ಬೆಂಗಳೂರು : ರಾಜ್ಯದಲ್ಲಿ ಆಜಾನ್ ಮತ್ತು ಭಜನ್ ವಿವಾದ ತಾರಕ್ಕೇರಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾದ್ಯತೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಧ್ವನಿವರ್ಧಕಗಳ ಬಳಕೆಗೆ ಮಂಗಳವಾರ ಸುತ್ತೊಲೆಯನ್ನು ಹೊರಡಿಸಿದೆ. ಧ್ವನಿ ವರ್ಧಕಗಳ ಬಳಕೆಯ ನಿಯಂತ್ರಣಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ.
ಶಬ್ದ ಮಾಲಿನ್ಯ ತಡಗೆ 2002 ರ ಆಗಸ್ಟ್ 13 ರಂದು ಹೊರಡಿಸಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸುತ್ತೊಲೆ ತಿಳಿಸಿದೆ. ಪ್ರಾಧಿಕಾರದಿಂದ ಲಿಖಿತ ಅನುಮತಿ ಇಲ್ಲದೇ ಧ್ವನಿವರ್ಧಕ ಬಳಸುವಂತಿಲ್ಲ. ರಾತ್ರಿ 10 ರಿಂದ ಬೆಳಿಗ್ಗೆ 6 ರ ಅವಧಿಯಲ್ಲಿ ಒಳಾಂಗಣದಲ್ಲಿ ಮಾತ್ರ ಧ್ವನಿವರ್ಧಕಗಳನ್ನು ಬಳಸಬಹುದು ಮತ್ತು ಧ್ವನಿವರ್ಧಕ ಬಳಸುವವರು 15 ದಿನಗಳ ಒಳಗಾಗಿ ಅನುಮತಿ ಪಡೆಯಬೇಕು. ಒಂದು ವೇಳೆ ಪಡೆಯದೇ ಇದ್ದಲ್ಲಿ ತಾವಾಗಿಯೇ ಧ್ವನಿವರ್ಧಕ ತೆರೆವುಗೊಳಿಸಬೇಕು ಅಥವಾ ನಿಗದಿತ ಪ್ರಾಧಿಕಾರಗಳು ತೆರವು ಮಾಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ಆಜಾನ್ V/s ಭಜನೆ: ಹರಿಪ್ರಸಾದ್ ಹೇಳಿಕೆಗೆ ಪ್ರಶಾಂತ್ ಸಂಬರ್ಗಿ ಕಿಡಿ
ಎಲ್ಲರಿಗೂ ಅನ್ವಯ :
ಈ ಆದೇಶ ಎಲ್ಲರಿಗೂ ಅನ್ವಯಿಸಿದ್ದು, ಮಸೀದಿ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಒಂದು ವೇಳೆ ಕೋರ್ಟ್ ಆದೇಶ ನಿಯಮ ಉಲ್ಲಂಘಿಸಿದಲ್ಲಿ ಧ್ವನಿವರ್ಧಕ ಬಳಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಪರಿಸರ ಸಚಿವ ಆನಂದ್ ಸಿಂಗ್ ಹೇಳಿದರು.
ಸಮಿತಿ :
ಧ್ವನಿವರ್ಧಕ ಬಳಕೆ ಕುರಿತು ಮೂವರ ಸದಸ್ಯರ ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) , ಮಹಾನಗರ ಪಾಲಿಕೆಗಳ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಸಮಿತಿಯಲ್ಲಿರುತ್ತಾರೆ. ಉಳಿದ ಕಡೆ ತಹಸೀಲ್ದಾರ್ ಮತ್ತು ರಾಜು ಮಅಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿದಿ ಸಮಿತಿಯಲ್ಲಿರಬೇಕು ಎಂದು ಸೂಚನೆ ನಿಡಲಾಗಿದೆ.
ಶಬ್ಧ ಪ್ರಮಾಣದ ಮಿತಿ (ಡೆಸಿಬಲ್) :
ವಲಯ | ಹಗಲು | ರಾತ್ರಿ |
ಕೈಗಾರಿಕಾ ಪ್ರದೇಶ | 75 | 70 |
ವಾಣಿಜ್ಯ ಪ್ರದೇಶ | 65 | 60 |
ಜನವಸತಿ ಪ್ರದೇಶ | 55 | 45 |
ಸೈಲೆಂಟ್ ಝೋನ್ | 50 | 40 |