Site icon Vistara News

Saree Swag | ಉದ್ಯಾನನಗರಿಯಲ್ಲಿ ಯಶಸ್ವಿಯಾದ ಸ್ಯಾರಿ ರನ್‌

Saree Swag

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಲ್ಲಿ ನೋಡಿದರೂ ಸೀರೆ ಉಟ್ಟು ಓಡುತ್ತಿದ್ದ ಮಹಿಳೆಯರು, ಒಬ್ಬರಿಗಿಂತ ಒಬ್ಬರು ಭಿನ್ನ-ವಿಭಿನ್ನ ಫ್ಯಾಷೆನಬಲ್‌ ಸೀರೆಗಳನ್ನು ಧರಿಸಿದ್ದರು. ಒಬ್ಬೊಬ್ಬರ ಲುಕ್‌ ಡಿಫರೆಂಟ್‌ ಆದರೂ ಎಲ್ಲರಲ್ಲೂ ಒಗ್ಗಟ್ಟಿನ ಬಲವಿತ್ತು.

ಕಾಟನ್‌, ಸಿಲ್ಕ್‌, ಲೆನಿನ್‌, ಕಾಟನ್‌ ಮಿಕ್ಸ್‌, ಪಾಕೆಟ್‌ ಸೀರೆ, ಕ್ರಾಪ್‌ ಟಾಪ್‌ ಸೀರೆ, ಲೆಗ್ಗಿಂಗ್ಸ್‌ ಸೀರೆ, ಬಾರ್ಡರ್‌ ಸೀರೆ ಹೀಗೆ ನಾನಾ ಶೈಲಿಯ ಸೀರೆಯನ್ನು ಉಟ್ಟ ಮಾನಿನಿಯರು ಸಡಗರ-ಸಂಭ್ರಮದಿಂದ ಈ ಸೀರೆ ರನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಓಡಿದರು.

ಅಂದಹಾಗೆ, ಈ ಕಾರ್ಯಕ್ರಮ ನಡೆದದ್ದು, ಉದ್ಯಾನನಗರಿಯಲ್ಲಿ. ಮಲ್ಲೇಶ್ವರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಾವಲಂಭಿ ಮಹಿಳೆಯರು ಮಾತ್ರವಲ್ಲ, ಎಲ್ಲಾ ವರ್ಗದ ಮಾನಿನಿಯರು ನಾನಾ ಬಗೆಯಲ್ಲಿ ಸೀರೆ ಉಟ್ಟು ಓಡಿ ಸಂಭ್ರಮಿಸಿದರು.

ತನೈರಾ ಆಶ್ರಯದಲ್ಲಿ ನಡೆದ ಈ ಸ್ಯಾರಿ ರನ್‌ ಕಾರ್ಯಕ್ರಮದಲ್ಲಿ ಸುಮಾರು ೨೦೦೦ ಮಹಿಳೆಯರು ಒಟ್ಟಾಗಿ ಪಾಲ್ಗೊಂಡಿದ್ದು ದಾಖಲೆ ಎನ್ನಬಹುದು.

ಆತ್ಮವಿಶ್ವಾಸ ಮೂಡಿಸಿದ ಸೀರೆ ರನ್‌

“ಈ ಸೀರೆ ರನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮನಸ್ಸಿಗೆ ಖುಷಿ ಕೊಟ್ಟದ್ದು ಮಾತ್ರವಲ್ಲ, ನಾನಾ ಕ್ಷೇತ್ರದಲ್ಲಿರುವ ಮಹಿಳೆಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿತು’ ಎಂದು ಭಾಗವಹಿಸಿದ್ದ ರಮಾ, ಶ್ವೇತಾ ಹಾಗೂ ರಂಜನಿ ಹೇಳಿದರು.

ಸೀರೆಯಲ್ಲಿ ಕಂಡ ಆರ್‌ಜೆ ಪಟಾಕಿ ಶ್ರುತಿ :

ಆರ್‌ಜೆ ಪಟಾಕಿ ಶ್ರುತಿ ಕೂಡ ಡಿಫರೆಂಟ್‌ ಲುಕ್‌ನಲ್ಲಿ ಸೀರೆ ಉಟ್ಟು ನೆರೆದಿದ್ದ ಮಹಿಳೆಯೊರೊಂದಿಗೆ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು. ಸೀರೆ ಎಂದರೇ ಕೇವಲ ಟ್ರೆಡಿಷನಲ್‌ ಉಡುಪಲ್ಲ, ಇದನ್ನು ಉಟ್ಟೇ ಎಲ್ಲವನ್ನೂ ಸಂಭಾಳಿಸಬಹುದು ಎಂಬುದನ್ನು ಪ್ರೂವ್‌ ಮಾಡಿದರು.

ಗೃಹಿಣಿಯರು, ವರ್ಕಿಂಗ್‌ ವುಮೆನ್‌, ಟೀನೇಜ್‌ ಹುಡುಗಿಯರು ಸೇರಿದಂತೆ ಎಲ್ಲಾ ವರ್ಗದ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿದ್ದು ವಿಶೇ‍ಷವಾಗಿತ್ತು.

ಸಚಿವರಾದ ಸುಧಾಕರ್‌, ಅದಮ್ಯ ಸಂಸ್ಥೆಯ ಸಂಸ್ಥಾಪಕರಾದ ತೇಜಸ್ವಿನಿ ಆನಂತಕುಮಾರ್‌, ಎಸಿಪಿ ಶಶಿಕಲಾ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Run with saree | ಸೀರೆ ಉಟ್ಟು ನಾರಿಯರ ಓಟ, ಮಲ್ಲೇಶ್ವರಂನಲ್ಲಿ ಮಿಂಚಿದ ಸಾವಿರಾರು ಮಹಿಳೆಯರು

Exit mobile version