ಬನ ಕೈಯನ್ನು ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಹುಡುಗನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದಾನೆ. ಹುಡುಗಿ ಆತನ ಕೈಯನ್ನು ಹಿಡಿದುಕೊಂಡು ಕಟ್ಟದಿಂದ ಇಳಿಯುತ್ತಿರುವುದನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ಆಕೆಯ ಸ್ನೇಹಿತರು ವಿವಿಧ ಆ್ಯಂಗಲ್ ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊವನ್ನು ಪುಣೆಯ ಜಂಬುಲ್ವಾಡಿ ಸ್ವಾಮಿನಾರಾಯಣ ಮಂದಿರದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ತೆಗೆಯಲಾಗಿದೆ. ಜೂನ್ 19ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ 55,000ಕ್ಕೂ ಹೆಚ್ಚು ವೀವ್ಸ್ ಸಿಕ್ಕಿದೆ ಮತ್ತು ಅನೇಕರು ಅವರ ಮೂರ್ಖತನಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಹಲವಾರು ಘಟನೆಗಳು ವರದಿಯಾದ ಮೇಲೂ ಇಂತಹ ಬೇಜವಾಬ್ದಾರಿ ಕೆಲಸ ನಿಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳಲು ತನ್ನ ಕುಟುಂಬವನ್ನು ಜೀವನಪರ್ಯಂತ ನರಳುವಂತೆ ಮಾಡುವ ಮನೋಭಾವ ಇದು ಎಂದು ಮತ್ತೊಬ್ಬ ಬಳಕೆದಾರರು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

Actor Darshan: ಪ್ರಕರಣದಲ್ಲಿ ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್‌ ರಾಜು ಫೋನ್ ಸ್ವಿಚಾಫ್‌ ಮಾಡಿಕೊಂಡಿದ್ದಾನೆ. ಫೋನ್ ಸ್ವಿಚಾಫ್ ಆಗಿರುವುದರಿಂದ ಮನೆಗೆ ಹೋಗಿ ನೋಟಿಸ್ ನೀಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಮುಂದಾಗಿದ್ದಾರೆ.

VISTARANEWS.COM


on

ram mohan raju actor darshan
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣವನ್ನು ಮುಚ್ಚಿ ಹಾಕಲು ನಟ ದರ್ಶನ್‌ (Actor Darshan) ತನ್ನ ಸಹಚರರಿಗೆ ನೀಡಿದ್ದ 30 ಲಕ್ಷ ರೂ. ಹಣವನ್ನು ಒಬ್ಬ ಮಾಜಿ ಕಾರ್ಪೊರೇಟರ್‌ನಿಂದ ಪಡೆದಿದ್ದು ಗೊತ್ತಾಗಿದೆ. ಈ ಕುರಿತು ಈ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಈ ಆಸಾಮಿ ಯಾರ ಕಣ್ಣಿಗೂ ಬೀಳದೆ (Absconded) ನಾಪತ್ತೆಯಾಗಿದ್ದಾರೆ.

ರೇಣುಕಾ ಸ್ವಾಮಿ ಕೇಸ್‌ನಲ್ಲಿ ಮತ್ತೊಬ್ಬ ವ್ಯಕ್ತಿಯ ಕೈವಾಡ ಇರುವುದು ಪತ್ತೆಹಚ್ಚಿದ ಪೊಲೀಸರಿಗೆ ಗೊತ್ತಾಗಿರುವುದು ದರ್ಶನ್‌ಗೆ ಲಕ್ಷ ಲಕ್ಷ ಹಣ ನೀಡಿದ ಆ ವ್ಯಕ್ತಿಯ ಬಗ್ಗೆ. ಕೊಲೆ‌ ನಡೆದ ಬೆನ್ನಲ್ಲೇ ದರ್ಶನ್ ಆ ವ್ಯಕ್ತಿಯಿಂದ ಹಣ ಪಡೆದಿದ್ದಾನೆ. ಸಾಕ್ಷಿ ನಾಶ ಮಾಡುವುದಕ್ಕೆಂದೇ 40 ಲಕ್ಷ ರೂ. ಹಣವನ್ನು ಇವರಿಂದ ದರ್ಶನ್‌ ಪಡೆದಿದ್ದ. ಆ 40 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದೀಗ ಹಣದ ಬಗ್ಗೆ ಆ ವ್ಯಕ್ತಿಯನ್ನು ಪ್ರಶ್ನಿಸಬೇಕಿದೆ.

ಮಾಜಿ ಕಾರ್ಪೊರೇಟರ್‌ ಆಗಿರುವ ಮೋಹನ್ ರಾಜ್ ಎಂಬಾತನೇ ಈ ವ್ಯಕ್ತಿಯಾಗಿದ್ದು, ಈತನಿಂದ ದರ್ಶನ್‌ಗೆ ಹಣ ಸಂದಾಯವಾಗಿದೆ. ದರ್ಶನ್‌ಗೆ ಆಪ್ತ ಸ್ನೇಹಿತ ಆಗಿರುವ ಮೋಹನ್ ರಾಜ್, ಆತನಿಗೆ 40 ಲಕ್ಷ ರೂ. ಹಣ ನೀಡಿದ್ದಾನೆ. ಈ ಹಣವನ್ನು ತನ್ನ ಸಹಚರರಿಗೆ ನೀಡಿರುವ ದರ್ಶನ್‌, ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಳ್ಳದಂತೆ ತಿಳಿಸಿದ್ದಾನೆ. ಇದೀಗ ಇರುವ ಪ್ರಶ್ನೆಯೆಂದರೆ, ಈ ಹಣ ಪಡೆಯುವಾಗ ಮೋಹನ್‌ ರಾಜ್‌ಗೆ ಈ ಕೊಲೆಯ ಬಗ್ಗೆ ತಿಳಿದಿತ್ತೇ ಇಲ್ಲವೇ ಎಂಬುದು. ತಿಳಿದಿತ್ತು ಎಂದಾದರೆ, ಕೊಲೆ ಪ್ರಕರಣ ಮೋಹನ್‌ ರಾಜ್‌ ಕೊರಳಿಗೂ ಸುತ್ತಿಕೊಳ್ಳಲಿದೆ.

ಹಣದ ಬಗ್ಗೆ ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಮೋಹನ್ ರಾಜ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಬಂಧನ ಸಾಧ್ಯತೆಯೂ ಇದೆ. ಈ ಮೋಹನ್‌ ರಾಜು 2019ರಲ್ಲಿ ಬೆಂಗಳೂರಿನ ಉಪಮೇಯರ್ ಆಗಿದ್ದ. ಬೊಮ್ಮನಹಳ್ಳಿ ವಾರ್ಡ್ ಕಾರ್ಪೋರೇಟರ್ ಆಗಿದ್ದ. ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಭಾವಿಯೂ ಆಗಿದ್ದಾನೆ.

ಪ್ರಕರಣದಲ್ಲಿ ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್‌ ರಾಜು ಫೋನ್ ಸ್ವಿಚಾಫ್‌ ಮಾಡಿಕೊಂಡಿದ್ದಾನೆ. ಫೋನ್ ಸ್ವಿಚಾಫ್ ಆಗಿರುವುದರಿಂದ ಮನೆಗೆ ಹೋಗಿ ನೋಟಿಸ್ ನೀಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಬಂಧಿತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ವಿಶೇಷವೆಂದರೆ, 2018ರಲ್ಲಿ ಇದೇ ಮೋಹನ್ ರಾಜ್ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಜಮೀನು ವಿಚಾರವಾಗಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ, ಬೊಮ್ಮನಹಳ್ಳಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಎದುರೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಇದನ್ನೂ ಓದಿ: Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Actor Darshan: , ನಟಿ ಸಂಜನಾ ಗಲ್ರಾನಿ ಅವರು ಸ್ಪಷ್ಟ ಅಭಿಪ್ರಾಯ ನೀಡಿದ್ದು ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದಾರೆ. ನಟಿ ಸಂಜನಾ ಗಲ್ರಾನಿ ಮಾತನಾಡಿ ʻʻದರ್ಶನ್‌ ಅವರು ಕೆಟ್ಟವರಲ್ಲ . ತುಂಬ ಜಂಟಲ್‌ಮೆನ್‌. ಹಾಗೇ ನಾನು ಅವರ ಜತೆ ಕೆಲಸ ಮಾಡಿದ್ದೇನೆ. ಅವರನ್ನು ಎಲ್ಲೇ ಭೇಟಿ ಆದರೂ ಚೆನ್ನಾಗಿ ಮಾತಾಡುತ್ತಾರೆ. ನನಗೆ ಅವರ ಮೇಲೆ ಗೌರವ ಇದೆ. ʻಅರ್ಜುನ್‌ʼ ಸಿನಿಮಾ ಮಾಡುವಾಗ, ನರ್ವಸ್‌ ಆದಾಗ ಸಹಾಯ ಮಾಡಿದ್ದರು. ಆದರೆ ಈಗ ದರ್ಶನ್‌ ಅವರ ಈ ನ್ಯೂಸ್‌ ತುಂಬ ಕಾಡುತ್ತಿದೆʼʼ ಎಂದರು.

VISTARANEWS.COM


on

Actor Darshan case sanjana galrani Reaction about ramya statement
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ (Actor Darshan) ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ.  ಈ ಕೊಲೆ ಕೇಸ್‌ನಲ್ಲಿ ದರ್ಶನ್‌ ಅವರು ಕೇಸ್‌ನಿಂದ ತಪ್ಪಿಸಿಕೊಳ್ಳಲು ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದರು. ಇದೀಗ ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾರೆ ದರ್ಶನ್‌. ಈ ನಡುವೆ, ನಟಿ ಸಂಜನಾ ಗಲ್ರಾನಿ ಅವರು ಸ್ಪಷ್ಟ ಅಭಿಪ್ರಾಯ ನೀಡಿದ್ದು ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದಾರೆ. ನಟ ದರ್ಶನ್ ತೂಗುದೀಪ ಆರೋಪಿಯೇ ಹೊರತು ಅಪರಾಧಿ ಅಲ್ಲ ಎಂದಿದ್ದಾರೆ. ಜತೆಗೆ ರಮ್ಯಾ ಅವರ ಟ್ವಿಟರ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತಿನ ನಡುವೆ ತಾವು ಮೂರು ತಿಂಗಳು ಜೈಲಿನಲ್ಲಿದ್ದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ.

ನಟಿ ಸಂಜನಾ ಗಲ್ರಾನಿ ಮಾತನಾಡಿ ʻʻದರ್ಶನ್‌ ಅವರು ಕೆಟ್ಟವರಲ್ಲ . ತುಂಬ ಜಂಟಲ್‌ಮೆನ್‌. ಹಾಗೇ ನಾನು ಅವರ ಜತೆ ಕೆಲಸ ಮಾಡಿದ್ದೇನೆ. ಅವರನ್ನು ಎಲ್ಲೇ ಭೇಟಿ ಆದರೂ ಚೆನ್ನಾಗಿ ಮಾತಾಡುತ್ತಾರೆ. ನನಗೆ ಅವರ ಮೇಲೆ ಗೌರವ ಇದೆ. ʻಅರ್ಜುನ್‌ʼ ಸಿನಿಮಾ ಮಾಡುವಾಗ, ನರ್ವಸ್‌ ಆದಾಗ ಸಹಾಯ ಮಾಡಿದ್ದರು. ಆದರೆ ಈಗ ದರ್ಶನ್‌ ಅವರ ಈ ನ್ಯೂಸ್‌ ತುಂಬ ಕಾಡುತ್ತಿದೆʼʼ ಎಂದರು.

ಇನ್ನು ರಮ್ಯಾ ಅವರು ಗಲ್ಲು ಶಿಕ್ಷೆ ದರ್ಶನ್‌ ಅವರಿಗೆ ಆಗಬೇಕು ಎಂದು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಸಂಜನಾ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ. ʻʻನೋಡಿ ಗಲ್ಲು ಶಿಕ್ಷೆ ಆಗಬೇಕು ಎಂದು ಹೇಳುವ ಅಧಿಕಾರ ಕೋರ್ಟ್‌ಗೆ ಇದೆ. ನನ್ನ ಉದಾಹರಣೆ ಕೊಡುತ್ತೇನೆ. ನಾನು ಡ್ರಗ್ಸ್‌ ಕೇಸ್‌ ವಿಚಾರವಾಗಿ ನನ್ನ ಕರೆದಾಗ ಏಕಾ ಏಕಿ ಅರೆಸ್ಟ್‌ ಮಾಡಿದ್ದರು. ಆಮೇಲೆ ಮೊಬೈಲ್‌ ತೆಗೆದುಕೊಂಡರು. ಆಮೇಲೆ ತುಂಬ ಕಷ್ಟ ಪಟ್ಟೆ. ಇನ್ನು ನ್ಯೂಸ್‌ನಲ್ಲಿ ನೋಡಿದಾಗ ಸಂಜನಾ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಬಂತು. ಇನ್ನು ಇಲ್ಲಿ ವಿಚಾರಣೆನೇ ಆಗಿಲ್ಲ. ಯಾವುದೇ ಹೇಳಿಕೆಯೇ ನೀಡಿಲ್ಲ. ಆಗಲೇ ತಪ್ಪು ಒಪ್ಪಿಕೊಂಡರು ಎಂದು ಮಾಧ್ಯಗಳಲ್ಲಿ ಬಂತು. ಡ್ರಗ್ಸ್‌ ದಂಧೆ ನಡೆಸುತ್ತಾರೆ ಎಂದೆಲ್ಲ ಹಬ್ಬಿತ್ತು. ಈ ತರ ರೂಮರ್ಸ್‌ವನ್ನು ಯಾರು ತಡಿಲಿಕ್ಕೆ ಆಗುತ್ತೆ. ನಮ್ಮ ವಕೀಲರು ಇನೋಸೆಂಟ್‌ ಅಂದರು ಯಾರು ಕ್ಯಾರ್‌ ಮಾಡಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ: Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

ʻʻಚಾರ್ಜ್‌ಶೀಟ್‌ವನ್ನು ಮೊದಲು ಗೌರವಿಸಬೇಕು. ಊಹಾಪೋಹಗಳು ನಿಜ ಅಲ್ಲ. ಇನ್ನು ದರ್ಶನ್‌ ಕೇಸ್‌ಗೆ ಸಂಬಂಧಪಟ್ಟಂತೆ ವಿಚಾರಣೆ ಇನ್ನೂ ನಡಯುತ್ತಿದೆ ಅಂದಿದ್ದಾರೆ. ಆದರೂ ಈ ಗಾಸಿಪ್‌ಗಳು ಯಾಕೆ ಅನ್ನೋದು ಗೊತ್ತಿಲ್ಲ. ಕೆಲವೊಂದು ಮಾಧ್ಯಮಗಳು ಟಿಆರ್‌ಪಿಗೋಸ್ಕರ ಏನೂ ಬೇಕಾದರು ಹಾಕುತ್ತಾರೆ. ದರ್ಶನ್‌ ಅವರು ಕೆಟ್ಟವರಲ್ಲʼʼಎಂದಿದ್ದಾರೆ.

ನಟಿ ಪವಿತ್ರಾ ಗೌಡ (Pavithra Gowda) ಜೈಲು ಪಾಲಾಗಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ಜೂನ್​ 20 ಅವರ ಪೊಲೀಸ್​​ ಕಸ್ಟಡಿ ಅಂತ್ಯವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸಿದ್ದರು ಎನ್ನಲಾಗಿದೆ.

Continue Reading
Advertisement
Engineering Seats
ಶಿಕ್ಷಣ18 mins ago

Engineering Seats: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಈ ಬಾರಿ ಹೆಚ್ಚು ಸೀಟುಗಳು ಲಭ್ಯ!

Pavithra Gowda Number 6024 in parappana jail
ಕ್ರೈಂ18 mins ago

Pavithra Gowda: ಪವಿತ್ರಾ ಗೌಡ ಈಗ ಕೈದಿ ನಂಬರ್ 6024; ಹೈಫೈ ಲೈಫ್ ಲೀಡ್ ಮಾಡಿದ್ದ ನಟಿ ಈಗ ಜೈಲು ಹಕ್ಕಿ!

assault Case
ಕ್ರೈಂ32 mins ago

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ram mohan raju actor darshan
ಪ್ರಮುಖ ಸುದ್ದಿ36 mins ago

Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

Darshan Arrested in IT trouble! Is the money paid to a MLA's friend
ಸ್ಯಾಂಡಲ್ ವುಡ್40 mins ago

Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

IRCTC Ticket Booking
Latest56 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest58 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ1 hour ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್2 hours ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ2 hours ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌