Site icon Vistara News

Acid Attack | ಪತ್ನಿಗೆ ಆ್ಯಸಿಡ್ ಎರಚಿ ಕೊಲೆ ಪ್ರಕರಣ: ಐದು ವರ್ಷಗಳ ನಂತರ ಸಿಕ್ಕಿತು ನ್ಯಾಯ

acid attack

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಆ್ಯಸಿಡ್ ಪ್ರಕರಣಗಳ ಕುರಿತು ಆತಂಕ ವ್ಯಕ್ತವಾಗಿರುವಾಗಲೆ, ಐದು ವರ್ಷ ಹಿಂದೆ ನಡೆದ ಪ್ರಕರಣವೊಂದರಲ್ಲಿ ನ್ಯಾಯಾಲಯ ತೀರ್ಪು ನೀಡಿ ಆರೋಪಿಗೆ ಶಿಕ್ಷೆ ವಿಧಿಸಿರುವುದು ಆಶಾಭಾವನೆ ಮೂಡಿಸಿದೆ. ಪತ್ನಿ ರೂಪವತಿ ಎಂದು ಅನುಮಾನಿಸಿ 2017ರಲ್ಲಿ ಆ್ಯಸಿಡ್ ಎರಚಿದ (Acid Attack) ಪ್ರಕರಣಕ್ಕೆ ಸಂಬಂಧಿಸಿದಂತೆ‌ 44ನೇ ಸಿಸಿಹೆಚ್ ನ್ಯಾಯಾಲಯ ಇದೀಗ ಆರೋಪಿಗೆ ಕಠಿಣ ಶಿಕೆಯನ್ನು ವಿಧಿಸಿದೆ.

2017ರ (ಸೆ.29)ರಂದು ಪತಿ ಚಿನ್ನೇಗೌಡ ಎಂಬಾತ ಪತ್ನಿ ಮಂಜುಳಾ ಮೇಲೆ ಆ್ಯಸಿಡ್ ಎರಚಿದ್ದ. ಆಕೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿ ಮೇಲೆ ಚಿನ್ನೇಗೌಡ ಅನುಮಾನ ಪಡುತ್ತಿದ್ದ. ನೀನು ಸುಂದರವಾಗಿದ್ದಕ್ಕೆ ತಾನೆ ಹೀಗೆ ದೈಹಿಕ‌ ಸಂಪರ್ಕ ಬೆಳೆಸುತ್ತಿಯಾ? ಎಂದು ಹಲ್ಲೆ ಮಾಡಿ ಆ್ಯಸಿಡ್ ಎರಚಿದ್ದ. ಮಂಜುಳಾ ಇದರಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ನಂತರ ಕೆಂಪೇಗೌಡ ನಗರ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್‌ಪೆಕ್ಟರ್‌ ವಿಶ್ವಾಸ್ ಅವರು ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದರು.

ಇದನ್ನೂ ಓದಿ | Acid Attack | ದಾಳಿಯಾಗಿ 11 ದಿನ: ಆರೋಪಿ ನಾಗೇಶ್‌ ಬದುಕಿದ್ದಾನಾ ಅಥವಾ…?

ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದು ವರ್ಷದ ಬಳಿಕ ನ್ಯಾಯಾಲಯ, ಆರೋಪಿ ಚಿನ್ನೇಗೌಡನಿಗೆ ಕಠಿಣ ಶಿಕ್ಷೆ ವಿಧಿಸಿದೆ. ಕೊಲೆ ಮಾಡಿದ್ದಕ್ಕೆ ಜಿವಾವಧಿ ಶಿಕ್ಷೆ, ಆ್ಯಸಿಡ್ ಎರಚಿದ ಅಪರಾಧಕ್ಕೆ 10 ವರ್ಷ ಜೈಲು ಮತ್ತು 10 ಸಾವಿರ ದಂಡ ಹಾಗೂ ವರದಕ್ಷಿಣೆ ಕಿರುಕುಳಕ್ಕೆ 2 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. 44ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ಮಂಜುನಾಥ್ ಅವರಿಂದ ಮಹತ್ತರ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | ಆ್ಯಸಿಡ್ ದಾಳಿ ಕ್ರೂರಿಗಳ ವಿರುದ್ಧ ಬರಲಿದೆ ಹೊಸ ಕಾನೂನು ಅಸ್ತ್ರ

Exit mobile version