ಬೆಂಗಳೂರು: ವಿವಾಹಿತೆಯ ಭೀಕರ ಹತ್ಯೆಯು (Murder Case) ರಾಜಧಾನಿ ಬೆಂಗಳೂರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ದೆಹಲಿಯ ಶ್ರದ್ಧಾ ವಾಕರ್ ಮರ್ಡರ್ ರೀತಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ವಿವಾಹಿತೆಯನ್ನು ಕೊಂದು ಬಳಿಕ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ನೆಲಮಂಗಲ ಮೂಲದ ಮಹಾಲಕ್ಷ್ಮಿ ಮೃತ ದುರ್ದೈವಿ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಶ್ವರ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಡಿಸಿಪಿ ಶೇಖರ್ ತೆಕ್ಕಣ್ಣನವರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಳ ತಾಯಿ ಹಾಗೂ ಸಹೋದರಿ ಮಹಾಲಕ್ಷ್ಮಿ ಮನೆ ಬಳಿ ಬಂದಿದ್ದಾರೆ. ಮನೆ ಬೀಗ ಒಡೆದು ಒಳ ಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೀಗಾಗಿ ಅದೇ ಬಿಲ್ಡಿಂಗ್‌ನ ಅಕ್ಕಪಕ್ಕದವರು ಇಂದು ಮಹಾಲಕ್ಷ್ಮಿ ಸಂಬಂಧಿಕರಿಗೆ ಹೇಳಿದ್ದಾರೆ. ಮನೆ ಬೀಗ ತೆಗೆದ ಸಂದರ್ಭದಲ್ಲಿ ಶವದಿಂದ ಹುಳಗಳ ಹೊರಗೆ ಬರುತ್ತಿತ್ತು ಎನ್ನಲಾಗಿದೆ.
10 ರಿಂದ 15 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದಷ್ಟೆ ಮಹಾಲಕ್ಷ್ಮಿ ಬಾಡಿಗೆ ಮನೆಗೆ ಬಂದಿದ್ದಳು. ಯುವಕನೊರ್ವ ಆಕೆಯನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುತ್ತಿದ್ದ. ಆತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. 30ಕ್ಕೂ ಹೆಚ್ಚು ತುಂಡುಗಳನ್ನಾಗಿ ದೇಹವನ್ನು ಕತ್ತರಿಸಿ ಬಳಿಕ ಫ್ರಿಜ್ಜ್‌ನಲ್ಲಿ ಇಟ್ಟು ಕೊಲೆಗಾರ ಎಸ್ಕೇಪ್ ಆಗಿದ್ದಾನೆ. ಸದ್ಯ ಪೊಲೀಸರು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದು, ಅಕ್ಕ ಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ.
ಈಗಾಗಲೇ ಮದುವೆ ಆಗಿರುವ ಮಹಾಲಕ್ಷ್ಮಿ ನೆಲಮಂಗಲದಲ್ಲಿರುವ ಪತಿಯಿಂದ ದೂರಾಗಿ ಒಂಟಿಯಾಗಿ ವೈಯಾಲಿಕಾವಲ್‌ನಲ್ಲಿ ವಾಸವಿದ್ದಳು. ಈ ದಂಪತಿಗೆ ನಾಲ್ಕು ವರ್ಷದ ಮಗು ಕೂಡ ಇದೆ ಎನ್ನಲಾಗಿದೆ. ಹಲವು ದಿನದಿಂದ ಕರೆ ಮಾಡಿದ್ದರು ಪತ್ನಿ ಮಹಾಲಕ್ಷ್ಮಿ ಸ್ವೀಕರಿಸುತ್ತಿರಲಿಲ್ಲ. ಇಂದು ಪತಿ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲಯ ತರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಬರುತ್ತಿತ್ತು. ಸುಮಾರು 10-15ದಿನದ ಹಿಂದೆಯೆ ಕೊಲೆ ನಡೆದಿರುವ ಶಂಕೆ ಇದೆ. ಈ ಕೃತ್ಯದ ಕುರಿತು ಮಾಹಿತಿ ನೀಡಿದ ಸ್ಥಳೀಯರು, ಸ್ವಲ್ಪ ಸಮಯದ ಕಾಲ ಮಹಾಲಕ್ಷ್ಮಿ ಅಣ್ಣ ಜೊತೆಗಿದ್ದರು. ಮಹಿಳೆಯ ಬಗೆಗೆ ಯಾವುದೇ ರೀತಿಯ ಮಾಹಿತಿ ಗೊತ್ತಿಲ್ಲ. ನಮ್ಮ ಬಳಿ ಮಾತನಾಡುವಾಗ ಕನ್ನಡದಲ್ಲೇ ಮಾತನಾಡುತ್ತಿದ್ದರು. ಸ್ಥಳೀಯ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಪೊಲೀಸರು ಮಹಾಲಕ್ಷ್ಮಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಕೃತ್ಯ ಎಸಗಿದವರು ಯಾರು? ಯಾಕಾಗಿ ಕೊಲೆ ಮಾಡಲಾಯಿತು ಎಂಬುದು ತನಿಖೆಯಿಂದ ಹೊರಬರಬೇಕಿದೆ.
ತಮಿಳುನಾಡಿನಲ್ಲಿ ಬರ್ಬರವಾಗಿ ಕೊಲೆಯಾದ ಬೆಂಗಳೂರು ಯುವಕ
ಬೆಂಗಳೂರಿನ ಯುವಕ ತಮಿಳುನಾಡಿನಲ್ಲಿ ಬರ್ಬರವಾಗಿ ಹತ್ಯೆ ಆಗಿದ್ದಾನೆ. ವರ್ತೂರು ಸಮೀಪದ ರೇವಂತ್ ಕೊಲೆಯಾದವನು. ಗಣಪತಿ ಇಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆಯಾಗಿರುವ ಶಂಕೆ ಇದೆ. ಎರಡು ದಿನದ ಹಿಂದೆಯೇ ರೇವಂತ್ ಕೊಲೆಯಾಗಿದ್ದು, ಕೈಯಲ್ಲಿದ್ದ ಹಚ್ಚೆಯ ಆಧಾರದ ಮೇಲೆ ರೇವಂತ್ ಗುರುತು ಪತ್ತೆ ಮಾಡಲಾಗಿದೆ. ಮೃತನ ಗುರುತು ಪತ್ತೆ ಹಚ್ಚಿದ ತಮಿಳುನಾಡು ಪೊಲೀಸರು, ವರ್ತೂರು ಠಾಣಾ ವ್ಯಾಪ್ತಿಯ ಸೂಲಕೊಂಡೆ ಮೂಲದವನು ಎಂದು ಗೊತ್ತಾಗಿದೆ. ರೇವಂತ್ ಪರಿಚಯಸ್ಥರೊಬ್ಬರು ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದಿರುವ ಮಾಹಿತಿ ಇದೆ. ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ