ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅವಘಡಗಳು (Namma Metro) ಮುಂದುವರಿದಿದೆ. ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರ್ಮ್‌ನಿಂದ ಯುವಕನೊರ್ವ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಹಾರ ಮೂಲದ 30 ವರ್ಷದ ಸಿದ್ದಾರ್ಥ್ ಎಂಬಾತ ಮೆಟ್ರೋ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಮಂಗಳವಾರ ಮಧ್ಯಾಹ್ನ 2-20ರ ಸುಮಾರಿಗೆ ಘಟನೆ ನಡೆದಿದ್ದು, 2-20 ರಿಂದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನೇರಳೆ ಮಾರ್ಗದ ವೈಟ್ ಫೀಲ್ಡ್ ನಿಂದ ಚೆಲ್ಲಘಟ್ಟ ಮಾರ್ಗದಲ್ಲಿ ರೈಲು ಸ್ಥಗಿತಗೊಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ರೈಲು ಬರುತ್ತಿದ್ದಂತೆ ಟ್ರ್ಯಾಕ್‌ಗೆ ಜಿಗಿದಿದ್ದ. ಘಟನೆಯ ನಂತರ ತಕ್ಷಣವೇ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಅನ್ನು ನಿರ್ವಹಿಸಲಾಗಿದೆ.
ಮೆಟ್ರೋ ಸ್ಟೇಷನ್ ಕಂಟ್ರೋಲರ್ ತಂಡದವರು ಕೂಡಲೇ ಯುವಕನನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎನ್ನಲಾಗಿದೆ. ಇಡೀ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು. 2:13 ರಿಂದ 2.30 ರವರೆಗೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬದಲು ಮೈಸೂರು ರಸ್ತೆಯಲ್ಲಿ ಶಾರ್ಟ್ ಲೂಪ್‌ನಲ್ಲಿ 2 ರೈಲುಗಳನ್ನು ಓಡಿಸಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ