ಬೆಂಗಳೂರು: ರಾಜಧಾನಿಯಲ್ಲಿ ತಲೆ ಮರೆಸಿಕೊಂಡಿದ್ದ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್ ವಾಂಟೆಡ್ ಮುಖಂಡ, ಪ್ರವೀಣ್ ನೆಟ್ಟಾರು ಕೊಲೆ (Praveen Nettaru murder) ಆರೋಪಿಗಳಲ್ಲಿ ಒಬ್ಬನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಮಡಿಕೇರಿ ಮೂಲದ ತುಫೈಲ್ ಬಂಧಿತ ಆರೋಪಿ. ರಾಜ್ಯವಿಡೀ ಸುದ್ದಿಯಾಗಿದ್ದ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಈತ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಹಲವು ದಿನಗಳಿಂದ ಈ ಕೊಲೆ ಪ್ರಕರಣದ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಎನ್‌ಐಐ ಹಾಗೂ ಪೊಲೀಸರ ಕಣ್ಣು ತಪ್ಪಿಸಿಕೊಂಡು ಈತ ತಲೆಮರೆಸಿಕೊಂಡಿದ್ದ.
ತಡರಾತ್ರಿ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಎನ್‌ಐಎ ತುಫೈಲ್‌ನನ್ನು ವಶಕ್ಕೆ ಪಡೆದುಕೊಂಡಿದೆ. ಕೇಸ್ ನಂಬರ್ 26/2022ರ ಪ್ರಕರಣದ ಆರೋಪಿಯಾಗಿದ್ದ ಈತನಿಗಾಗಿ ಹುಡುಕಾಟ ನಡೆಸಿದ್ದ ಎನ್‌ಐಎ, ಸುಳಿವು ನೀಡಲು ಪಬ್ಲಿಕ್ ನೋಟಿಸ್ ಕೂಡ ನೀಡಿತ್ತು. ತುಫೈಲ್ ಬಗ್ಗೆ ಮಾಹಿತಿ ನೀಡಿದವರಿಗೆ ಐದು ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ನಗರದ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: Praveen Nettaru murder | ಪ್ರವೀಣ್ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ