ಬೆಂಗಳೂರು: ಷೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಲು ಟಿಪ್ಸ್ ನೀಡುವುದಾಗಿ ಸಾರ್ವಜನಿಕರಿಗೆ ಕರೆಮಾಡಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇಕ್‌ಇನ್ ಪ್ರಾಫಿಟ್ ಎಂಬ ಕಂಪನಿಯ ಹೆಸರಲ್ಲಿ ಸಾರ್ವಜನಿಕರಿಗೆ ಷೇರು ಮಾರುಕಟ್ಟೆಯ ಬಗ್ಗೆ ಸುಳ್ಳು ಟಿಪ್ಸ್ ನೀಡಲಾಗಿತ್ತು ಹಾಗೂ ಸಾರ್ವಜನಿಕಾರಿಂದ ಹಣ ವಸೂಲಿ ಮಾಡಲಾಗಿತ್ತು. ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಕಂಪನಿ ಸ್ಟಾಕ್ ಮಾರ್ಕೆಟ್‌ನಲ್ಲಿ ಪರಿಣಿತ ಕಂಪನಿಯಾಗಿದೆ ಹಾಗೂ ಹಣ ನೀಡಿದರೆ ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಲು ಟಿಪ್ಸ್ ನೀಡುವುದಾಗಿ ತಿಳಿಸಲಾಗಿತ್ತು. ಇದರಿಂದ ಸಾರ್ವಜನಿಕರು ಹೆಚ್ಚಿನ ಲಾಭ ಗಳಿಸಬಹುದಾಗಿ ನಂಬಿಸಿದ್ದರು. ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಹಣ ಪಡೆದಿದ್ದ ಆರೋಪಿಗಳು, ವಂಚಿಸಿದ್ದರು ಎನ್ನಲಾಗಿದೆ.
ಫೆಬ್ರುವರಿ 14ರಂದು ಈ ಕಂಪನಿಯಿಂದ ವಂಚನೆಗೊಳಗಾದವರಿಂದ ದೂರು ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ಹಣ ಹೂಡಲು ಟಿಪ್ಸ್ ಪಡೆಯುವ ಕಾರಣಕ್ಕೆ ಹಂತ ಹಂತವಾಗಿ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗಿತ್ತು ಎಂದು ತಿಳಿಸಲಾಗಿತ್ತು. ಒಟ್ಟು ₹2,15,000 ಆರೋಪಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಅಲ್ಲದೆ, ಅವರು ನೀಡಿದ ಟಿಪ್ಸ್ ಇಂದು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿದ ಸುಮಾರು ₹2,50,000 ನಷ್ಟವಾಗಿತ್ತು ಎಂದು ಪಿರ್ಯಾದಾರರು ತಿಳಿಸಿದ್ದಾರೆ. ಈಗ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬLಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಗ್ರಾಮದಲ್ಲಿ ಪತ್ತೆ ಮಾಡಿ ಸೆರೆ ಹಿಡಿದಿದ್ದಾರೆ. ಈ ಆರೋಪಿಗಳು ಹೀಗೇ ಅನೇಕ ಸಾರ್ವಜನಿಕರಿಗೆ ವಂಚಿಸಿ ಹಣಗಳಿಸಿದ್ದಾರೆ ಎಂದು ವಿಚಾರಣೆಯ ಸಂದರ್ಭದಲ್ಲಿ ತಿಳಿದು ಬಂದಿರುತ್ತದೆ. ಇದೇ ವೇಳೆ ಪೊಲೀಸರು ಆರೋಪಿಗಳಿಗೆ ಸಂಬಂಧಿಸಿದ 3 ಮೊಬೈಲ್ ಫೋನ್‍ಗಳು ಮತ್ತು 6 ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರಾದ ಡಾ. ಅನೂಪ್ ಎ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆದಿರುತ್ತದೆ. ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಗಳಾದ ಸಂತೋಷ್ ರಾಮ್. ಆರ್ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀರಾಮನ್ ಗೌಡ, ಪಿ.ಎಸ್.ಐ ಶ್ರೀ ಓಬಲೇಶ್ ಹೆಚ್.ಸಿ. ಶ್ರೀಮತಿ ಶಶಿಕಲಾ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ದಸ್ತಗಿರಿಯಾದ ಆರೊಪಿಗಳ ವಿವರ:
1) ರೆಹಮತ್‍ಉಲ್ಲಾ.ಕೆ.ಸ್ ಬಿನ್ ಶೇಖ್‍ಶವಾಲಿ.ಕೆ
ವಯಸ್ಸು 29
2) ಎಂ.ಸಿ.ಮಲ್ಲಯ್ಯಸ್ವಾಮಿ ಬಿನ್ ಲೇಟ್ ಎಂ.ಇರಿಸ್ವಾಮಿ,
ವಯಸ್ಸು : 29
3) ಸಿ.ದುರ್ಗಪ್ಪ ಬಿನ್ ಮಲ್ಲಿಖಾರ್ಜುನ,
ವಯಸ್ಸು: 28
ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್‌ಐಆರ್