Site icon Vistara News

Nitin gadkari | ಇಂದು ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ನಡೆಸಲಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ

Nitin Gadkari

ಬೆಂಗಳೂರು: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin gadkari ) ಅವರು ಜನವರಿ 5ರ ಗುರುವಾರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಹಾಗೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (Bengaluru-Mysore National Highway) ಕಾಮಗಾರಿಯ ಪರಿಶೀಲನೆ ನಡೆಸಲಿದ್ದಾರೆ.

ಬೆಳಗ್ಗೆ 9.30ಕ್ಕೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ( Bengaluru-Chennai expressway) ಹಾಗೂ 11.15ಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಈ ಸಂಬಂಧ ಸಚಿವರು ಟ್ವೀಟ್‌ ಮಾಡಿದ್ದಾರೆ.

ವೈಮಾನಿಕ ಪರಿಶೀಲನೆ:

ಹೆಲಿಕಾಫ್ಟರ್ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ‌ ಅವರು ನೂತನ ಹೆದ್ದಾರಿಗಳ ಪರಿಶೀಲನೆ ನಡೆಸಲಿದ್ದಾರೆ. ವೈಮಾನಿಕ ಪರಿಶೀಲನೆ ನಂತರ ರಸ್ತೆ‌ಮಾರ್ಗವಾಗಿಯೂ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ.

ಬೆಂಗಳೂರು- ಚೆನೈ ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ ಉಭಯ ನಗರಗಳ ನಡುವೆ 7 ಗಂಟೆಗಳ ಪ್ರಯಾಣವು 3 ಗಂಟೆಗಳಿಗೂ ಕಡಿಮೆ ಸಮಯಕ್ಕೆ ತಗ್ಗಲಿದೆ.

ನಗರದ ಹೊಸಕೋಟೆಯಿಂದ ಕಾಂಚೀಪುರಂ ಶ್ರೀಪೆರಂಬುದೂರ್‌ಗೆ ಸಂಪರ್ಕ ಕಲ್ಪಿಸಲಿದೆ. 262 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ ವೇ, ಕರ್ನಾಟಕ – ಆಂಧ್ರಪ್ರದೇಶ – ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದೆ. 14870 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿದ್ದವಾಗುತ್ತಿದೆ.

Exit mobile version