Site icon Vistara News

Murder case:ಪ್ರಿಯಕರನೊಟ್ಟಿಗೆ ಏಕಾಂತದಲ್ಲಿರುವಾಗಲೇ ಮಗಳು ಲಾಕ್‌; ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಾಯಿಯನ್ನೇ ಕೊಂದಳು ಪಾಪಿ

Murder case

ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಹೊಂಗಸಂದ್ರದಲ್ಲಿ ಪ್ರಿಯಕರನೊಂದಿಗೆ ಸೇರಿದ ಗೃಹಿಣಿಯೊಬ್ಬಳು ತನ್ನ ಸ್ವಂತ ತಾಯಿಯನ್ನೇ ಕೊಂದು (Murder case) ಹಾಕಿದ್ದಾಳೆ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಯಲಕ್ಷ್ಮಿ ಮೃತ ದುರ್ದೈವಿ. ಮಗಳು ಪವಿತ್ರಾ ಹಾಗೂ ಪ್ರಿಯಕರ ನವನೀಶ್‌ ಕೊಲೆ ಆರೋಪಿಗಳಾಗಿದ್ದಾರೆ.

ಈ ಪವಿತ್ರಾ 12 ವರ್ಷದ ಹಿಂದೆ ಸುರೇಶ್ ಎಂಬಾತನೊಂದಿಗೆ ಮದುವೆಯಾಗಿದ್ದಳು. ಪವಿತ್ರಾ ವಾಸವಿದ್ದ ಮನೆಯಲ್ಲಿ ತಮಿಳುನಾಡು ಮೂಲದ ನವನೀಶ್ ಬಾಡಿಗೆಗೆ ಬಂದಿದ್ದ. ನವನೀಶ್‌ನ ಮೋಹಕಕ್ಕೆ ಪವಿತ್ರಾ ಸಿಲುಕಿದ್ದಳು. ಮದುವೆ ಆಗಿದ್ದರೂ ಮತ್ತೊಬ್ಬನ ಜತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಪತಿ ಕೆಲಸಕ್ಕೆಂದು ಅಂಗಡಿಗೆ ಹೋಗುತ್ತಿದ್ದಂತೆ ನವನೀಶ್‌ ಪವಿತ್ರಾ ಮನೆಗೆ ಬರುತ್ತಿದ್ದ. ಇವರಿಬ್ಬರ ಕಳ್ಳ ಸಂಬಂಧ ಅದ್ಹೇಗೋ ತಾಯಿ ಜಯಲಕ್ಷ್ಮಿಗೆ ಗೊತ್ತಾಗಿತ್ತು.

ಮಗಳಿಂದಲೇ ಕೊಲೆಯಾದ ಜಯಲಕ್ಷ್ಮೀ

ಮಗಳ ಈ ನಡೆಗೆ ಸಿಟ್ಟಾದ ಜಯಲಕ್ಷ್ಮೀ ಹಲವು ಬಾರಿ ವಾರ್ನಿಂಗ್ ಕೊಟ್ಟಿದ್ದರು. ಆದರೂ ಪವಿತ್ರಾ ಅಮ್ಮನ ಮಾತಿಗೆ ಡೋಟ್‌ಕೇರ್‌ ಎಂದಿದ್ದಳು. ಮೊನ್ನೆ ಸೆ. 11ರಂದು ಇಬ್ಬರು ರೂಮಿನೊಳಗೆ ಇದ್ದಾಗಲೇ ಜಯಲಕ್ಷ್ಮಿಗೆ ಲಾಕ್‌ ಆಗಿದ್ದಳು. ಇದರಿಂದ ಸಿಟ್ಟಿಗೆದ್ದ ಜಯಲಕ್ಷ್ಮಿ ಗಲಾಟೆ ಮಾಡಿದ್ದರು. ತಮ್ಮಿಬ್ಬರ ಸಂಬಂಧಕ್ಕೆ ತಾಯಿ ಅಡ್ಡಿಯಾಗಿದ್ದಕ್ಕೆ ಕೋಪಗೊಂಡಿದ್ದ ಪವಿತ್ರಾ, ತನ್ನ ಪ್ರಿಯಕರನೊಂದಿಗೆ ಸೇರಿ ಪಕ್ಕದಲ್ಲೆ ಇದ್ದ ಟವೆಲ್‌ನಿಂದ ಜಯಲಕ್ಷ್ಮಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: Hariprakash Konemane: ದಲಿತೋದ್ಧಾರದ ಮಾತುಗಳು ಮೊಸಳೆ ಕಣ್ಣೀರಷ್ಟೇ; ಕಾಂಗ್ರೆಸ್ ತನ್ನ ನಿಜಬಣ್ಣ ತೆರೆದಿಟ್ಟಿದೆ- ಹರಿಪ್ರಕಾಶ್ ಕೋಣೆಮನೆ

ಕೊಲೆ ನಂತರ ಬಾತ್ ರೂಂನಲ್ಲಿ ಬಿದ್ದು ಸತ್ತಿದ್ದಾರೆ ಎಂದು ಪವಿತ್ರಾ ಹೇಳಿಕೆ ನೀಡಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಸಿರುಗಟ್ಟಿಸಿ ಕೊಲೆ ಎಂದು ವರದಿ ಬಂದಿತ್ತು. ಇದೀಗ ವರದಿ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.

ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣ ದಾಖಲಾಗಿದೆ. 46 ವರ್ಷದ ಜಯಲಕ್ಷ್ಮೀ ಎಂಬುವವರು ಮೃತರು. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ. ಆರಂಭದಲ್ಲಿ ಕೊಲೆ ಎಂದು ಶಂಕಿಸಲಾಗಿತ್ತು, ನಂತರ ಪೋಸ್ಟ್ ಮಾರ್ಟಮ್ ವರದಿ ಬಂದ ಮೇಲೆ ಕೊಲೆ ಎಂದು ಖಚಿತವಾಗಿತ್ತು. ಆರಂಭದಲ್ಲಿ ಮೃತಳ ಮಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದಳು. ತಾಯಿಗೆ ಆರೋಗ್ಯ ಸರಿ ಇರಲಿಲ್ಲ ಅನಂತರ ಬಿದ್ದು ಸಾವಾಗಿದ್ದಾರೆ ಎಂದಿದ್ದರು. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version