Site icon Vistara News

Physical Abuse : ಬೆಟ್ಟಿಂಗ್ ಕಟ್ಟಿ ಯುವತಿ ಸೊಂಟ ಮುಟ್ಟಿದವನ ಬೆಂಡೆತ್ತಿದ ಪೊಲೀಸರು

Man arrested for touching girl by betting

ಬೆಂಗಳೂರು: ಬೆಂಗಳೂರಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ವಿಜಯನಗರದ ನಮ್ಮೂರ ಹೋಟೆಲ್‌ನಲ್ಲಿ ನಿಂತಿದ್ದ ಯುವತಿಗೆ ಅಲ್ಲೇ ಇದ್ದ ಯುವಕ ಬೇಕಂತಲೆ ಟಚ್‌ ಮಾಡಿ ಕೀಟಲೆ ಮಾಡಿ ಎಸ್ಕೇಪ್‌ ಆಗಿದ್ದ. ಯುವತಿ ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಪುಂಡ ಯುವಕ ಚಂದನ್‌ ಎಂಬಾತನನ್ನು (Physical Abuse) ಬಂಧಿಸಿದ್ದಾರೆ.

2023ರ ಡಿ.30ರಂದು ಸಂಜೆ 7.30ರ ಸುಮಾರಿಗೆ ವಿಜಯನಗರದ ನಮ್ಮೂರ ಹೋಟೆಲ್‌ಗೆ ಸ್ನೇಹಿತೆಯೊಂದಿಗೆ ತಿಂಡಿ ತಿನ್ನಲು ಯುವತಿಯೊಬ್ಬಳು ಬಂದಿದ್ದಳು. ಆಕೆಯನ್ನು ಕಂಡ ಯುವಕನೊಬ್ಬ ಬೇಕಂತಲೇ ಆಕೆಯ ಮೈ ಮೇಲೆ ಬಿದ್ದು, ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಯುವತಿ ತರಾಟೆ ತೆಗೆದುಕೊಂಡಾಗ, ಅಲ್ಲಿಂದ ಕಾಲ್ಕಿತ್ತಿದ್ದ. ಈ ವಿಡಿಯೋ ಕಳೆದ ಜನವರಿ 18ರಂದು ವೈರಲ್‌ ಆಗಿತ್ತು. ಯುವತಿ ಪೋಷಕರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಕಾಮುಕ ಚಂದನ್ ಎಂಬಾತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Sexually assaulted by touching a young woman

ಇದನ್ನೂ ಓದಿ:Abuse case : ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡ ವಿಕೃತಿ ಅರೆಸ್ಟ್‌

ಚಂದನ್ ಹಂಪಿನಗರ ನಿವಾಸಿಯಾಗಿದ್ದು, ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವ ಕೆಲಸ ಮಾಡಿಕೊಂಡಿದ್ದ. ಘಟನೆ ನಡೆದ ದಿನ ಗುಬ್ಬಿ ಮೂಲದ ಕೆಲ ಸ್ನೇಹಿತರು ಚಂದನ್‌ನ ಭೇಟಿ ಮಾಡಲು ಬಂದಿದ್ದರು. ಸ್ನೇಹಿತರೊಟ್ಟಿಗೆ ಸಿನಿಮಾ ನೋಡಿಕೊಂಡು ಬಂದ ಚಂದನ್‌ ಭರ್ಜರಿ ಪಾರ್ಟಿ ಮಾಡಿದ್ದ. ಪಾರ್ಟಿ ಮುಗಿದ ಬಳಿ ಕಂಠ ಪೂರ್ತಿ ಕುಡಿದು ಊಟಕ್ಕೆ ಎಂದು ವಿಜಯನಗರದ ಹೋಟೆಲ್‌ಗೆ ಬಂದಿದ್ದ. ಊಟ ಮುಗಿಸಿ ಹೋಟೆಲ್‌ ಹೊರಗೆ ಚಂದನ್‌ ಗ್ಯಾಂಗ್‌ ಹರಟೆಯಲ್ಲಿ ತೊಡಗಿದ್ದರು.

ಈ ವೇಳೆ ಅಲ್ಲಿಗೆ ಬಂದ ಯುವತಿಯನ್ನು ಕಂಡಿದ್ದಾರೆ. ಆಕೆಯನ್ನು ಮುಟ್ಟಿದರೆ ನಿನಗೆ 5 ಸಾವಿರ ಕೊಡುತ್ತೀನಿ ಎಂದು ಸ್ನೇಹಿತನೊಬ್ಬ ಚಂದನ್‌ಗೆ ಕಿಚಾಯಿಸಿದ್ದಾನೆ. ಅಷ್ಟಕ್ಕೆ ಉಬ್ಬೇರಿದ ಚಂದನ್ ಕುಡಿದ ಅಮಲಿನಲ್ಲಿ ಹಿಂಬದಿಯಿಂದ ಹೋಗಿ ಯುವತಿಗೆ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿ ಎಸ್ಕೇಪ್ ಆಗಿದ್ದ .

ಕೂಡಲೇ ಮನೆಯವರಿಗೆ ವಿಚಾರ ತಿಳಿಸಿದ ಯುವತಿ ಹೋಟೆಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಸಮೇತ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇತ್ತ 354 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ತಲೆಮರಿಸಿಕೊಂಡಿದ್ದ ಚಂದನ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version