Site icon Vistara News

Physical Abuse : ಭೀಮಾ ಸಿನಿಮಾ ನೋಡಲು ಬಂದು ಲೇಡಿಸ್‌ ವಾಶ್‌ ರೂಂನಲ್ಲಿ ಮೊಬೈಲ್ ಇಟ್ಟ ಅಪ್ರಾಪ್ತ!

ಬೆಂಗಳೂರು: ಮೊನ್ನೆಯಷ್ಟೇ ಬೆಂಗಳೂರಿನ ಥರ್ಡ್ ವೇವ್ ಕಾಫಿ ಕೆಫೆಯ (Third Wave Coffee cafe) ಲೇಡಿಸ್‌ ವಾಶ್‌ ರೂಮ್‌ನ ಕಸದ ಬುಟ್ಟಿಯಲ್ಲಿ ಮೊಬೈಲ್‌ ಪತ್ತೆಯಾಗಿತ್ತು. ಸುಮಾರು 2 ಗಂಟೆಗಳ ಕಾಲ ಮೊಬೈಲ್‌ ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್‌ ಆಗಿತ್ತು. ಕೆಫೆಯ ಸಿಬ್ಬಂದಿಯೇ ಮೊಬೈಲ್‌ ಇಟ್ಟು ಮಹಿಳೆಯರ ವಿಡಿಯೊ ಸೆರೆಹಿಡಿದಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಭೀಮಾ ಸಿನಿಮಾ ನೋಡಲು ಬಂದ ವ್ಯಕ್ತಿಯೊಬ್ಬ ಲೇಡಿಸ್‌ ವಾಶ್‌ರೂಮ್‌ನಲ್ಲಿ ಯುವತಿಯ ವಿಡಿಯೋ ರೆಕಾರ್ಡ್‌ (Physical Abuse) ಮಾಡಿದ್ದಾನೆ.

ಭೀಮಾ ಸಿನಿಮಾ ವೀಕ್ಷಣೆಗೆ ಬಂದಿದ್ದ ಮಹಿಳಾ ಅಭಿಮಾನಿಗೆ ಫಿಲ್ಮಂ ಥಿಯೇಟರ್‌ನಲ್ಲಿ ಕಾಮುಕನೊಬ್ಬ ಕಾಟ ಕೊಟ್ಟಿದ್ದಾನೆ. ಬೆಂಗಳೂರಿನ ಊರ್ವಶಿ ಥಿಯೇಟರ್‌ನ ಲೇಡಿಸ್ ವಾಶ್ ರೂಂನಲ್ಲಿ ಯುವತಿಯ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. 23 ವರ್ಷದ ಯುವತಿಯೊಬ್ಬಳು ಕಳೆದ ಆಗಸ್ಟ್‌ 10 ರಂದು ಊರ್ವಶಿ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದಳು. ರಾತ್ರಿ 9:30ರ ಶೋನ ಇಂಟರ್ ವೆಲ್‌ನಲ್ಲಿ ವಾಶ್ ರೂಂಗೆ ತೆರಳಿದ್ದಾಳೆ. ಈ ವೇಳೆ ಸಿನಿಮಾ ನೋಡಲು ಬಂದಿದ್ದ ಕಿರಾತಕನೊಬ್ಬ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ಚಿತ್ರಿಕರಿಸಿದ್ದಾನೆ.

ಇದು ಗಮನಕ್ಕೆ ಬರುತ್ತಿದ್ದಂತೆ ಯುವತಿ ಹೊರಗೆ ಓಡಿ ಬಂದಿದ್ದಾಳೆ. ಸದ್ಯ ಯುವತಿ ಕೊಟ್ಟ ದೂರಿನನ್ವಯ ಅಪ್ರಾಪ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Honey trap : ಮಿಸ್ ಕಾಲ್‌ನಲ್ಲೇ ಹುಡುಗರನ್ನು ಪಟಾಯಿಸುತ್ತಾಳೆ! ಮನೆಗೆ ಬಾ ಅಂತಾಳೆ ಸುಲಿಗೆ ಮಾಡ್ತಾಳೆ

ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ

ಹಾಸನ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಘಟನೆ ನಡೆದಿದೆ. 13 ವರ್ಷದ ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ದಂಪತಿ ಮೃತಪಟ್ಟಿದ್ದಾರೆ. ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಶ್ರೀ (13) ಮೃತ ದುರ್ದೈವಿಗಳು.

ಶ್ರೀನಿವಾಸ್‌ ಕಾರು ಚಾಲಕರಾಗಿದ್ದರೆ, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್‌ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಕಳೆದ ಮಂಗಳವಾರ ಈ ಮೂವರು ಏಕಾಏಕಿ ಕಾಣಿಯಾಗಿದ್ದರು. ಸಂಬಂಧಿಗಳು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಇವರ ಸುಳಿವು ಸಿಕ್ಕಿರಲಿಲ್ಲ.

ಕುಟುಂಬಸ್ಥರು ನಂತರ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಹೇಮಾವತಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ದಂಪತಿಯ ಶವವನ್ನು ಹೊರ ತೆಗೆದಿದ್ದಾರೆ. ಸದ್ಯ ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version