ಬೆಂಗಳೂರು: ನಿನ್ನೆ ಶುಕ್ರವಾರ ಚಿತ್ರ ನಿರ್ದೇಶಕ ನಾಗಶೇಖರ್ (Nagashekar) ಕಾರು (Road Accident) ಅಪಘಾತವಾಗಿತ್ತು. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ ಸಂಭವಿಸಿತ್ತು. ರಭಸವಾಗಿ ಬಂದ ಕಾರು ಮರಕ್ಕೆ ಗುದ್ದಿತ್ತು. ಇತ್ತ ಫುಟ್‌ಪಾತ್ ಮೇಲೆ ನಿಂತಿದ್ದ ಮಹಿಳೆಗೂ ಕಾರು ಡಿಕ್ಕಿ ಹೊಡೆದಿತ್ತು.
ಈ ಸಂಬಂಧ ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿರುವ ನಾಗಶೇಖರ್, ಕಾರು ಓಡಿಸಿಕೊಂಡು ಬರುವಾಗ ಕಣ್ಣು ಮಂಜು ಆಗಿ ನಿಯಂತ್ರಣ ಕಳೆದುಕೊಂಡೆ. ಬಳಿಕ ಕಾರನ್ನು ಫುಟ್‌ಪಾತ್ ಮೇಲೆ ಹತ್ತಿಸಿದೆ . ಫುಟ್‌ಪಾತ್ ಮೇಲೆ ನಿಂತಿದ್ದ ಲಕ್ಷ್ಮಿ ಎಂಬ ಮಹಿಳೆಗೆ ಸಣ್ಣ-ಪುಟ್ಟ ಗಾಯವಾಗಿದೆ. ನಾನೇ ಮಹಿಳೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇನೆ. ಆ ಮಹಿಳೆ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಸದ್ಯ ಅಪಘಾತದ ಸಂಬಂಧ ಸಂಚಾರಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಸೆಲ್ಪ್ ಆಕ್ಸಿಡೆಂಟ್ ಹಿನ್ನೆಲೆಯಲ್ಲಿ ಇನ್ಸೂರೆನ್ಸ್ ಕ್ಲೈಮ್ ಮಾಡಲು ಒಂದು ಮೆಮೋ ಕಾಪಿ ಕೊಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೂ ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ರೈಲ್ವೆ ಟ್ರ್ಯಾಕ್‌ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
ರೈಲ್ವೆ ಟ್ರ್ಯಾಕ್‌ಮ್ಯಾನ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ವೆಲ್ಡಿಂಗ್ ಬಿಟ್ಟಿದ್ದ ಹಳಿಯಲ್ಲಿ ಬರುತ್ತಿದ್ದ ರೈಲು ನಿಲ್ಲಿಸಿ ದುರಂತ ತಪ್ಪಿಸಿದ್ದಾರೆ. ಉತ್ತರಕನ್ನಡದ ಕುಮಟಾ ಹೊನ್ನಾವರದ ಕೊಂಕಣ ರೈಲ್ವೇ ಮಾರ್ಗದಲ್ಲಿ ಘಟನೆ ನಡೆದಿದೆ. ಮಹಾದೇವ್ ರೈಲು ದುರಂತ ತಪ್ಪಿಸಿದ ಟ್ರ್ಯಾಕ್‌ಮ್ಯಾನ್ ಆಗಿದ್ದಾರೆ.
ಬೆಳಗ್ಗೆ 5 ಗಂಟೆಗೆ ತಿರುವನಂತಪುರದಿಂದ ನವದೆಹಲಿಗೆ ರಾಜಧಾನಿ ಎಕ್ಸಪ್ರೆಸ್ ರೈಲು ಹೊರಟಿತ್ತು. ಇದೇ ವೇಳೆ ಕುಮಟಾ ಸಮೀಪ ಹಳಿಯಲ್ಲಿ ವೆಲ್ಡಿಂಗ್ ಬಿಟ್ಟಿದ್ದನ್ನು ಮಹಾದೇವ ಗಮನಿಸಿದ್ದರು. ಹೊನ್ನಾವರ ಸ್ಟೇಷನ್ ಮಾಸ್ಟರ್‌ಗೆ ಕರೆಮಾಡಿ ರೈಲು ನಿಲ್ಲಿಸಲು ಮಾಹಿತಿ ನೀಡಿದ್ದರು. ರೈಲು ನಿಲ್ದಾಣ ದಾಟಿದ್ದರಿಂದ ಹಳಿಯಲ್ಲಿ 500 ಮೀಟರ್ ಓಡಿ ರೈಲಿಗೆ ಕೆಂಪು ಬಾವುಟ ತೋರಿಸಿ ನಿಲ್ಲಿಸಿದ್ದಾರೆ. ಟ್ರ್ಯಾಕ್‌ಮ್ಯಾನ್ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ