ಬೆಂಗಳೂರು: ಸರಿಯಾಗಿ ಗಮನ ಕೊಟ್ಟು ಓದುತ್ತಿಲ್ಲ (Study), ಹೋಮ್ ವರ್ಕ್ (Home Work) ಮಾಡುತ್ತಿಲ್ಲ ಎಂದು ತಾಯಿ (mother) ಬೈದದ್ದಕ್ಕೆ ಮಗ (Son) ಮುನಿಸಿಕೊಂಡು ಮನೆ ಬಿಟ್ಟು ಹೋದ (student missing) ಪ್ರಕರಣ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ.
ನಂದಿನಿ ಲೇಔಟ್ ಜೈಮಾರುತಿ ನಗರದಲ್ಲಿ ಘಟನೆ ನಡೆದಿದ್ದು, 8 ವರ್ಷದ ಮಿಥುನ್ ಮನೆ ಬಿಟ್ಟು ಹೋಗಿರುವ ಬಾಲಕ. ಈತ ದೇವರಾಜ್ ಹಾಗೂ ಜಯಲಕ್ಷ್ಮಿ ಎಂಬ ದಂಪತಿಯ ಮಗ. ಮಿಥುನ್ ಹೋಮ್ ವರ್ಕ್, ಕ್ಲಾಸ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂದು ಈತನ ಸ್ಕೂಲ್ ಡೈರಿಯಲ್ಲಿ ಮಿಸ್ ಬರೆದು ಕಳಿಸಿದ್ದರು.
ಮಿಥುನ್ ತಾಯಿ ಇದರಿಂದ ಅಸಮಾಧಾನಗೊಂಡು, ರಾತ್ರಿ ಎಲ್ಲ ಹೋಮ್ ವರ್ಕ್ ಬರೆದು ಮುಗಿಸಿ ಮಲಗಬೇಕು ಎಂದು ಕಟ್ಟುನಿಟ್ಟು ಮಾಡಿದ್ದರು. ಇದರಿಂದ ನೊಂದು ಮಿಥುನ್ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ನಿನ್ನೆ ಸಂಜೆ 6 ಗಂಟೆಗೆ ಈತ ಮನೆ ಬಿಟ್ಟು ತೆರಳಿದ್ದಾನೆ. ಸ್ಕೂಲ್‌ನಿಂದ ಬಂದ ಕೂಡಲೇ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೊರಟುಹೋಗಿದ್ದಾನೆ. ಬಾಲಕನಿಗಾಗಿ ಎಲ್ಲಾ ಕಡೆ ಹುಡುಕಿದ ಪೋಷಕರು ಬಳಿಕ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್ ಚಿಟ್!
ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಚಾರ್ಜ್‌ಶೀಟ್ (SIT Charge Sheet) ಸಲ್ಲಿಸಿದೆ. ಇದರಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರನ್ನು ಹೊಣೆಯಾಗಿಸಲಾಗಿದೆ. ಆದರೆ ಮಾಜಿ ಸಚಿವ ನಾಗೇಂದ್ರ (EX Minister Nagendra) ಹೆಸರೇ ಇಲ್ಲ!
ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಎಸ್‌ಐಟಿ (SIT) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದೆ. ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈ ಬಿಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಗರಣದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಅವರು ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್.ಪಿ ಬರೆದಿರುವ ಡೆತ್ ನೋಟ್‌ನಲ್ಲಿ ಹೆಸರು ಹೇಳದೆ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ಎದ್ದ ಪರಿಣಾಮ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆತ್ಮಹತ್ಯೆಗೆ ಪ್ರಚೋದನೆಗೆ ನಿಗಮದ ಎಂಡಿ ಪದ್ಮನಾಭ್ ಮತ್ತು ಪರುಶರಾಮ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿ ಒತ್ತಡ ನೀಡಿದ್ದಾರೆ ಎಂದು ಇಬ್ಬರ ಹೆಸರು ಉಲ್ಲೇಖಿಸಿದ್ದಾರೆ. ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಚಂದ್ರಶೇಖರ್ ಪಡೆದಿರುವುದಾಗಿ, ಪ್ರಕರಣ ಬೆಳಕಿಗೆ ಬಂದರೆ ಸಿಕ್ಕಿಬೀಳುವ ಭಯದಿಂದಾಗಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪದ್ಮನಾಭ್ ಅವರು ಗೋವಾ ಮತ್ತು ಹೈದ್ರಾಬಾದ್‌ಗೆ ಕರೆದುಕೊಂಡು ಹೋಗಿ ಒತ್ತಡ ಹಾಕಿದ್ದರು. ನೀನು ಹಣ ಪಡೆದಿದ್ದೀಯ, ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯಾ ಎಂದು ಬೆದರಿಕೆ ಹಾಕಿದ್ದರು. ನಿನ್ನ ವಿರುದ್ಧ ನಾನೇ ದೂರು ಕೊಡ್ತೀನಿ ಎಂದು ಚಂದ್ರಶೇಖರ್‌ಗೆ ಬೆದರಿಸಿದ್ದರು. ಹೀಗಾಗಿ ಪದ್ಮನಾಭ್ ಮತ್ತು ಪರುಶರಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್. ಅಶೋಕ್