ಬೆಂಗಳೂರು: ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ರೌಡಿಶೀಟರ್‌ವೊಬ್ಬ ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿ ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಹಲ್ಲೆ ಮಾಡಿದ್ದಾನೆ. ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಎಂಬಾತನ ಬಂಧಿಸಲು ಹೋದಾಗ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಬಳಿ ಇರುವ ಉಲ್ಲಾಳ ಬಳಿ ಘಟನೆ ನಡೆದಿದೆ.
ಉಲ್ಲಾಳದ ಹಿಲ್ ರಾಕ್ ಸ್ಕೂಲ್ ಬಳಿ ಹಿಡಿಯಲು ಹೋದಾಗ ಹೆಡ್ ಕಾನ್‌ಸ್ಟೇಬಲ್ವೆಂ ವೆಂಕಟೇಶ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಫೈರಿಂಗ್ ಮಾಡಿದ್ದಾರೆ. ಪವನ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮೊನ್ನೆ ಭಾನುವಾರ (ಸೆ.15) ರಾತ್ರಿ ರಾಜಗೋಪಾಲ್ ನಗರ ರೌಡಿ ಶೀಟರ್ ಪವನ್ ಎಂಬಾತ ವಿಶ್ವಾಸ್ ಎಂಬುವವನಿಗೆ ಹೊಡೆದಿದ್ದ. ವಿಶ್ವಾಸ್ ಮತ್ತು ಆತನ ಸ್ನೇಹಿತರು ಪವನ್ ಅಲಿಯಾಸ್ ಕಡಬು ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಕೋಪಕ್ಕೆ ಹಲ್ಲೆ ನಡೆಸಿದ್ದ. ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಪವನ್ ಇನ್ನೊಬ್ಬನಿಗೆ ಹೊಡೆದಿದ್ದ ಒಂದು ತಿಂಗಳ ಹಳೇ ವಿಡಿಯೋ ವೈರಲ್ ಆಗಿತ್ತು. ಅರ್ಜುನ್ ಎಂಬಾತನಿಗೆ ಬಟ್ಟೆ ಬಿಚ್ಚಿ ಹೊಡೆದಿರುವ ವಿಡಿಯೊ ಆಚೆ ಬಂದಿತ್ತು. ಪವನ್ ಸ್ನೇಹಿತರೇ ಇದನ್ನು ಲೀಕ್ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪವನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: Theft Case : ಟೊಮ್ಯಾಟೊ ಬೆಳೆ ಲಾಸ್ ಆಗಿದ್ದಕ್ಕೆ ಕಂಪೆನಿ ಲ್ಯಾಪ್‌ಟ್ಯಾಪ್‌ಗಳನ್ನು ಕಳವು ಮಾಡಿದ ಟೆಕ್ಕಿ!
ಮಾನ ಕಳೆದುಕೊಂಡಿದ್ದ ಅರ್ಜುನ್‌ನಿಂದಲ್ಲೂ ಹಲ್ಲೆ
ಯುವಕನ ಮೇಲೆ ರೌಡಿ ಪವನ್‌ನಿಂದ ಬಟ್ಟೆ ಬಿಚ್ಚಿಸಿ ಅಮಾನವೀಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ ಕಳೆದುಕೊಂಡ ಅರ್ಜುನ್ ಮತ್ತು ತಂಡವು ಪವನ್‌ಗೆ ಹಲ್ಲೆ ನಡೆಸಿದ್ದರು. ಅರ್ಜುನ್ ಅಂಡ್ ಗ್ಯಾಂಗ್ ಬಾರ್ ಎದುರು ಪವನ್‌ನ ಬಟ್ಟೆ ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದ. ನವೀನ್ ಎಂಬಾತನಿಂದ ರೌಡಿ ಪವನ್‌ಗೆ ನಡುರಸ್ತೆಯಲ್ಲಿ ಥಳಿಸಿದ್ದರು. ರೌಡಿ ಪವನ್‌ಗೆ ಬಟ್ಟೆ ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೌಡಿ ಪವನ್ ಬಾರ್‌ನಲ್ಲಿ ಕುಡಿಯುತ್ತಾ ಅರ್ಜುನ್ ಟೀಂಗೆ ಫೋನ್ ಮಾಡಿ ಹವಾ ಬಿಟ್ಟಿದ್ದ. ಪವನ್ ಎಲ್ಲಿದ್ದಾನೆ ಅಂತಾ ಹುಡುಕಿಕೊಂಡು ಬಂದಿದ್ದ ಅರ್ಜುನ್ ಟೀಂ ಬಳಿಕ ಬಾರ್‌ನಿಂದ ಹೊರಗೆ ಕರೆತಂದು ಬಟ್ಟೆ ಬಿಚ್ಚಿಸಿ ಪವನ್ ಮೇಲೆ ನವೀನ್‌ನಿಂದ ಹಲ್ಲೆ ನಡೆಸಿದ್ದರು. ನವೀನ್ ಹಾಗೂ ಅರ್ಜುನ್ ನಂತರ ಪವನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪವನ್ ಜೈಲಿಂದ ರಿಲೀಸ್ ಬಳಿಕ ತಲ್ವಾರ್ ಹಿಡಿದು ಅರ್ಜುನ್ ಅಡ್ಡಕ್ಕೆ ನುಗ್ಗಿದ್ದ. ಪವನ್ ಕಂಡು ಎದ್ದನೋ ಬಿದ್ದನೋ ಎಂದು ಓಡಿ ಹೋಗಿದ್ದರು. ಆದರೆ ಸಿಕ್ಕಿಬಿದ್ದ ಅರ್ಜುನ ಮೇಲೆ ಹಳೆ ಜಿದ್ದಿಗೆ ವಿವಸ್ತ್ರಗೊಳಿಸಿ ಓಡಿಸಿದ್ದ.
ಈ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಪ್ರತಿಕ್ರಿಯಿಸಿದ್ದಾರೆ. ಪವನ್ ಅಲಿಯಾಸ್ ಕಡಬು ಎಂಬಾತನ ಮೇಲೆ ಶೂಟೌಟ್ ಆಗಿದೆ. ಈತ ರಾಜಗೋಪಾಲ ನಗರ ಠಾಣೆ ರೌಡಿಶೀಟರ್ ಆಗಿದ್ದಾನೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಒಂದು ಕೇಸ್ ಇತ್ತು. 2017ರ ಕೇಸ್‌ನಲ್ಲಿ ವಾರೆಂಟ್ ಇಶ್ಯೂ ಆಗಿತ್ತು. ಆತನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದರು. ಹೊರಗಡೆ ಬಂದ ನಂತರ ಮತ್ತೆ ಈ ರೀತಿ ಮಾಡಿದ್ದಾನೆ. ಕಳೆದ ಎರಡು ದಿನಗಳಿಂದ ಪವನ್‌ಗಾಗಿ ಹುಡುಕಾಟ ನಡೆಸಲಾಗಿತ್ತು.
ಇವತ್ತು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೊಬೈಲ್ ಲೊಕೇಷನ್ ಆನ್ ಆಗಿತ್ತು. ದರೋಡೆ ಮಾಡಲು ಬಂದಿದ್ದ ಎಂಬ ಮಾಹಿತಿ ಇತ್ತು. ಕಾಮಾಕ್ಷಿಪಾಳ್ಯ ಇನ್ಸಪೆಕ್ಟರ್ ಹಾಗೂ ಗೋವಿಂದರಾಜನಗರ ಇನ್ಸಪೆಕ್ಟರ್ ಸುಬ್ರಮಣಿ ನೇತೃತ್ವದಲ್ಲಿ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಕಾಮಾಕ್ಷಿಪಾಳ್ಯ ಹೆಡ್ ಕಾನ್‌ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗುತ್ತಿದ್ದ. ಇನ್‌ಸ್ಪೆಕ್ಟರ್ ಸುಬ್ರಮಣಿ ಒಂದು ಗುಂಡು ಹಾರಿಸಿ ವಾರ್ನ್ ಮಾಡಿದ್ದರು. ಆದರೂ ಪರಾರಿ ಆಗಲು ಯತ್ನಿಸಿದಾಗ ಕಾಲಿಗೆ ಶೂಟ್ ಮಾಡಿ ಬಂಧಿಸಲಾಗಿದೆ. ಸದ್ಯ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ