ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ನಡೆದ ಘೋರ ಅಪಘಾತ (Road Accident) ಒಂದರಲ್ಲಿ, ಟಿಪ್ಪರ್ ಲಾರಿಗೆ ಗರ್ಭಿಣಿ (Pregnant death) ಬಲಿಯಾಗಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಹಿತ ಹೊಟ್ಟೆಯಿಂದ ಹೊರಬಂದು ಸಾವಿಗೀಡಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘೋರ ದುರಂತ ಸಂಭವಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. 8 ತಿಂಗಳ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಟಿಪ್ಪರ್ ಮೈಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ ಮಗು ಕೂಡ ಹೊರಗೆ ಬಂದು ಅಸುನೀಗಿದೆ.
ಮೃತ ಮಹಿಳೆಯನ್ನು ಎಡೇಹಳ್ಳಿ ಗ್ರಾಮದ ಸಿಂಚನ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೋಟೆಲ್, ಮಾಲ್‌ಗಳಲ್ಲಿ ಆಹಾರದಲ್ಲಿ ಕೆಮಿಕಲ್, ಕಲರ್ ಬಳಸಿದರೆ ಕ್ರಮ; ತರಕಾರಿ ಮಾರಾಟಗಾರರಿಗೂ ಲೈಸೆನ್ಸ್ ಕಡ್ಡಾಯ
ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಮಾಲ್‌ಗಳಲ್ಲಿ ನೀಡಲಾಗುವ ಆಹಾರದಲ್ಲಿ ಕೃತಕ ಕಲರ್ (Added colour) ಹಾಗೂ ಕೆಮಿಕಲ್ (Chemicals in Food) ಬಳಕೆ ಮಾಡದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಮಾಲ್‌ಗಳು ಹಾಗೂ ಹೋಟೆಲ್ ಮಾಲೀಕರ ಜೊತೆಗೆ ಸಭೆ ನಡೆಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಆಹಾರದಲ್ಲೂ ಕಲರ್ ಬಳಕೆ, ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತನಿಖೆ ಮಾಡಿದಾಗ ಮಾಲ್‌ಗಳಲ್ಲಿನ ಫುಡ್ ಕಳಪೆ ಎಂದು ಪತ್ತೆಯಾಗಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲರೂ ಆಹಾರದಲ್ಲಿ ಶುಚಿತ್ವ ಕಾಪಾಡುವಂತೆ ಹಾಗೂ ಕಲರ್ ಮುಕ್ತ ಆಹಾರ ನೀಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.
ಇದರ ಜೊತೆಗೆ ತರಕಾರಿ ಮಾರಾಟಗಾರರಿಗೂ ಲೈಸನ್ಸ್ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲಾ ತರಕಾರಿ ವ್ಯಾಪಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು. ತರಕಾರಿಗಳ ಸ್ಯಾಂಪಲ್‌ಗಳನ್ನು ಅಗತ್ಯ ಬಿದ್ದರೆ ಪರೀಕ್ಷೆ ನಡೆಸಬೇಕು. ತರಕಾರಿ- ಹಣ್ಣು ಮಾರುವಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಸಾವಯವ ತರಕಾರಿ ಮಾರುತ್ತೇವೆ ಎಂದು ಹೆಚ್ಚಿನ ದರದಲ್ಲಿ ಕಳಪೆ ತರಕಾರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡುಬರುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್