Site icon Vistara News

Physical Abuse : ದಾರಿಯುದ್ದಕ್ಕೂ ಪುಂಡರ ಚೇಸಿಂಗ್‌; ಕಾರಿನಲ್ಲಿದ್ದ ಯುವತಿಯರನ್ನು ಸುತ್ತುವರಿದು ಟಾರ್ಚರ್‌

physical Abuse in bengaluru

ಬೆಂಗಳೂರು: ರೋಡ್‌ ರೋಮಿಯೋಗಳ ಕಾಟ ಹೆಚ್ಚಾಗಿದೆ. ಹೆಣ್ಮಕ್ಕಳು ಹೊರಗೆ ಕಾಲಿಟ್ಟರೆ ಸಾಕು ಅವರನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುವುದು, ಕಿರುಕುಳ ನೀಡುವ ಪ್ರಮಾಣ ಏರಿಕೆ ಆಗುತ್ತಿದೆ. ಪೊಲೀಸರ ಭಯವಿಲ್ಲದೇ ಸಾರ್ವಜನಿಕವಾಗಿಯೇ (Physical Abuse) ದೌರ್ಜನ್ಯವೆಸಗುತ್ತಿದ್ದಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ (Bengaluru News) ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದೆ. ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಚೇಸ್‌ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದಾರೆ. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್‌ ಮೂಲಕ ಕಾರನ್ನು ಸುತ್ತುವರಿದು ಟಾರ್ಚರ್ ನೀಡಿದ್ದಾರೆ.

ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112 ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್‌ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದಾರೆ.

ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇಬ್ಬರು ಯುವತಿಯರು ಕಾರಿನಲ್ಲಿ ಮಡಿವಾಳ ಕಡೆಯಿಂದ ಕೋರಮಂಗಲ ಕಡೆ ಹೊರಟಿದ್ದರು. ಆ ವೇಳೆ ಕಾರಿನಲ್ಲಿದ್ದ ಯುವತಿಯರ ಜತೆ ಜಗನ್ನಾಥ್, ತೇಜಸ್, ಮತ್ತು ಕಣ್ಣನ್ ಎಂಬುವವರು ಕಿರಿಕ್ ಶುರು ಮಾಡಿದ್ದರು. ಈ ಮೂವರು ಬೈಕ್‌ನಲ್ಲಿ ಹೋಗುತ್ತಿದ್ದಾಗ, ಕಾರನ್ನು ಹಿಂಬಾಲಿಸಿ ಕೀಟಲೆ ಮಾಡಿದ್ದಾರೆ.

ಯುವತಿಯರ ಮೊಬೈಲ್‌ನಲ್ಲಿ ಸೆರೆಯಾದ ಪುಂಡರ ಅಟ್ಟಹಾಸ

ಸದ್ಯ ಪೊಲೀಸರು ಜಗನ್ನಾಥ್ ಮತ್ತು ತೇಜಸ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಣ್ಣನ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ (Madivala Police station) ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Physical Abuse: 4 ವರ್ಷದ ಬಾಲಕಿ ಮೇಲೆ ಮೊಹಮ್ಮದ್‌ ಎಂಬಾತನಿಂದ ಅತ್ಯಾಚಾರ; ಮಗು ಸ್ಥಿತಿ ಗಂಭೀರ

Physical Abuse: ಜಯನಗರದಲ್ಲಿ ಕಾಲೇಜಿಗೆ ಹೋಗುತ್ತಿದ್ದ‌ ವಿದ್ಯಾರ್ಥಿನಿಯನ್ನು ಟಚ್‌ ಮಾಡಿ ವಿಕೃತಿ

ಬೆಂಗಳೂರು: ನಗರದಲ್ಲಿ ಬೀದಿ ಕಾಮುಕರ ಕಾಟ ಹೆಚ್ಚಾಗಿದೆ. ವಿದ್ಯಾರ್ಥಿನಿಯೊಬ್ಬಳು (College Student) ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯನ್ನು ಹಿಂಬಾಲಿಸಿ ಬಂದ ಕಾಮುಕನೊಬ್ಬ ಖಾಸಗಿ ಅಂಗವನ್ನು ಮುಟ್ಟಿ ಅಸಭ್ಯವಾಗಿ (Physical Abuse) ವರ್ತಿಸಿದ್ದರು. ಬೆಂಗಳೂರಿನ ಜಯನಗರ (Jayanagar) ಸುರಾನ ಕಾಲೇಜು (Surna College) ಸಮೀಪದ ಚಾಯ್ ಪಾಯಿಂಟ್ (Chai point) ಬಳಿ ಘಟನೆ ನಡೆದಿತ್ತು.

ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್‌ ಸಿಟಿ (Bengaluru Safe City) ಎಂಬ ಮಾತಿದೆ. ಆದರೆ ಕೆಲ ಬೀದಿ ಕಾಮುಕರಿಂದ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾರೆ. ಬಿಎಂಟಿಸಿ ಬಸ್‌ನಿಂದ ಹಿಡಿದು ನಮ್ಮ ಮೆಟ್ರೋ ರೈಲಿನಲ್ಲೂ ಯುವತಿಯರಿಗೆ ಬೇಕಂತಲೇ ಸ್ಪರ್ಶಿಸಿ ವಿಕೃತಿ ಮೆರೆಯುತ್ತಿದ್ದಾರೆ.

ಕಾಮುಕ ಸ್ಪರ್ಶಿಸುತ್ತಿದ್ದಂತೆ ಬೆಚ್ಚಿದ ವಿದ್ಯಾರ್ಥಿನಿ ಕೂಡಲೇ ಸಹಾಯಕ್ಕೆ ಕೂಗಿದ್ದಾಳೆ. ಅಲ್ಲೇ ಇದ್ದ ಕಾಲೇಜು ವಿದ್ಯಾರ್ಥಿಗಳು ಸಹಾಯಕ್ಕೆ ಧಾವಿಸಿ, ಕಾಮುಕನನ್ನು ಹಿಡಿದಿದ್ದಾರೆ. ಜಯನಗರದ ನಿವಾಸಿ ಸುರೇಶ್ (26) ಎಂಬಾತ ಕೀಟಲೆ ಮಾಡಿದ ಪುಂಡನಾಗಿದ್ದಾನೆ. ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾಮುಕ ಸುರೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದ ದಾಖಲಿಸಿ‌ ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯನ್ನು ಹಿಂಬಾಲಿಸಿ ಹಿಂದಿನಿಂದ ಬಂದು ತಬ್ಬಿಕೊಂಡ ಕಾಮುಕ!

ಬೆಂಗಳೂರು: ವಿಕೃತ ಮನಸ್ಥಿತಿಯ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಯಾರ ಭಯವು ಇಲ್ಲದೇ ಸಾರ್ವಜನಿಕವಾಗಿಯೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಇದರಿಂದ ಮುಜುಗರಕ್ಕೀಡಾಗುತ್ತಿರುವುದು ಮಾತ್ರವಲ್ಲ ಅವರಿಗೆ ಭದ್ರತೆಯೇ ಇಲ್ಲದಂತಾಗಿದೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಕಾಮುಕನೊಬ್ಬ, ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.

ಶೃತಿ ಸಿಂಗ್ ಎಂಬಾಕೆ ತಮಗಾದ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೃತಿ ಅವರು ತಮ್ಮ ಸ್ನೇಹಿತನ ಜತೆ ಡ್ರಾಪ್ ಪಡೆದು ಮನೆ ಬಳಿ ಬರುತ್ತಿದ್ದರು. ಆಕೆ ಒಬ್ಬಂಟಿಯಾಗಿದ್ದನ್ನು ಗಮನಿಸಿದ ಕಾಮುಕ ಹಿಂಬಾಲಿಕೊಂಡು ಬಂದಿದ್ದ. ನಂತರ ಆಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್‌ನಿಂದ ಇಳಿದು, ಓಡಿ ಬಂದವನೇ ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ.

ಇದರಿಂದ ಆತಂಕಗೊಂಡ ಯುವತಿ ಗಾಬರಿಯಾಗಿ ಕಿರುಚಾಡಿದ್ದಾಳೆ. ಕೂಡಲೇ ಜನರನ್ನು ಸೇರಿದ್ದಾಳೆ. ಇದನ್ನು ವಿರೋಧಿಸಿದ ಯುವತಿ ಅಲ್ಲಿದ್ದ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಅಷ್ಟಲ್ಲದೆ ಆತನ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯರಿಗೆ ನಗರದಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಘಟನೆ ಬಗ್ಗೆ ನಾನು ಯಾವುದೇ ರೀತಿಯ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೋರ್ಟ್‌, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇದರಿಂದ ಇನ್ನಷ್ಟು ಮಾನಸಿಕವಾಗಿ ಹಿಂಸೆಯಾಗುತ್ತೆ ಎಂದು ಬರೆದುಕೊಂಡಿದ್ದಾಳೆ. ಇಂತಹ ಬೀದಿ ಕಾಮಣ್ಣರನ್ನು ಪೊಲೀಸರು ನಿರ್ನಾಮ ಮಾಡಬೇಕು. ಹೆಣ್ಮಕ್ಕಳು ನೆಮ್ಮದಿಯಾಗಿ ನಿರ್ಭಿತಿಯಾಗಿ ಓಡಾಡುವಂತಾಗಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version