Site icon Vistara News

ಬೆಂಗಳೂರಿನ ಬೀದಿಗಳಲ್ಲಿ ಮತ್ತೆ ಲಾಂಗ್‌ ಬೀಸಿದ ಪುಂಡರು

long attack

ಬೆಂಗಳೂರು: ರಾಜಧಾನಿಯಲ್ಲಿ ಮಚ್ಚು- ಲಾಂಗ್‌ಗಳನ್ನು ಬೀಸಿ ಅಟ್ಟಹಾಸ ಮೆರೆಯುವ ಪುಂಡಾಟಿಕೆಯ ಘಟನೆಗಳು ಹೆಚ್ಚುತ್ತಿವೆ. ನಿನ್ನೆ ಒಂದೇ ರಾತ್ರಿ ಇಂಥ ಎರಡು ಪ್ರಕರಣಗಳು ವರದಿಯಾಗಿವೆ. ಒಂದು ಕ್ವೀನ್ಸ್‌ ರಸ್ತೆಯಲ್ಲಿ ನಡೆದಿದ್ದರೆ, ಇನ್ನೊಂದು ಹೆಣ್ಣೂರು ಮುಖ್ಯರಸ್ತೆಯ ಥಣಿಸಂಸದ್ರದಲ್ಲಿ ನಡೆದಿದೆ.

ಥಣಿಸಂದ್ರದಲ್ಲಿ ಫಣಿಲಾಲ್ ಎಂಬವರ ಪ್ಲೈವುಡ್ ಮಳಿಗೆಗೆ ನುಗ್ಗಿ ದಾಂಧಲೆ ನಡೆಸಿದ ಪುಂಡರು ಮಚ್ಚು ಬೀಸಿದ್ದಾರೆ. ಎರಡು ಬಾರಿ ಅಂಗಡಿಗೆ ಹೋಗಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ದುಷ್ಕರ್ಮಿಗಳು, ಅಂಗಡಿಯಾತ ಕೊಡದೇ ಇದ್ದಾಗ ಲಾಂಗ್‌ ಬೀಸಿ ದಾಂಧಲೆ ನಡೆಸಿದ್ದಾರೆ. ಹಲ್ಲೆ ಮಾಡಿದರೂ ಎದೆಗುಂದದೆ ಅಂಗಡಿ ಮಾಲಿಕ ಪುಂಡನ ಮೇಲೆ ಚೇರು ಎಸೆದು ಆತನನ್ನು ಎದುರಿಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಈ ಪುಂಡರು ಅದೇ ರಸ್ತೆಯಲ್ಲಿ ಅಂಗಡಿಯಿಂದ ಬಟ್ಟೆ ತೆಗೆದುಕೊಂಡು ಬರುತ್ತಿದ್ದ ಯುವಕನ ಮೇಲೂ ದಾಳಿ ಮಾಡಿದ್ದಾರೆ. ಯುವಕನಿಂದ ಹಣ ಕಿತ್ತುಕೊಳ್ಳಲು ಮುಂದಾದಾಗ ಪ್ರತಿರೋಧ ಒಡ್ಡಿದ ಯುವಕನ ಮೇಲೆ ಲಾಂಗ್‌ ಬೀಸಿದ್ದಾರೆ. ರಾಜಾರೋಷವಾಗಿ ಬೆನ್ನಿಂದ ಲಾಂಗ್ ತೆಗೆದು ಬೀಸಿ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾರೆ.

ಇತ್ತೀಚೆಗೆ ಥಣಿಸಂದ್ರದ ರಸ್ತೆಯಲ್ಲಿ ಈ ಪುಂಡರ ಹಾವಳಿ ಹೆಚ್ಚಾಗಿದ್ದು, ಇವರು ಸಾರಾಯಿಪಾಳ್ಯದದ ನಿವಾಸಿಗಳು ಎನ್ನಲಾಗಿದೆ. ಸದ್ಯ ಇಬ್ಬರು ಆರೋಪಿಗಳನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿ ತಲ್ವಾರ್‌ ಹಿಡಿದು ಯುವಕರ ಪುಂಡಾಟ

Exit mobile version