ಬೆಂಗಳೂರು: ವಿಕೃತ ಮನಸ್ಥಿತಿಯ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಯಾರ ಭಯವು ಇಲ್ಲದೇ ಸಾರ್ವಜನಿಕವಾಗಿಯೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಇದರಿಂದ ಮುಜುಗರಕ್ಕೀಡಾಗುತ್ತಿರುವುದು ಮಾತ್ರವಲ್ಲ ಅವರಿಗೆ ಭದ್ರತೆಯೇ ಇಲ್ಲದಂತಾಗಿದೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಕಾಮುಕನೊಬ್ಬ, ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.
ಶೃತಿ ಸಿಂಗ್ ಎಂಬಾಕೆ ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೃತಿ ಅವರು ತಮ್ಮ ಸ್ನೇಹಿತನ ಜತೆ ಡ್ರಾಪ್ ಪಡೆದು ಮನೆ ಬಳಿ ಬರುತ್ತಿದ್ದರು. ಆಕೆ ಒಬ್ಬಂಟಿಯಾಗಿದ್ದನ್ನು ಗಮನಿಸಿದ ಕಾಮುಕ ಹಿಂಬಾಲಿಕೊಂಡು ಬಂದಿದ್ದ. ನಂತರ ಆಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್‌ನಿಂದ ಇಳಿದು, ಓಡಿ ಬಂದವನೇ ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ ಗಾಬರಿಯಾಗಿ ಕಿರುಚಾಡಿದ್ದಾಳೆ. ಕೂಡಲೇ ಜನರನ್ನು ಸೇರಿದ್ದಾಳೆ. ಇದನ್ನು ವಿರೋಧಿಸಿದ ಯುವತಿ ಅಲ್ಲಿದ್ದ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಅಷ್ಟಲ್ಲದೆ ಆತನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯರಿಗೆ ನಗರದಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ನಾನು ಯಾವುದೇ ರೀತಿಯ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೋರ್ಟ್, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇದರಿಂದ ಇನ್ನಷ್ಟು ಮಾನಸಿಕವಾಗಿ ಹಿಂಸೆಯಾಗುತ್ತೆ ಎಂದು ಬರೆದುಕೊಂಡಿದ್ದಾಳೆ. ಇಂತಹ ಬೀದಿ ಕಾಮಣ್ಣರನ್ನು ಪೊಲೀಸರು ನಿರ್ನಾಮ ಮಾಡಬೇಕು. ಹೆಣ್ಮಕ್ಕಳು ನೆಮ್ಮದಿಯಾಗಿ ನಿರ್ಭಿತಿಯಾಗಿ ಓಡಾಡುವಂತಾಗಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Boat Capsize : ಸಮುದ್ರದಲ್ಲಿ ಮುಳುಗಿದ ಲಕ್ಷದ್ವೀಪ ಸರಕು ಹಡಗು; ಜೀವ ಕೈಲಿ ಹಿಡಿದಿದ್ದ ಸಿಬ್ಬಂದಿ ಕೊನೆಗೂ ರಕ್ಷಣೆ
ಮಹಿಳೆ ಮುಂದೆ ಮೆಟ್ರೋ ಸಿಬ್ಬಂದಿಯಿಂದ ಅಸಭ್ಯ ವರ್ತನೆ, ಏನು ಮಾಡಿದ?
ಬೆಂಗಳೂರು: ನಮ್ಮ ಮೆಟ್ರೋ (Namma Metro) ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿಸಿದ್ದಾನೆ. ಇದರಿಂದ ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿಯಿಂದ ಈ ಕೃತ್ಯ ನಡೆದಿದೆ ಎಂದು ದೂರಲಾಗಿದೆ. ಎದುರಿನ ಫ್ಲಾಟ್‌ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.
ಈ ವಿಚಾರವನ್ನು ಮಹಿಳೆ ಮೆಟ್ರೋ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಅಸಭ್ಯ ವರ್ತನೆ ತೋರಿದರೆ ದಂಡ!
ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ (Namma Metro) ಜತೆ ಅಸಭ್ಯ ವರ್ತನೆ (Indecent behaviour) ತೋರಿದವರಿಂದ 10 ಸಾವಿರ ರೂ. ದಂಡವನ್ನು (Penalty) ವಸೂಲಿ ಮಾಡುವ ಕ್ರಮವನ್ನು ಇತ್ತೀಚೆಗೆ ತರಲಾಗಿತ್ತು. ಬಿಎಂಆರ್‌ಸಿಎಲ್ ತನ್ನ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇತ್ತೀಚೆಗೆ ಈ ತೀರ್ಮಾನವನ್ನು ಮಾಡಿತ್ತು. ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಮೆಟ್ರೋ ರೈಲಿನಲ್ಲಿ ಮಹಿಳೆಯರನ್ನು ಸ್ಪರ್ಶಿಸುವುದು, ಕಿರಿಕಿರಿಯುನ್ನುಂಟು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದಕ್ಕೆ ಬ್ರೇಕ್ ಹಾಕುವಾಗ ಸಲುವಾಗಿ ಬಿಎಂಆರ್‌ಸಿಎಲ್ ದಂಡ ವಸೂಲಿ ಮೊತ್ತವನ್ನು ದುಪ್ಪಟ್ಟು ಮಾಡಿದೆ. ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿದರೆ ಮೊದಲು 500 ರೂಪಾಯಿ ದಂಡ ಇತ್ತು. ಇದೀಗ ಬಿಎಂಆರ್‌ಸಿಎಲ್ ದಂಡದ ಮೊತ್ತವನ್ನು 20 ಪಟ್ಟು ಏರಿಕೆ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ